ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ವಾಷಿಂಗ್ಟನ್: ಪ್ರಪಂಚದಾದ್ಯಂತ ಮಾರಣಾಂತಿಕ ಕೊರೋನಾ ವೈರಸ್ ಮರಣ ಮೃದಂಗ ಭಾರಿಸುತ್ತಿದ್ದು, ಒಂದು ವಾರದಲ್ಲಿ ಸೋಂಕಿತರ ಸಂಖ್ಯೆ 8 ಲಕ್ಷ ದಾಟಿದೆ.
ಜಗತ್ತಿನ ಪ್ರಮುಖ ರಾಷ್ಟ್ರಗಳನ್ನು ಈ ಸೋಂಕು ಇನ್ನಿಲ್ಲದಂತೆ ಕಾಡುತ್ತಿದ್ದು, ಅಮೆರಿಕದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 865 ಮಂದಿ ಬಲಿಯಾಗಿದ್ದಾರೆ.
ಈ ಕುರಿತಂತೆ ಜಾನ್ಸ್ ಹೋಪ್ ಕಿನ್ಸ್ ವಿವಿ ಅಂಕಿ ಅಂಶ ಪ್ರಕಟಿಸಿದ್ದು, ಇದರಂತೆ, ಜಗತ್ತಿನಾದ್ಯಂತ ಕೋವಿಡ್ 19 ವೈರಸ್ ಪೀಡಿತರ ಸಂಖ್ಯೆ ಕಳೆದ ಒಂದು ವಾರದಲ್ಲಿ 8,58,785ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 42,151ಕ್ಕೆ ಏರಿಕೆಯಾಗಿದೆ.
Get in Touch With Us info@kalpa.news Whatsapp: 9481252093
Discussion about this post