ಕಲ್ಪ ಮೀಡಿಯಾ ಹೌಸ್ | ಅಹಮದಾಬಾದ್ |
ಪ್ರಧಾನಿ ನರೇಂದ್ರ ಮೋದಿ ಅವರು ತಾವು ನಡೆಸುತ್ತಿದ್ದ ಬೃಹತ್ ರೋಡ್ ಶೋನಲ್ಲಿ ಸಿಲುಕಿದ್ದ ಆ್ಯಂಬುಲೆನ್ಸ್’ಗೆ ದಾರಿ ಮಾಡಿಕೊಡುವ ಸಲುವಾಗಿ ಬಿಗಿ ಭದ್ರತಾ ಪ್ರೋಟೋಕಾಲ್ ಮೀರಿದ ಘಟನೆ ನಡೆದಿದೆ.
ಸೆ.30ರಂದು ಇಲ್ಲಿ ಪ್ರಧಾನಿಯವರ ಬೃಹತ್ ರೋಡ್ ಶೋ ನಡೆಯುತ್ತಿತ್ತು. ಮೆರವಣಿಗೆ ಅಹಮದಾಬಾದ್’ನಿಂದ ಗಾಂಧಿನಗರಕ್ಕೆ ತೆರಳುವ ಮಾರ್ಗದಲ್ಲಿ ಸಾಗತ್ತಿತ್ತು. ಮೋದಿಯವರ ಭದ್ರತಾ ಪಡೆ ಹಾಗೂ ಬೆಂಗಾವಲು ಪಡೆ ಬಿಗಿ ಭದ್ರತೆ ಒದಗಿಸಿತ್ತು.

ಈ ಕುರಿತ ವೀಡಿಯೋವೊಂದನ್ನು ಗುಜರಾತ್ ಬಿಜೆಪಿ ಮತ್ತು ನಂತರ ಸುದ್ದಿ ಸಂಸ್ಥೆ ಹಂಚಿಕೊಂಡಿದೆ. ಆ್ಯಂಬುಲೆನ್ಸ್ ತೆರಳಿದ ನಂತರ ಪ್ರಧಾನಿಯವರು ರೋಡ್ ಶೋ ಮುಂದುವರೆಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post