ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಯಾದಗಿರಿ: ಶ್ರೀ ಮರಡಿ ಮಲ್ಲಿಕಾರ್ಜುನ ಜಾತ್ರೆಯ ಅಂಗವಾಗಿ ಶ್ರೀ ಶೈಲ ಜಗದ್ಗುರು ಡಾ. ಶಿವಾಚಾರ್ಯರ ಅಡ್ಡಪಲ್ಲಕ್ಕಿ ಮಹೋತ್ಸವ ಅದ್ದೂರಿಯಾಗಿ ಸಂಪನ್ನಗೊಂಡಿದೆ.
ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಲಕ್ಷ್ಮೀಪುರ ಶ್ರೀ ಮರಡಿ ಮಲ್ಲಿಕಾರ್ಜುನ ದನಗಳ ಜಾತ್ರೆಯ ಅಂಗವಾಗಿ ಶ್ರೀ ಶೈಲ ಮಹಾಪೀಠ ಇವರ ಬಿಜಾಸಪುರದ ಬಸವಣ್ಣ ದೇವಸ್ಥಾನದ ಗುಡಿಯಿಂದ ಶ್ರೀ ಗಿರಿಯ ಮಠದವರೆಗೆ ಬಾಜಾ ಭಜಂತ್ರಿ ಕಳಸ ಕುಂಭ ಸೇವೆಯೊಂದಿಗೆ ಅಡ್ಡಪಲ್ಲಕ್ಕಿ ಮಹೋತ್ಸವ ಜರುಗಿತು. ಶ್ರೀಮಠದ ಕಟ್ಟಡ ಕಾಮಗಾರಿಗೆ ಲೋಕಾರ್ಪಣೆ ಹಾಗೂ ಸಿಸಿ ರಸ್ತೆ ಉದ್ಘಾಟನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಬಸವಲಿಂಗ ದೇವರು, ವಿಶ್ವಾರಾಧ್ಯ ದೇವರು, ಸುರೇಶ ಸಜ್ಜನ್ ಪ್ರಕಾಶ್ ಯಾದವ್, ಪ್ರಕಾಶ್ ಕನ್ನಳ್ಳಿ ಪಾರಪ್ಪ ಗುತ್ತೇದಾರ್, ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.
Get in Touch With Us info@kalpa.news Whatsapp: 9481252093
Discussion about this post