ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನಾಗತಿಹಳ್ಳಿ ಚಂದ್ರಶೇಖರ್… ಕನ್ನಡ ಚಿತ್ರರಂಗ ಕಂಡ ಅಪರೂಪದ, ಬಹುಮುಖಿ, ಪ್ರತಿಭಾವಂತ ನಿರ್ದೇಶಕ, ನಟ, ಸಾಹಿತಿ… ಇತ್ಯಾದಿ.. ಇಂತಹ ನಾಗತಿಹಳ್ಳಿ ಟೆಂಟ್ ಸಿನಿಮಾ ಶಾಲೆಯ ಯುವ ರಂಗಭೂಮಿ ನಿರ್ದೇಶಕ ಶಿವ ಕಾಗವಾಡೆ ಅವರೇ ನಮ್ಮ ಇಂದಿನ ಲೇಖನದ ಕೇಂದ್ರ ಬಿಂದು.
ಇತ್ತೀಚೆಗೆ ನಾಗತಿಹಳ್ಳಿ ಟೆಂಟ್ ಸಿನಿಮಾ ಶಾಲೆಯ ವಿದ್ಯಾರ್ಥಿಗಳು ಬೆಂಗಳೂರು ಬನಶಂಕರಿ 2ನೆಯ ಹಂತದ ಬಿಡಿಎ ಕಾಂಪ್ಲೆಕ್ಸ್ ಮುಂಭಾಗದಲ್ಲಿ ಜಾತಿ ಎಂಬ ಬೀದಿ ನಾಟಕವನ್ನು 20 ನಿಮಿಷಗಳ ಕಾಲ ಪ್ರದರ್ಶಿಸಿದರು. ಇದನ್ನು ಕುತೂಹಲದಿಂದ ವೀಕ್ಷಿಸಿದ ನಂತರ ಇದರ ಯುವ ರಂಗ ನಿರ್ದೇಶಕ ಶಿವ ಕಾಗವಾಡೆ ಅವರೊಂದಿಗೆ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಿಟ್’ಚಾಟ್ ನಡೆಸಿದೆ. ಈ ಪ್ರತಿಭಾನ್ವಿತ ಯುವ ನಿರ್ದೇಶಕರ ಕುರಿತಾಗಿನ ಕಿರು ಮಾಹಿತಿ ಲೇಖನ ಹೀಗಿದೆ.
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಚಿಂಚಲಿ ಗ್ರಾಮದ ನಿವಾಸಿ ಬಾಳೇಶ್ ಕಾಗವಾಡೆ ಹಾಗೂ ಸುವರ್ಣ ದಂಪತಿ ಪುತ್ರರತ್ನರೇ ಶಿವ.
4 ವರ್ಷದಿಂದ ನಾಗತಿಹಳ್ಳಿ ಟೆಂಟ್ ಸಿನಿಮಾ ಶಾಲೆಯ ವಿದ್ಯಾರ್ಥಿಗಳಿಗೆ ರಂಗಭೂಮಿಯ ತರಬೇತಿ ನೀಡಿ ಉತ್ತಮ ನಾಟಕಕಾರಾಗಿ ರೂಪಿಸುತ್ತಿರುವ ರಂಗ ನಿರ್ದೇಶಕ ಶಿವ ಅವರು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರದರ್ಶನ ಕಲೆಗಳಲ್ಲಿ ಎಂಎ ಪದವಿ ಪಡೆದಿದ್ದಾರೆ.
ರಂಗಭೂಮಿಯಲ್ಲಿ 13 ವರ್ಷಗಳಿಂದ ವರುಷಗಳಿಂದ ಸೇವೆ ಸಲ್ಲಿಸುತ್ತಿರುವ ಇವರು ರಚಿಸಿ ಮತ್ತು ನಿರ್ದೇಶಿಸಿರುವ ಒಂದು ಅರ್ಥಗರ್ಭಿತ ಸಂದೇಶ ಸಾರುವ ಜಾತಿ ಎಂಬ ನಾಟಕದ ಬಗ್ಗೆ ಅವರದೇ ಆದ ಮಾತುಗಳಲ್ಲಿ ನಾಟಕದ ಆಶಯವನ್ನು ಹೀಗೆನ್ನುತ್ತಾರೆ: ನಾವೆಲ್ಲರೂ ಜಾತಿ, ಧರ್ಮ, ಗಡಿಯನ್ನು ದಾಟಿ ಮನುಷ್ಯರಾಗೋಣ. ಮನುಷ್ಯ ಜಾತಿ ತಾನೊಂದೆ ವಲಂ.
ಇವರು ಪರಿಸರ ಸಂರಕ್ಷಣೆ, ಜಲ ಸಂರಕ್ಷಣೆ, ಪ್ಲಾಸ್ಟಿಕ್ ಬಳಕೆ ನಿಷೇಧ ಮಾಡುವಂತೆ ಇನ್ನೂ ಹಲವು ವಿಶಿಷ್ಟ ಬಗೆಯ ಸಾಮಾಜಿಕ ಚಿಂತನೆಯ ನಾಟಕವನ್ನು ರಚಿಸಿ ಹಾಗೂ ನಿರ್ದೇಶಿಸಿ ನಾಗತಿಹಳ್ಳಿ ಟೆಂಟ್ ಸಿನಿಮಾ ಶಾಲೆಯ ವಿದ್ಯಾರ್ಥಿಗಳಿಂದ ಬೀದಿ ನಾಟಕವನ್ನು ನಿರಂತರವಾಗಿ ಮಾಡಿಸುತ್ತಾ ಬಂದಿರುವ ರಂಗಭೂಮಿಯ ಯುವ ನಿರ್ದೇಶಕರ ಸಾಲಿನಲ್ಲಿ ನಿಲ್ಲುತ್ತಾರೆ.
ಪ್ರಸ್ತುತ ರಂಗಭೂಮಿಯಲ್ಲಿ ಯುವ ಜನಾಂಗದವರು ಸಕ್ರಿಯವಾಗಿ ಹೆಚ್ಚಿನ ಸಂಖ್ಯೆಯಲ್ಲಿ ತೊಡುಗಿಸಿ ಕೊಳ್ಳುತ್ತಿದ್ದಾರೆ. ನಗರಗಳಲ್ಲಿ ರಂಗಭೂಮಿಯ ಬಗ್ಗೆ ಯುವಕರಲ್ಲಿ ಆಸಕ್ತಿ ಹೆಚ್ಚಾಗುತ್ತಿದ್ದು, ಇದಕ್ಕೆ ಮುಖ್ಯ ಕಾರಣ ಧಾರಾವಾಹಿ ಮತ್ತು ಸಿನಿಮಾಗಳ ಆಕರ್ಷಣೆ ಎನ್ನುತ್ತಾರೆ ಶಿವಾ ಕಾಗವಾಡೆ.
ಸದಾ ಸಮಾಜಕ್ಕೆ ಒಳ್ಳೆಯ ಸಂದೇಶ ಸಾರುವ ನಾಟಕ ಬರೆದು ಪ್ರದರ್ಶನ ಮಾಡುವ ತುಡಿತ ಇವರದ್ದು…
ಶರಣಯ ಶರಣು ಶರಣು ಶರಣು
ಊರೂರಿ ಗೊಂದೊಂದು ಕೆರೆ ಕಟ್ಟೆ ಕಟ್ಟಿದ
ಕಟ್ಟೆಯ ಮೇಲೆ ಅತಿಯ ಮರ ನೆಟ್ಟ
ಅವರ ಪಾದಕ್ಕೆ ಶರಣು
ಅವರು ಮುಟ್ಟಿದ ಮಣ್ಣಿಗೆ ಶರಣು ಎನ್ನುವ ರಂಗ ಗೀತೆಯೊಂದಿಗೆ ಆರಂಭವಾಗುತ್ತದೆ, ಜಾತಿ ವ್ಯವಸ್ಥೆಯ ಬಗ್ಗೆ ಬೀದಿ ಬದಿಗಳಲ್ಲಿ ಬೀದಿ ನಾಟಕ!! ಒಟ್ಟಿನಲ್ಲಿ ಹೇಳುವುದಾದರೆ ಸರ್ವರು ಸಮಾನ ಎಂಬುದು ಜಗತ್ತಿಗೆ ಪರಿಚಯಿಸುವುದು ಈ ನಾಟಕದಲ್ಲಿ ಅರ್ಥಗರ್ಭಿತವಾಗಿ ಬಿಂಬಿಸುವ ಪುಟ್ಟ ಪ್ರಯತ್ನವನ್ನು ಜಾತಿ ನಾಟಕದ ಮೂಲಕ ಮಾಡಿದ್ದಾರೆ.
Get in Touch With Us info@kalpa.news Whatsapp: 9481252093
Discussion about this post