ಕಲ್ಪ ಮೀಡಿಯಾ ಹೌಸ್ | ಕಾನೂನು ಕಲ್ಪ – ಪ್ರಶ್ನೋತ್ತರ ಅಂಕಣ |
ಹದಿನಾಲ್ಕು ವರ್ಷಗಳ ಹಿಂದೆ ಅಹ್ಮದಾಬಾದಿನಲ್ಲಿ #Admedabad ರಸ್ತೆ ಅಪಘಾತದಲ್ಲಿ ತನ್ನ ಎಡಗಾಲು ಕಳೆದುಕೊಂಡು ವೈವಾಹಿಕ ಅವಕಾಶದಿಂದ ವಂಚಿತಳಾದ ಮಹಿಳೆಗೆ ಗುಜರಾತ್ ಹೈಕೋರ್ಟ್ ಹೆಚ್ಚುವರಿ ಪರಿಹಾರ ನೀಡುವಂತೆ ಆದೇಶಿಸಿದೆ.
2011ನೇ ಇಸವಿಯಲ್ಲಿ ಪ್ರಾಥಮಿಕ ಶಿಕ್ಷಕರ ಸರ್ಟಿಫಿಕೇಟ್ ಕೋರ್ಸ್ ಅಧ್ಯಯನ ನಡೆಸುತ್ತಿದ್ದ 19 ವರ್ಷ ವಯಸ್ಸಿನ ಜಿಗಿಶ ಪಟೇಲ್ ಅಹ್ಮದಾಬಾದ್ ಮುನಿಸಿಪಾಲ್ ಟ್ರಾನ್ಸ್ಪೋರ್ಟ್ ಸರ್ವಿಸ್ ಬಸ್’ನಿಂದ ಕೆಳಗಿಳಿಯುವಾಗ ಬಸ್ ಏಕಾಏಕಿ ಚಲಿಸಿದ್ದರಿಂದ ಕೆಳಗೆ ಬಿದ್ದಿದ್ದರು. ಬಸ್ ನ ಚಕ್ರ ಅವರ ಎಡಗಾಲ ಮೇಲೆ ಹರಿದಿದ್ದರಿಂದ ಅವರು ಗಾಯಗೊಂಡಿದ್ದರು. ನಂತರ ಅವರ ಕಾಲನ್ನು ಕತ್ತರಿಸಿ ತೆಗೆಯಲಾಗಿತ್ತು.
ಗಾಯಗೊಂಡ ಮಹಿಳೆ, ಬಸ್ ಚಾಲಕನ ನಿರ್ಲಕ್ಷವೇ ಅಪಘಾತಕ್ಕೆ ಕಾರಣವೆಂದು ಆರೋಪಿಸಿ ಬಸ್ ಸೇವೆ ನೀಡುತ್ತಿದ್ದ ಸಾರಿಗೆ ಕಂಟ್ರಾಕ್ಟರ್ ಹಾಗು ವಾಹನದ ವಿಮಾ ಸಂಸ್ಥೆಯ #Insurance ವಿರುದ್ಧ ಪರಿಹಾರಕ್ಕೆ ದಾವೆ ಹೂಡಿದ್ದರು. ವಿಚಾರಣಾ ನ್ಯಾಯಾಲಯ 2019ನೇ ಇಸವಿಯಲ್ಲಿ 11.96 ಲಕ್ಷ ರೂಪಾಯಿ ಪರಿಹಾರವನ್ನು ವಾರ್ಷಿಕ 9 ಪರ್ಸೆಂಟ್ ಬಡ್ಡಿಯೊಂದಿಗೆ ಗಾಯಾಳು ಮಹಿಳೆಗೆ ನೀಡಬೇಕೆಂದು ಆದೇಶಿಸಿತ್ತು.
ಪರಿಹಾರ ಮೊತ್ತ ಹೆಚ್ಚಿಸುವಂತೆ ಗಾಯಳು ಮಹಿಳೆ ಗುಜರಾತ್ ಹೈಕೋರ್ಟ್ ಮೊರೆ ಹೋಗಿದ್ದರು. ಮೇಲ್ಮನವಿದಾರ ಮಹಿಳೆ ಪರ ವಕೀಲರು, ಅಪಘಾತದಿಂದ ಕಾಲು ಕಳೆದುಕೊಂಡಿರುವುದರಿಂದ ಗಾಯಳು ಮಹಿಳೆಯ ವಿವಾಹ ಅವಕಾಶದ ಮೇಲೆ ಅದು ಅಡ್ಡ ಪರಿಣಾಮ ಬೀರುತ್ತಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ಮಹಿಳೆಗೆ ಅಳವಡಿಸಿರುವ ಕೃತಕ ಕಾಲು ಪ್ರತಿ ಮೂರು ವರ್ಷಕ್ಕೊಮ್ಮೆ ಬದಲಾಯಿಸಲು ಅಪಾರ ಹಣ ಖರ್ಚು ಮಾಡಬೇಕಾಗುತ್ತದೆ ಎಂಬ ಅಂಶವನ್ನು ನ್ಯಾಯಾಲಯದ ಗಮನಕ್ಕೆ ತರಲಾಗಿತ್ತು.
ಎರಡೂ ಕಡೆಯ ವಾದ ಆಲಿಸಿದ ಹೈಕೋರ್ಟ್, ನೊಂದ ಮಹಿಳಿಗೆ ಮದುವೆ ಅವಕಾಶದಿಂದ ವಂಚಿತಳಾಗಿರುವುದಕ್ಕೆ ಮೂರು ಲಕ್ಷ ರೂಪಾಯಿ ಸೇರಿದಂತೆ 7.15 ಲಕ್ಷ ರೂಪಾಯಿ ಹೆಚ್ಚುವರಿ ಪರಿಹಾರ ನೀಡುವಂತೆ ಆದೇಶಿಸಿದೆ.
“ಅಪಘಾತ ನಡೆದಾಗ ಗಾಯಾಳು ಮಹಿಳೆಗೆ 19 ವರ್ಷ ವಯಸ್ಸು. ಅಪಘಾತದಲ್ಲಿ ಆಕೆ ಎಡಗಾಲು ಕಳೆದುಕೊಳ್ಳಬೇಕಾಯಿತು ಹಾಗು ಇದು ವಿವಾಹದ ಅವಕಾಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ,” ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಆತ್ಮೀಯ ಓದುಗರೇ,
ಕಲ್ಪ ಮೀಡಿಯಾ ಹೌಸ್(ರಿ.) ಅಡಿಯಲ್ಲಿ ಪ್ರಕಟವಾಗುತ್ತಿರುನ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದಲ್ಲಿ ನಮ್ಮ ಓದುಗರಿಗಾಗಿ `ಕಾನೂನು ಕಲ್ಪ’ ಎಂಬ ಹೊಸ ಅಂಕಣವನ್ನು ಆರಂಭಿಸಲಾಗಿದ್ದು, ಪ್ರತಿ ಶುಕ್ರವಾರ ಪ್ರಕಟವಾಗಲಿದೆ. ಶಿವಮೊಗ್ಗ-ಭದ್ರಾವತಿಯ ಖ್ಯಾತ ವಕೀಲರು ಹಾಗೂ ಹಿರಿಯ ಪತ್ರಕರ್ತರೂ ಆಗಿರುವ ಶ್ರೀ ವೀರೇಂದ್ರ ಪಿ.ಎಂ. ಅವರು ಯಾವುದೇ ರೀತಿಯ ಕಾನೂನು ಸಮಸ್ಯೆಗಳು, ಕಾನೂನಿನ ಕುರಿತಾಗಿನ ಮಾರ್ಗದರ್ಶನ ಮಾಡಲಿದ್ದಾರೆ. ಸಾರ್ವಜನಿಕರು ತಮಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದರೆ ನಮಗೆ ಕಳುಹಿಸಬಹುದು. ಆ ಪ್ರಶ್ನೆಗಳಿಗೆ ವಕೀಲರಾದ ಶ್ರೀ ವೀರೇಂದ್ರ ಪಿ.ಎಂ. ಅವರು ಉತ್ತರ ನೀಡಲಿದ್ದಾರೆ. ನಿಮ್ಮ ಪ್ರಶ್ನೆಗಳು ಸ್ಪಷ್ಟ, ಸ್ಪುಟ, ನೇರವಾಗಿರಲಿ.
ನಿಮ್ಮ ಪ್ರಶ್ನೆಗಳನ್ನು ಈ ಕೆಳಗಿನ ವಾಟ್ಸಪ್ ಸಂಖ್ಯೆ 9481252093 (ವಾಟ್ಸಪ್ ಮಾತ್ರ) ಅಥವಾ ಇ-ಮೇಲ್ info@kalpa.news ಗೆ ಕಳುಹಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















