No Result
View All Result
Hubballi railway Station Swacchata Pakhwada
English Articles

Hubballi Division : Swachhata Hi Seva and Swachhata Pakhwada–2026 Launched in

by kalpa News
September 18, 2026
0

Kalpa Media House  |  Hubballi   | The ‘Swachhata Hi Seva’ and ‘Swachhata Pakhwada–2026’ campaigns were launched today at SSS Hubballi...

Read moreDetails
swr mysuru division swacchata hi seva 2026 campaign

SWR : Mysuru Division Launches Swachhata Hi Seva 2026 Campaign

September 18, 2026
Teen Gang Rape Killed By 3 Minors Body Eaten By Dogs

Teen Gangraped, Killed by Minors in Delhi Body Eaten by Dogs

September 18, 2026
mysuru rss journey exhibition showcasing its history

A Century of RSS Through a Unique Exhibition

September 17, 2026
Mysuru say no to drugs walkathon dcp harsha students

BEDA BRO Should Be Everyone’s Goal : Mysuru DCP Priyamvada calls for Drug-Free Society

September 17, 2026
  • Advertise With Us
  • Grievances
  • About Us
  • Contact Us
Friday, September 18, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ಗಾಯತ್ರಿ ಮಂತ್ರದ ವಿಶೇಷತೆ ತಿಳಿಯದಿದ್ದರೆ ಜೀವನವೇ ವ್ಯರ್ಥ

ಕೇವಲ ‘ಸಿಡಿ ‘ಗಳಲ್ಲಿ ಲಭ್ಯವಿರುವ ‘ಓಂ ಭೂರ್ಭುವಸ್ವಃ….’ ಎಂಬ ಮಂತ್ರಕೇಳಿ ಅದನ್ನು ಪಠಿಸಿದರೆ ಅದು ಗಾಯತ್ರಿಯೂ ಆಗದು ಇನ್ಯಾವುದೇ ಹಾಡೂ ಆಗದು

kalpa News by kalpa News
December 24, 2018
in Army
0
Share on FacebookShare on TwitterShare on WhatsApp

ಮಂತ್ರಗಳಲ್ಲಿ ಗಾಯತ್ರೀ ಮಂತ್ರವೇ ರಾಜನು. ಅದರಲ್ಲೂ ಸವಿತೃ ಗಾಯತ್ರಿಗೆ ಅತಿಯಾದ ಬಲವೂ ಮಹತ್ವವೂ ಇದೆ. ಪ್ರತಿಯೊಂದು ದೇವತೆಗಳಿಗೂ ಗಾಯತ್ರಿಗಳಿವೆ. ಆದರೆ ಎಲ್ಲಾ ದೇವತಾ ಶಕ್ತಿ ಸೂರ್ಯನಲ್ಲೇ ಇರುವುದರಿಂದ ಈ ಸವಿತೃಗಾಯತ್ರಿ ಮಂತ್ರಗಳಲ್ಲಿ ರಾಜನು.

ಗಾಯತ್ರಿಯಲ್ಲಿ 24 ಅಕ್ಷರಗಳಿವೆ. ಇದು ಶಡ್ಜ ಸ್ಥಾಯಿ ಶ್ರುತಿಯಲ್ಲಿದೆ.ಗಾಯತ್ರಿಯು ಏಳು ಪ್ರಧಾನ ಛಂಧಸ್ಸುಗಳಲ್ಲಿ ಒಂದಾಗಿದೆ. ಇದರ ಅಭಿಮಾನಿ ದೇವತೆಯು ಅಗ್ನಿ ಪತ್ನಿ ಸ್ವಾಹಾ ದೇವಿ.

ಇತರ ಛಂದಸ್ಸುಗಳೆಂದರೆ, ಉಷ್ಣಿಕ್, ಅನುಷ್ಟುಪ್, ಬೃಹತಿ, ಪಂಕ್ತಿ, ತ್ರಿಷ್ಟುಪ್, ಜಗತೀ ಗಳು. ಇವುಗಳಿಗೆ ಕ್ರಮವಾಗಿ 28, 32, 36, 40, 44, 48 ಅಕ್ಷರಗಳು.
ಹಾಗೆಯೇ ಕ್ರಮವಾಗಿ ಋಷಭ ,ಗಾಂಧಾರ, ಮದ್ಯಮ, ಪಂಚಮ, ದೈವತ, ನಿಷಾದಗಳೆಂಬ ಸ್ಥಾಯಿ ಶೃತಿಗಳು.

ಅಭಿಮಾನಿ ದೇವತೆಗಳು ಕ್ರಮವಾಗಿ- ಸೂರ್ಯ ಪತ್ನಿ ಸಂಜ್ಞಾ, ಚಂದ್ರ ಪತ್ನಿ ರೋಹಿಣಿ, ಬೃಹಸ್ಪತಿ ಪತ್ನಿ ತಾರಾ, ಮಿತ್ರ ವರುಣ ಪತ್ನಿಯರು, ಇಂದ್ರ ಪತ್ನಿ ಶಚೀದೇವಿ, ಕೊನೆಯದ್ದಕ್ಕೆ ಸರ್ವ ದೇವತಾ ಸ್ತ್ರೀಯರು.

ಒಂದು ಲಕ್ಷ ಗಾಯತ್ರಿ ಜಪದಿಂದ ಪೂರ್ವಕೃತ ಸಮಸ್ತ ದೋಷ ನಿವಾರಣೆಯಾಗುತ್ತದೆ. ನಿಮಗೆ ಒಂದು ವಿವರಣೆ ಹೇಳಬೇಕೆಂದರೆ ಇದೊಂದು antivirus system. ಶಬ್ದದಿಂದ ನಾಡಿ ಕಂಪನ. ಕಂಪನದಿಂದ ನಾಡಿ ಜಾಗೃತಿಯಾಗುತ್ತದೆ. ಈ ಗಾಯತ್ರಿಯು ವಿದ್ಯುತ್ತಿಗಿಂತ ಹೆಚ್ಚು ಆವರ್ತನ ಉಳ್ಳದ್ದಾಗಿದೆ.

ಯಾವುದೇ ಶಬ್ದಕ್ಕೆ ಸೆಕುಂಡಿಗೆ 20 ಸಾವಿರಕ್ಕಿಂತ ಮೇಲ್ಪಟ್ಟು ಆವರ್ತನಗಳಿವೆ. ಆಗ ಈ ಗಾಯತ್ರಿ ಮಂತ್ರದ ಸಂಯೋಜನೆಯು ಸೆಕುಂಡಿಗೆ 11ಸಾವಿರ ಬಾರಿ ಆವರ್ತನೆಯಾಗುತ್ತದೆ.

ಇಂತಹ ಗಾಯತ್ರಿ ಮಂತ್ರವನ್ನು ಪಠಿಸಬೇಕಾದರೆ ಶರೀರ ಧಾರಣಾ ಶಕ್ತಿ ಬೇಕು. ಶೂದ್ರರು ಹೇಳಬಾರದು ಎಂದಿದೆ. ಶೂದ್ರ ಎಂದರೆ ಬ್ರಹ್ಮ ಜ್ಞಾನ ಪಡೆಯದವರು ಎಂದರ್ಥ. ಅಂದರೆ ಇಂತಹ ಮಂತ್ರದ ದುರುಪಯೋಗ ಪಡೆಯುವವರು ಆಗಬಾರದು ಎಂದರ್ಥ.ಉದಾ: ಪಾಕಿಸ್ಥಾನದಂತಹ ರಾಷ್ಟ್ರಕ್ಕೆ ಅಣುಬಾಂಬ್ ಹಕ್ಕು ನೀಡಿದರೆ ಏನಾದೀತು.? ಅದಕ್ಕಾಗಿ ಯೋಗ್ಯರು ಮಾತ್ರ ಪಠಿಸಬೇಕು ಎಂದಿದ್ದಾರೆ. ಇನ್ನೊಂದೆಡೆ ಅನಾಹುತವಾದಾಗ ಅದರ ಉಪಸಂಹಾರ ಮಾಡುವ ತಾಕತ್ತಿರಬೇಕು. ಮಹಾಭಾರತದಲ್ಲಿ ಅಶ್ವತ್ಥಾಮ ಮತ್ತು ಅರ್ಜುನರು ಪರಸ್ಪರ ಬ್ರಹ್ಮಾಸ್ತ್ರ ಪ್ರಯೋಗಿಸಿ ಅನಾಹುತವಾಯಿತು.ಕೊನೆಗೆ ವೇದವ್ಯಾಸರು ಬಂದು ಇಬ್ಬರಿಗೂ ಆ ಅಸ್ತ್ರವನ್ನು ಹಿಂದಕ್ಕೆ ತೆಗೆದುಕೊಳ್ಳಲು ಹೇಳುತ್ತಾರೆ. ಆದರೆ ಬ್ರಾಹ್ಮಣನಲ್ಲದ ಅರ್ಜುನನು ಹಿಂದಕ್ಕೆ ತೆಗೆದುಕೊಂಡರೂ, ಬ್ರಾಹ್ಮಣನಾದ ಅಶ್ವತ್ಥಾಮನಿಗೆ ಉಪಸಂಹಾರ ಗೊತ್ತಿರಲಿಲ್ಲ.

ವೇದವ್ಯಾಸರು ಅಶ್ವತ್ಥಾಮನಿಗೆ ‘ಛೀಮಾರಿ ‘ಹಾಕಿ ಕೃಷ್ಣನಿಗೆ ಪ್ರಾರ್ಥಿಸಿದಾಗ ಕೃಷ್ಣನೇ ತನ್ನ ಸುದರ್ಶನವನ್ನು ಕಳುಹಿಸಿ ಆ ಬ್ರಹ್ಮಾಸ್ತ್ರವನ್ನು ನಿಷ್ಕೃಯಗೊಳಿಸುತ್ತಾನೆ. ಇಲ್ಲಿ ಅಶ್ವತ್ಥಾಮನು ಶೂದ್ರತ್ವ ಪಡೆಯಬೇಕಾಗುತ್ತದೆ. ಪಠಿಸುವುದಕ್ಕೆ ಯಾರಿಗೂ ಜಾತಿ ಅಡ್ಡಿಯಾಗದು. ಆದರೆ ಬ್ರಹ್ಮತ್ವ ಇಲ್ಲದಿದ್ದಾಗ ಅದು ದುರುಪಯೋಗವಾದರೆ? ಅದಕ್ಕಾಗಿ ಈ ನಿಬಂಧನೆ ಹಾಕಿದ್ದಾರಷ್ಟೆ. . ಜಾತಿ ದ್ವೇಷದಿಂದಲೋ, ಪುರೋಹಿತರ ಕಾರುಬಾರದಿಂದಲೋ ಈಗ ಇಂತಹ ನಿಬಂಧನೆ ಇರಬಹುದು. ಆದರೆ ಆಗಿನ ನಿರ್ಬಂಧದ ರೂಪವೇ ಬೇರೆ. ಒಟ್ಟಿನಲ್ಲಿ ಗಾಯತ್ರಿ ಪಠಿಸಲು qualify ಆಗಬೇಕು. ಹೆಂಗಸರು ಹೇಳಬಾರದು ಎಂದಿದೆ. ಎಲ್ಲಿಯವರೆಗೆ ಸ್ತ್ರೀ ಗರ್ಭಧಾರಣೆ ಮಾಡುತ್ತಾಳೋ ಅಲ್ಲಿಯವರೆಗೆ ಹೇಳಬಾರದು.ಹೇಳಿದರೆ ವಿಕೃತ ಕಾಯವೋ, ಮನಸ್ಸೋ ಇರುವ ಶಿಶು ಜನನವಾಗುತ್ತದೆ. ಯಾವಾಗ ಸಂತಾನ ಬೇಕಾಗಿಲ್ಲವೋ ಆ ನಂತರ ಉಪದೇಶ ಪಡೆದು ಪಠಿಸಬಹುದು. ಪುರಾಣದಲ್ಲಿ ಸ್ತ್ರೀಯರು ಬ್ರಹ್ಮಾಸ್ತ್ರ ಪ್ರಯೋಗ ನಡೆಸಿದ ಉಲ್ಲೇಖಗಳಿವೆ.

ಗಾಯತ್ರಿ ಪಠಿಸಬೇಕಿದ್ದರೆ ಅಗ್ನಿ ಮೂಲಕ ಉಪದೇಶ ಬೇಕು. ಉಪನಯನದಲ್ಲಿ ನಡೆಯುವ ಅಗ್ನಿಕಾರ್ಯವೇ ಇದನ್ನು ಉಪದೇಶ ಪಡೆಯುವ ಮಾಧ್ಯಮ. ಯಾಕೆಂದರೆ ಇದರ ಅಭಿಮಾನಿ ದೇವತೆಯೇ ಅಗ್ನಿಪತ್ನಿ ಸ್ವಾಹಾ ದೇವಿ. ಗಾಯತ್ರಿ ಪಠಿಸುವುದಕ್ಕೆ ಮುಂಚೆ ಮತ್ತು ನಂತರ ಗಾಯತ್ರಿ ಧ್ಯಾನ ಮಾಡಬೇಕು. ಅಂಗನ್ಯಾಸಾದಿಗಳು ಬೇಕು. ಇದಕ್ಕೂ ಮೊದಲು ಆಸನ ಶುದ್ಧಿ, ಪ್ರಾಣಾಯಾಮಗಳನ್ನು ಮಾಡಬೇಕು. ಇದು ಗಾಯತ್ರಿ ಜಪದ ನಿಯಮ ಗಾಯತ್ರಿ ಮಂತ್ರಕ್ಕೆ ನಾಲ್ಕು ಋಷಿಗಳ ಶಾಪವಿದೆ. ಹಾಗಾಗಿ ಮಂತ್ರ ಜಪಕ್ಕೆ ಮುನ್ನ ಈ ಋಷಿಗಳ ಶಾಪ ವಿಮೋಚನಾ ಮಂತ್ರ ಹೇಳಬೇಕು. ಆ ಋಷಿ ಶಾಪಗಳೆಂದರೆ – ಬ್ರಹ್ಮ, ವಸಿಷ್ಠ, ವಿಶ್ವಾಮಿತ್ರ, ಶುಕ.

ವಿಶ್ವಾಮಿತ್ರರು ಈ ಮಂತ್ರ ದೃಷ್ಟಾರರು. ಹಾಗಾಗಿ ಈ ಪ್ರಕಾರದ ನಿಯಮವನ್ನು ಪಾಲಿಸಬಲ್ಲೆ ಎಂಬವರು ಗಾಯತ್ರಿ ಮಂತ್ರ ಪಠಿಸಬಹುದು. ಈ ನಿಯಮ ತಪ್ಪಿದರೆ ಮನೋವಿಕಾರಗಳು ಬಂದರೆ ಅಪಾಯವಾದೀತು ಎಂಬುದಕ್ಕಾಗಿಯೇ ಕೆಲ ನಿಬಂಧನೆ ಹಾಕಿದ್ದು ವಿನಃ ಮೇಲು ಜಾತಿ ಕೀಳು ಜಾತಿ ಎಂಬ ತಾರತಮ್ಯದಿಂದಲ್ಲ. ಇದರ ಮಂತ್ರ ದೃಷ್ಟಾರ ಜನ್ಮತಃ ಕ್ಷತ್ರಿಯ. ಬ್ರಾಹ್ಮಣನಲ್ಲ. ಆದರೆ ಸಾಧನೆಯಿಂದ ಬ್ರಹ್ಮತ್ವ ಪಡೆದವನು. ಸಾಧನೆ ಶ್ರದ್ಧೆ ಇದ್ದರೆ ಯಾರೂ ಬ್ರಹ್ಮತ್ವ ಪಡೆಯಬಹುದು ಎಂದು ತೋರಿಸಿಕೊಟ್ಟವರು ವಿಶ್ವಾಮಿತ್ರರು.

ಈಗ ಕೇವಲ ‘ಸಿಡಿ ‘ಗಳಲ್ಲಿ ಲಭ್ಯವಿರುವ ‘ಓಂ ಭೂರ್ಭುವಸ್ವಃ….’ ಎಂಬ ಮಂತ್ರಕೇಳಿ ಅದನ್ನು ಪಠಿಸಿದರೆ ಅದು ಗಾಯತ್ರಿಯೂ ಆಗದು ಇನ್ಯಾವುದೇ ಹಾಡೂ ಆಗದು. ಅವರು ಇದನ್ನು ಸೃಷ್ಟಿ ಮಾಡಿ ಲಾಭ ಮಾಡಿಕೊಂಡರಷ್ಟೆ. ನಿಯಮ ಪ್ರಕಾರ ಹೇಳಿದರೆ ಅದು ಇಡೀ ಬ್ರಹ್ಮಾಂಡವನ್ನೇ ಸ್ವಾಧೀನ ಪಡಿಸಿಕೊಳ್ಳುವಂತಹ ಮಹಾ ಮಂತ್ರವಾಗಿದೆ.

– ಪ್ರಕಾಶ್ ಅಮ್ಮಣ್ಣಾಯ

Tags: Gayatri MantraKannada ArticleKannadaNewsPrakash Ammannayaಗಾಯತ್ರಿ ಮಂತ್ರಪುರಾಣಪ್ರಕಾಶ್ ಅಮ್ಮಣ್ಣಾಯಬ್ರಹ್ಮಾಂಡವಸಿಷ್ಠವಿಶ್ವಾಮಿತ್ರ
Share198Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಕಚೇರಿ ಆರಂಭ

Next Post

ಐತಿಹಾಸಿಕ ವಿಶ್ವ ಹವ್ಯಕ ಸಮ್ಮೇಳನಕ್ಕೆ ನೀವೂ ಸಾಕ್ಷಿಯಾಗಿ

kalpa News

kalpa News

Next Post
ಐತಿಹಾಸಿಕ ವಿಶ್ವ ಹವ್ಯಕ ಸಮ್ಮೇಳನಕ್ಕೆ ನೀವೂ ಸಾಕ್ಷಿಯಾಗಿ

ಐತಿಹಾಸಿಕ ವಿಶ್ವ ಹವ್ಯಕ ಸಮ್ಮೇಳನಕ್ಕೆ ನೀವೂ ಸಾಕ್ಷಿಯಾಗಿ

Leave a Reply Cancel reply

Your email address will not be published. Required fields are marked *

No Result
View All Result
Hubballi railway Station Swacchata Pakhwada
English Articles

Hubballi Division : Swachhata Hi Seva and Swachhata Pakhwada–2026 Launched in

by kalpa News
September 18, 2026
0

Kalpa Media House  |  Hubballi   | The ‘Swachhata Hi Seva’ and ‘Swachhata Pakhwada–2026’ campaigns were launched today at SSS Hubballi...

Read moreDetails
swr mysuru division swacchata hi seva 2026 campaign

SWR : Mysuru Division Launches Swachhata Hi Seva 2026 Campaign

September 18, 2026
Teen Gang Rape Killed By 3 Minors Body Eaten By Dogs

Teen Gangraped, Killed by Minors in Delhi Body Eaten by Dogs

September 18, 2026
mysuru rss journey exhibition showcasing its history

A Century of RSS Through a Unique Exhibition

September 17, 2026
Mysuru say no to drugs walkathon dcp harsha students

BEDA BRO Should Be Everyone’s Goal : Mysuru DCP Priyamvada calls for Drug-Free Society

September 17, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL