Read - < 1 minute
ಶಿವಮೊಗ್ಗ, ಸೆ.೧೦: ದುರ್ಬಲ ಮನಸ್ಸಿನವರ ಜೊತೆ ಕಳಾಜಿಯಿಂದ ಸಂವಹನ ಬೆಳೆಸಿಕೊಳ್ಳಬೇಕು. ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಸಮೀಕ್ಷೆಯ ಪ್ರಕಾರ ಪ್ರತಿ ವರ್ಷ ೮,೦೦,೦೦೦ ಜನ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಪ್ರತಿ ೪೦ ಸೆಕೆಂಡಿಗೆ ಒಬ್ಬರಂತೆ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿರುವುದು ಅಘಾತಕಾರಿ ವಿಷಯ ಎಂದು ಖ್ಯಾತ ಮನೋವೈದ್ಯ ಡಾ. ಅಶೋಕ್ ಪೈ ಆತಂಕ ವ್ಯಕ್ತಪಡಿಸಿದರು.
ಸುಬ್ಬಯ್ಯ ವೈದ್ಯಕೀಯ ಕಾಲೇಜಿನಲ್ಲಿ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ೪೦ ಸೆಕೆಂಡಿಗೆ ಒಬ್ಬರಂತೆ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿರುವುದು ಅಘಾತಕಾರಿ ವಿಷಯ. ಆತ್ಮಹತ್ಯೆಯನ್ನು ತಡೆಗಟ್ಟುವ ದೃಷ್ಠಿಯಿಂದ ಪ್ರತಿ ವರ್ಷದ ಸೆಪ್ಟಂಬರ್ ೧೦ರಂದು ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನವನ್ನಾಗಿ ಆಚರಿಸಲಾಗುತ್ತದೆ. ಸಂಪರ್ಕ, ಸಂವಹನ, ಆರೈಕೆ ೨೦೧೬ರ ದ್ಯೇಯ ವಾಕ್ಯವನ್ನಾಗಿ ಘೋಷಿಸಲಾಗಿದೆ ಎಂದು ಪೈ ತಿಳಿಸಿಕೊಟ್ಟರು.
ಕಾಲೇಜಿನ ಡಾ. ಶುಭ್ರತಾ ಮಾತನಾಡಿ, ಕುಟುಂಬದವರು, ಸಹಪಾಠಿಗಳು, ಸಮಾಜ ಎಲ್ಲರೂ ಯಾರು ಆತ್ಮಹತ್ಯೆಗೆ ಬಲಿಯಾಗುವ ಪರಿಸ್ಥಿತಿಯನ್ನು ಎದುರಿಸುತ್ತಿರುತ್ತಾರೆಂದು ಸೂಕ್ಷ್ಮವಾಗಿ ಗಮನಿಸಬೇಕು. ಪ್ರತಿ ವ್ಯಕ್ತಿಯೂ ಆತ್ಮಹತ್ಯೆ ಮಾಡಿಕೊಳ್ಳಲು ತನ್ನದೇ ಆದ ಕಾರಣ ಹಾಗೂ ಪರಿಣಾಮಕಾರಿ ಘಟನೆಗಳನ್ನು ಹೊಂದಿರುತ್ತಾನೆ. ವ್ಯಕ್ತಿಯ ದುರ್ಬಲ ಮನಸ್ಸಿಗೆ ಧೈರ್ಯ ತುಂಬಿ ಬಗೆಹರಿಸದಿರುವ ಸಮಸ್ಯೆಗಳಿರುವುದಿಲ್ಲವೆಂದು ಪರಿಹಾರ ಮಾರ್ಗಗಳನ್ನು ನೀಡಬೇಕು. ಮಾನಸಿಕವಾಗಿ ಭದ್ರತೆಯನ್ನು ನೀಡುವುದು ಪ್ರತಿಯೊಬ್ಬರ ಜವಬ್ದಾರಿ ಎಂದರು.
Discussion about this post