ನವದೆಹಲಿ, ಅ.15: ಕಳ್ಳಸಾಗಣೆ ಸಿಗರೇಟ್ಗಳ ಬಳಕೆಯು ಭಾರತದಲ್ಲಿ ಕಳೆದ 10 ವರ್ಷಗಳಿಂದ ಗಂಭೀರ ಪ್ರಮಾಣದಲ್ಲಿ ಹೆಚ್ಚಾಗುತ್ತಿದ್ದು, ಶೇ.90ರಷ್ಟು ಅಂದರೆ 12.5-23.9 ಶತಕೋಟಿ ಸ್ಟೀಕ್ಟ್ಗಳನ್ನು ಧೂಮಪಾನಿಗಳು ಬಳಸಿದ್ದಾರೆ ಎಂದು ಹೊಸ ವರದಿಯೊಂದು ಹೇಳಿದೆ.
ಕಾನೂನುಬದ್ಧ ಸಿಗರೇಟ್ ಗಳ ಮೇಲೆ ಅಧಿಕ ತೆರಿಗೆಯಿಂದಾಗಿ ಶೇ. 74ರಷ್ಟು ಧೂಮಪಾನಿಗಳು ಅಗ್ಗದ ಬೆಲೆಯ ಕಳ್ಳಸಾಗಣೆ ಅಥವಾ ಅಕ್ರಮ ಸಿಗರೇಟ್ಗಳನ್ನು ಬಳಸುವ ಪ್ರವೃತ್ತಿ ಹೊಂದಿದ್ದಾರೆ ಎಂದು ವಾಣಿಜ್ಯ ಮಂಡಳಿ ಎಫ್ಐಸಿಸಿಐ ತನ್ನ ಇತ್ತೀಚಿನ ವರದಿಯಲ್ಲಿ ಬಹಿರಂಗಗೊಳಿಸಿದೆ.
ಧೂಮಪಾನಿಗಳಲ್ಲಿ ಶೇಕಡ 56ರಷ್ಟು ಮಂದಿ ಕಳ್ಳಸಾಗಣೆಯಾದ ವಿದೇಶಿ ಬ್ರಾಂಡ್ ಗಳ ಆಕರ್ಷಕ ಪ್ಯಾಕಿಂಗ್ ಇರುವ ಸಿಗರೇಟ್ ನತ್ತ ಮಾರು ಹೋಗಿದ್ದಾರೆ. ಕಳ್ಳಸಾಗಣೆಯಾದ ಅಥವಾ ಅಕ್ರಮವಾಗಿ ತಯಾರಾದ ಇಂಥ ಸಿಗರೇಟ್ ಗಳು ಶೇ. 85ರಷ್ಟು ಆರೋಗ್ಯ ಹಾನಿಕರ ಎಂಬ ಸಚಿತ್ರ ಇರುವ ಭಾರತೀಯ ನಿಬಂಧನೆಗಳನ್ನು ಉಲ್ಲಂಘಿಸುತ್ತವೆ ಎಂದು ಎಫ್ಐಸಿಸಿಐ ಕ್ಯಾಸ್ಕೇಡ್ (ಕಮಿಟಿ ಎಗೆನೆಸ್ಟ್ ಸ್ಮಗ್ಲಿಂಗ್ ಅಂಡ್ ಕೌಂಟರ್ಪೀಟಿಂಗ್ ಆಕ್ಟಿವಿಟೀಸ್ ಡಿಸ್ಟ್ರಾಯಿಂಗ್ ದಿ ಎಕೊನೊಮಿ) ವರದಿ ಹೇಳಿದೆ.
ಅನೇಕ ಧೂಮಪಾನಿಗಳು ಅಗ್ಗದ ಬೆಲೆಯ ಅಪಾಯಕಾರಿ ಸಿಗರೇಟ್ನತ್ತ ಆಕರ್ಷಿತರಾಗಿದ್ದು, ಅವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ನಕಲಿ, ಅಕ್ರಮ ಮತ್ತು ಕಳ್ಳಸಾಗಣೆ ಸಿಗರೇಟ್ ಗಳಿಂದಾಗಿ 2014ರಲ್ಲಿ ಸರ್ಕಾರಕ್ಕೆ 39,239 ಕೋಟಿ ರೂ.ಗಳ ನಷ್ಟ ಉಂಟಾಗಿದೆ.
Discussion about this post