ಕಲ್ಪ ಮೀಡಿಯಾ ಹೌಸ್ | ಬಾಗಲಕೋಟೆ |
ನಿಮ್ಮ ಹಣ ಯಾರಿಗೆ ಬೇಕು.. ನಮಗೆ ಬೇಡ.. ತೆಗೆದುಕೊಳ್ಳಿ…
ಹೀಗೆಂದು ಮಾಜಿ ಸಿಎಂ ಸಿದ್ದರಾಮಯ್ಯ Siddaramaiah ಕೊಟ್ಟ ಹಣವನ್ನು ಮುಸ್ಲಿಂ ಮಹಿಳೆಯೊಬ್ಬರು ಅವರ ಕಾರಿನ ಮೇಲೆಯೇ ಎಸೆದಿರುವ ಘಟನೆ ಜಿಲ್ಲೆಯ ಬದಾಮಿಯಲ್ಲಿ ನಡೆದಿದೆ.
ಕೆರೂರು ಪಟ್ಟಣ ಹಿಂಸಾಚಾರದಲ್ಲಿ ಹಲವು ಮಂದಿ ಗಾಯಗೊಂಡಿದ್ದರು. ಈ ರೀತಿ ಗಾಯಗೊಂಡವರನ್ನು ವಿಚಾರಿಸಿ ಪರಿಹಾರ ನೀಡಲು ಬದಾಮಿ ಕ್ಷೇತ್ರದ ಶಾಸಕರೂ ಆಗಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತೆರಳಿದ್ದರು. ಗಲಭೆಯಲ್ಲಿ ಗಾಯಗೊಂಡಿದ್ದ ಹನೀಫ್, ರಫೀಕ್ ಸೇರಿದಂತೆ ನಾಲ್ವರಿಗೆ ಸಾಂತ್ವನ ಹೇಳಿ ತಲಾ 50 ಸಾವಿರ ರೂಪಾಯಿಗಳಂತೆ ಎರಡು ಲಕ್ಷ ರೂಪಾಯಿ ನೀಡಿದ್ದರು.

Also read: ನಾಳೆ ಶಿವಮೊಗ್ಗ ಗೋಪಾಳ ಸುತ್ತ ಕರೆಂಟ್ ಕಟ್!
ಯುವತಿಯರನ್ನು ಚುಡಾಯಿಸಿದ ಕಾರಣಕ್ಕೆ ಜುಲೈ 6ರಂದು ಹಿಂದೂ-ಮುಸ್ಲಿಂ ಕೋಮಿನ ಯುವಕರ ಮಧ್ಯೆ ಗಲಾಟೆ ಆರಂಭವಾಗಿ ಅದು ಘರ್ಷಣೆ ಹಿಂಸಾಚಾರಕ್ಕೆ ತಿರುಗಿ ಕೆರೂರು ಪಟ್ಟಣದಲ್ಲಿ ಸೆಕ್ಷನ್ 144 ಜಾರಿ ಮಾಡಿ ನಿಷೇಧಾಜ್ಞೆ ಹೇರಲಾಗಿತ್ತು.











Discussion about this post