ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪಠ್ಯಪುಸ್ತಕ ಸಮಿತಿ ಪರಿಷ್ಕರಣೆ ಸಮಿತಿಯಲ್ಲಿದ್ದ ನನ್ನನ್ನು ಸತ್ಯ ಹೇಳಬೇಕು ಎಂಬ ಕಾರಣಕ್ಕಾಗಿ ಹೊರಗಿಟ್ಟರು ಎಂಬ ಸ್ಪೋಟಕ ಹೇಳಿಕೆಯನ್ನು ಖ್ಯಾತ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ S L Byrappa ಹೇಳಿದ್ದಾರೆ.
ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿರುವ ಅವರು, ಇಂದಿರಾಗಾಂಧಿ ಅವಧಿಯಲ್ಲೂ ಸಹ ಪಠ್ಯಪುಸ್ತಕವನ್ನು ಪರಿಷ್ಕರಣೆ ಮಾಡಲಾಗಿತ್ತು. ನನ್ನನ್ನೂ ಸೇರಿದಂತೆ ೫ ಜನರ ಸಮಿತಿ ರಚನೆ ಮಾಡಲಾಗಿತ್ತು. ಆದರೆ, ಪರಿಷ್ಕರಣೆಯಲ್ಲಿ ಸತ್ಯವನ್ನೇ ಹೇಳಬೇಕು ಎಂದು ಒತ್ತಡ ಹೇರಿದೆ. ಆಗ, ನನ್ನನ್ನು ಸಮಿತಿಯಿಂದ ಹೊರಗಿಡಲಾಯಿತು. ಕಮ್ಯುನಿಸ್ಟ್ ಸಿದ್ದಾಂತಗಳನ್ನು ಅಂದು ಪಠ್ಯದಲ್ಲಿ ಸೇರಿಸಲಾಯಿತು. ಇದನ್ನು ಅಂದಿನ ಕಾಂಗ್ರೆಸ್ ಸರ್ಕಾರ ಒಪ್ಪಿಕೊಂಡಿತ್ತು ಎಂಬ ಆಘಾತಕಾರಿ ಮಾಹಿತಿಯನ್ನು ಅವರು ಹೊರಹಾಕಿದ್ದಾರೆ.
ವಾಜಪೇಯಿ ಅವರ ಅವಧಿಯಲ್ಲೂ ಸಹ ಪಠ್ಯಪುಸ್ತಕ ಪರಿಷ್ಕರಣೆ ಮಾಡಲಾಗಿತ್ತು. ಅಂದೂ ಸಹ ಹಲವು ಸಾಹಿತಿಗಳು ಪ್ರಶಸ್ತಿ ವಾಪ್ಸಿ ಅಭಿಯಾನ ಮಾಡಿದ್ದರು. ಆಗ ಪ್ರಶಸ್ತಿ ಜೊತೆ ಅದರ ಹಣವನ್ನೂ ಸಹ ವಾಪಾಸ್ ನೀಡಿ ಎಂದು ನಾನು ಹೇಳಿದ್ದೆ. ಆಗ ೧೫ ದಿನದಲ್ಲಿ ಎಲ್ಲರೂ ಸುಮ್ಮನಾದರು ಎಂದು ಹಳೆಯ ವಿಚಾರಕ್ಕೆ ಮತ್ತೆ ಕುಟುಕಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post