ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ದಕ್ಷಿಣ ಭಾರತದ ಪ್ರಮುಖ ಜವಳಿ ಶೋರೂಮ್‌ಗಳಲ್ಲಿ ಒಂದಾದ ಡ್ರೆಸ್ ಸರ್ಕಲ್ ವಿಶಾಲವಾದ ಮೂರು ಅಂತಸ್ತಿನ ಶಾಪಿಂಗ್ ಮಾಲ್ ಅನ್ನು ಮಿಸ್ ಕರ್ನಾಟಕ 2015 ಮತ್ತು ಕೆಜಿಎಫ್ ಖ್ಯಾತಿಯ ನಟಿ ಶ್ರೀನಿಧಿ ಶೆಟ್ಟಿ ಉದ್ಘಾಟಿಸಿದರು.
1994 ರಲ್ಲಿ ಕರ್ನೂಲ್‌ನಲ್ಲಿ ಆರಂಭವಾದ ಡ್ರೆಸ್ ಸರ್ಕಲ್, ಬಳ್ಳಾರಿ, ಕರ್ನೂಲ್, ಕಡಪ ಮತ್ತು ಅನಂತಪುರದಲ್ಲಿ ತನ್ನ ಶೋರೂಮ್‌ಗಳೊಂದಿಗೆ ಆಂಧ್ರಪ್ರದೇಶದಲ್ಲಿ ಬಲವಾದ ಅಸ್ತಿತ್ವವನ್ನು ಹೊಂದಿದೆ. ಬಳ್ಳಾರಿಯಲ್ಲಿ ಶಾಪಿಂಗ್ ಮಾಲ್ ತೆರೆಯುವುದರೊಂದಿಗೆ ಇದು ಕರ್ನಾಟಕದ ಫ್ಯಾಶನ್ ಲೋಕಕ್ಕೆ ಪ್ರವೇಶಿಸಿತು. ಬೆಂಗಳೂರಿನಲ್ಲಿ ಹೊಸ ಮಳಿಗೆಯನ್ನು ಪ್ರಾರಂಭಿಸುವುದರೊಂದಿಗೆ, ಕರ್ನಾಟಕದ ಗ್ರಾಹಕರ ಫ್ಯಾಷನ್ ಆದ್ಯತೆಗಳನ್ನು ಪೂರೈಸುವ ಗುರಿಯನ್ನು ಡ್ರೆಸ್ ಸರ್ಕಲ್ ಹೊಂದಿದೆ.

Also read: ಅಪಾರ ಪ್ರಮಾಣದ ನೀರು ಪೋಲು: ಪೈಪ್ ದುರಸ್ತಿಗೆ ಸ್ಥಳೀಯರ ಆಗ್ರಹ
ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರೀಯ ಚಲನಚಿತ್ರ ತಾರೆ ಶ್ರೀನಿಧಿ ಶೆಟ್ಟಿ, “ನಾನು ಫ್ಯಾಶನ್ ಬಟ್ಟೆಗಳಲ್ಲಿ ಹೊಸ ಟ್ರೆಂಡ್‌ಗಳನ್ನು ನೋಡುತ್ತೇನೆ. ಆಶ್ಚರ್ಯಕರವಾಗಿ ಉತ್ತಮ ಬೆಲೆಯಲ್ಲಿ ಸುಂದರವಾದ ಕಲೆಕ್ಷನ್ ಅನ್ನು ನೋಡಲು ನನಗೆ ಸಂತೋಷವಾಗಿದೆ. ದೇಶದ ವಿವಿಧ ಭಾಗಗಳಿಂದ ಪಡೆದ ವಿಶೇಷ ಸೀರೆಗಳು ಮತ್ತು ಸಿದ್ಧ ಉಡುಪುಗಳ ವಿವಿಧ ವಿಭಾಗಗಳನ್ನು ಹೊಂದಿರುವ ಈ ಸ್ಥಳಕ್ಕೆ ಬೆಂಗಳೂರಿಗರು ಖಂಡಿತವಾಗಿಯೂ ಭೇಟಿ ನೀಡಬೇಕು” ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಡ್ರೆಸ್ ಸರ್ಕಲ್ ನಿರ್ದೇಶಕ ಹರೀಶ್ ರೆಡ್ಡಿ ಉಪಸ್ಥಿತರಿದ್ದರು. ಬೆಂಗಳೂರಿನ ವೈಟ್‌ಫೀಲ್ಡ್ ಮುಖ್ಯ ರಸ್ತೆಯಲ್ಲಿ ಹೊಸದಾಗಿ ಡ್ರೆಸ್ ಸರ್ಕಲ್ ತೆರೆಯಲಾಗಿದೆ.










Discussion about this post