ಕಲ್ಪ ಮೀಡಿಯಾ ಹೌಸ್ | ಬೆಳಗಾವಿ |
ಪ್ರಸಕ್ತ ಸಾಲಿನ ಎಸ್’ಎಸ್’ಎಲ್’ಸಿ ಪರೀಕ್ಷೆಯಲ್ಲಿ SSLC Exam Result ಬೆಳಗಾವಿಯ ಕಿವುಡು ಮಕ್ಕಳ ಸರ್ಕಾರಿ ಶಾಲೆಯ 11 ವಿದ್ಯಾರ್ಥಿನಿಯರಲ್ಲಿ ಎಂಟು ಜನ ಎ ಗ್ರೇಡ್, 2 ಜನ ಬಿ ಗ್ರೇಡ್, ಒಬ್ಬರು ಸಿ ಗ್ರೇಡ್ ಪಡೆದು ಉತ್ತೀರ್ಣರಾಗಿದ್ದಾರೆ.
ಕುಮಾರಿ ಪ್ರತಿಭಾ ಹಣ ಮಂತ ಹೊನ್ನಾಪುರ ಶೇ.87 ಪ್ರಥಮ, ಕುಮಾರಿ ಪವಿತ್ರ ಪರಪ್ಪ ಕಾಪ್ಸೆ ಶೇ.86 ದ್ವಿತೀಯ ಕುಮಾರಿ ರುದ್ರಾಕ್ಷಿ ಸಂಗೊಳ್ಳಿ ಶೇ.85 ತೃತೀಯ ಸ್ಥಾನವನ್ನು ಪಡೆದು ಶಾಲೆಗೆ ಕೀರ್ತೀ ತಂದಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಎ.ಎಂ. ಬಸವರಾಜು, ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ನಾಮದೇವ್ ಬಿಲ್ಕರ್, ಶಾಲೆಯ ಪ್ರಭಾರಿ ಅಧೀಕ್ಷಕರಾದ ಡಿ.ಎನ್. ನಂದೇಶ್ವರ ಹಾಗೂ ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರು ಮಕ್ಕಳ ಯಶಸ್ಸಿಗೆ ಹರ್ಷ ವ್ಯಕ್ತಪಡಿಸಿ ಶುಭಕೋರಿದ್ದಾರೆ.
Also read: ಬಳ್ಳಾರಿ ಸೇರಿ ರಾಜ್ಯದಲ್ಲಿ ಮತ್ತೆ ಗಣಿಗಾರಿಕೆಗೆ ಶೀಘ್ರವೇ ಶರತ್ತುಬದ್ಧ ಅನುಮತಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post