ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಅಕ್ಷಯ ತೃತೀಯ ಶ್ರೀ ಬಸವ ಜಯಂತಿ ಉತ್ಸವವನ್ನು ತಾಲೂಕು ಅಖಿಲ ಭಾರತ ವೀರಶೈವ ಮಹಾಸಭಾ ಯುವಘಟಕ ಇವರ ಆಶ್ರಯದಲ್ಲಿ ಬಿಳಿಕಿ ಮಠದಲ್ಲಿ ಆಚರಿಸಲಾಯಿತು.
ರಾಚೋಟೆಶ್ವರ ಶಿವಾಚಾರ್ಯ ಸ್ವಾಮಿಯವರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು. ಗ್ರಾಮದ ದಿವಂಗತ ಗೋವಿಂದರಾವ್ ಇವರ ಧರ್ಮಪತ್ನಿ ಶತಾಯುಷಿ ಸುಂದರ ಬಾಯಿ ಇವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.
ಶ್ರೀ ಮರುಳಸಿದ್ದೇಶ್ವರ ಜನಕಲ್ಯಾಣ ಟ್ರಸ್ಟಿನ ಅಧ್ಯಕ್ಷ ಸಿದ್ದಲಿಂಗಯ್ಯ, ಅಖಿಲಭಾರತ ವೀರಶೈವ ಮಹಾಸಭಾ ಯುವ ಘಟಕದ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಕೂಡ್ಲಿಗೆರೆ ರುದ್ರೇಶ್, ಖಜಾಂಚಿ ರಮೇಶ್, ಪ್ರಧಾನ ಕಾರ್ಯದರ್ಶಿ ಆನಂದ್. ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ವಸಂತ ಹಾಗೂ ದೂದ ನಾಯಕ್ ಗ್ರಾಮ, ಪಂಚಾಯಿತಿ ಸದಸ್ಯರಾದ ಶಿವಕುಮಾರ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಲಂಬೋದರ, ಅರ್ಜುನ್ ರಾವ್, ಲೋಕೇಶ್ ರಾವ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post