ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಕಳೆದೆರಡು ದಿನಗಳಿಂದ ಸುರಿದ ನಿರಂತರ ಅಕಾಲಿಕ ಮಳೆಯಿಂದಾಗಿ ತಾಲೂಕಿನ ಎಲ್ಲ, ಹಳ್ಳ, ಕೊಳ್ಳಗಳು, ಕೆರೆಗಳು, ಕಾಲುವೆಗಳು ನೀರಿನಿಂದ ತುಂಬಿ ಹರಿದು ಅಕ್ಕಪಕ್ಕದ ಹೊಲ, ಗದ್ದೆ, ತೋಟದ ಬೆಳೆಗಳಿಗೆ ನಷ್ಟವುಂಟು ಮಾಡಿದೆ.
ಕವಲುಗುಂದಿ, ಸುಣ್ಣದಹಳ್ಳಿ, ಉಜ್ಜಿನಿಪುರ, ಸುರಗಿತೋಪು ಮುಂತಾದ ತಗ್ಗುಪ್ರದೇಶಗಳಿಗೆ ನೀರು ನುಗ್ಗಿದ್ದು, ಅಲ್ಲಿನ ಕೆಲವು ಮನೆಗಳೊಳಲಗೆ ನೀರು ನುಗ್ಗಿದೆ.
ಮಳೆ ಕಾರಣ ತೊಂದರೆಗೊಳಗಾದ ಪ್ರದೇಶಗಳಲ್ಲಿ ಯಾವುದೇ ಹಾನಿ ಕಂಡುಬಂದಲ್ಲಿ ತಾಲುಕು ಕಚೇರಿಯಲ್ಲಿ ಸಹಾಯವಾಣಿ ಕೇಂದ್ರವನ್ನು ಆರಂಭಿಸಿದ್ದು, ತುರ್ತು ಸನ್ನಿವೇಶಗಳಲ್ಲಿ ಮಾಹಿತಿ ನೀಡಲು ಹೊಳೆಹೊನ್ನೂರು, ಕೂಡ್ಲಿಗೆರೆ, ಆನವೇರಿ, ಕಲ್ಲಿಹಾಳ್ ಮುಂತಾದೆಡೆ ನ್ಯೂಡೆಲ್ ಅಧಿಕಾರಿಗಳನ್ನು ನೇಮಿಸಿದೆ.
ಅರೆಬಿಳಚಿ ಗ್ರಾಮದ ಮುಖ್ಯರಸ್ತೆಯಲ್ಲಿ ನೀರು ತುಂಬಿ ಸರ್ಕಾರಿ ಶಾಲೆಯ ಆವರಣದೊಳಗೆ ಹರಿದಿದೆ. ಮಳೆಗಾಲ ಇನ್ನೂ ದೂರವಿದ್ದರೂ ಸಹ ಬೇಸಿಗೆಯಲ್ಲೇ ಸುರಿದ ಭಾರೀ ಮಳೆಯಿಂದಾಗ ಗದ್ದೆಗಳಲ್ಲಿ ಕೊಯ್ಲಿಗೆ ಬಂದು ನಿಂತಿದ್ದ ಭತ್ತದ ಬೆಳೆಗಳು ನೀರಿನಲ್ಲಿ ಮುಳುಗಿ ಬೆಳೆಹಾನಿಯಾಗಿದೆ.
ತಹಸೀಲ್ದಾರ್ ಪ್ರದೀಪ್ ಅವರ ತಂಡ ತಾಲುಕಿನ ವಿವಿಧ ಭಾಗಗಳಿಗೆ ಭೇಟಿ ನೀಡಿ ಅಕಾಲಿಕ ಅತಿವೃಷ್ಟಿಯಿಂದಾದ ಹಾನಿಯನ್ನು ವೀಕ್ಷಿಸಿದರು.
Also read: ಕೆರೆ ಪ್ರದೇಶದಲ್ಲಿ ಮನೆ ಕಟ್ಟಲು ಅವಕಾಶವಿಲ್ಲ: ಬೆಂಗಳೂರಿನ ಎಂಟು ವಲಯಗಳಿಗೆ ತಲಾ 1 ಟಾಸ್ಕ್ ಫೋರ್ಸ್
ತಹಶೀಲ್ದಾರ್ ಪ್ರಕಾರ ಹೋಬಳಿ ಪ್ರದೇಶಗಳಾದ ಕೂಡ್ಲಿಗೆರೆ ವ್ಯಾಪ್ತಿಯಲ್ಲಿ 6, ಹೊಳೆಹೊನ್ನೂರು 3, ಕಸಬಗಳಲ್ಲಿ 25 ಮನೆಗಳು, ಕಸಬದಲ್ಲಿ 11 ಮನೆಗಳು ಸೇರಿದಂತೆ ಒಟ್ಟು 42 ಮನೆಗಳು ಭಾಗಶಃ ಹಾನಿಗೊಳಗಾಗಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news













Discussion about this post