ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಗ್ರಾಮೀಣ ಜನರ ಆರೋಗ್ಯ ಜಾಗೃತಿಗೆ ಉಚಿತ ಆರೋಗ್ಯ ಶಿಬಿರಗಳು ಸಹಕಾರಿಯಾಗಿವೆ ಎಂದು ಖ್ಯಾತ ಮಕ್ಕಳ ತಜ್ಞ ಡಾ. ಧನಂಜಯ್ ಸರ್ಜಿ Dr. Dhananjaya Sarji ಹೇಳಿದ್ದಾರೆ.
ಇಂದು ಭದ್ರಾವತಿ ತಾಲೂಕಿನ ಗೊಂದಿ ಗ್ರಾಮದ ಶ್ರೀ ಪಾಂಡುರಂಗ ಸಿದ್ಧಾರೂಢ ಸಾಧಕಾಶ್ರಮದಲ್ಲಿ, ಶಿವಮೊಗ್ಗದ ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯ, ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಭಾವಸಾರ ವಿಜನ್ ಇಂಡಿಯಾ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಎನ್.ಎಸ್.ಎಸ್. ಶಿಬಿರದ ಮೂಲಕ ಈ ಗ್ರಾಮದ ಜನರಿಗೆ ಆರೋಗ್ಯ ಭಾಗ್ಯ ಕಲ್ಪಿಸಿರುವುದು, ಕುವೆಂಪು ಶತಮಾನೋತ್ಸವ ಕಾಲೇಜಿನ ಕಾರ್ಯ ಶ್ಲಾಘನೀಯ. ಉತ್ತಮ ಚಿಕಿತ್ಸೆಗಾಗಿ ಬಹುದೂರ ಹೋಗಬೇಕೆಂಬ ಆತಂಕ ಇದೀಗ ದೂರವಾಗಿದ್ದು, ಎಲ್ಲವೂ ವ್ಯವಸ್ಥಿತವಾಗಿ ಚಿಕಿತ್ಸೆ ನೀಡುವ ತಜ್ಞ ವೈದ್ಯರಿರುವ ನಮ್ಮ ಸರ್ಜಿ ಆಸ್ಪತ್ರೆ ಮುಂಚೂಣಿಯಲ್ಲಿದೆ ಎಂದರು.

Also read: ಎಸಿಬಿ ಸಂಸ್ಥೆಯನ್ನೇ ರದ್ದುಗೊಳಿಸಿದ ಹೈಕೋರ್ಟ್: ಲೋಕಾಯುಕ್ತವನ್ನು ಬಲಪಡಿಸಲು ಸೂಚನೆ
ವೈದ್ಯರು ಮತ್ತು ಗುರುಗಳಿಗೆ ಗೌರವ ನೀಡುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿ. ಇದು ಮುಂದಿನ ಭವಿಷ್ಯಕ್ಕೂ ಬೆಳೆಸಿಕೊಂಡು ಹೋಗಬೇಕಾಗಿದ್ದು, ಈ ಪ್ರವೃತ್ತಿ ಬೆಳೆಸಿಕೊಳ್ಳಿ. ಮೊದಲು ನಿದ್ದೆಯನ್ನು ಕೆಡಿಸುವ ಕನಸು ಕಾಣಬೇಕು. ದೊಡ್ಡ ಕನಸು ಕಾಣುವ ಜೊತೆಗೆ ಏನಾದರೂ ಸಾಧಿಸಬೇಕೆನ್ನುವ ಹುಚ್ಚುತನ ಬೆಳೆಸಿಕೊಂಡು, ದೊಡ್ಡ ವ್ಯಕ್ತಿಯಾಗುವ ದೊಡ್ಡ ಕನಸು ಕಾಣಿ. ಏನಾದರೂ ಸಾಧಿಸಲು ನಿರ್ಧರಿಸಿ, ಅದನ್ನು ನಿಮ್ಮವರಿಗೆ ತಿಳಿಸಿ ಸತತ ಪ್ರಯತ್ನ ಮಾಡಬೇಕು. ಜೊತೆಗೆ ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು, ಪರರಿಗಲ್ಲ, ಪರಮಾತ್ಮನಿಗೆ ಎಂಬ ಧೇಯ ರೂಢಿಸಿಕೊಳ್ಳಿ ಎಂದು ತಿಳಿಸಿದರು.

ದಂತ ವೈದ್ಯ ಡಾ. ಅರುಣ್ ಮಾತನಾಡಿ, ಹಲ್ಲಿನ ಶುಚಿತ್ವದ ಬಗ್ಗೆ ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿದರು. ಹಲ್ಲು, ತುಟಿ, ಗಲ್ಲ ಪರೀಕ್ಷೆ ಮಾಡಿಕೊಳ್ಳುತ್ತಿರಬೇಕು, ಬಾಯಿ ಶುಚಿಯಿದ್ದರೆ, ಮೈ-ಮನಸ್ಸು ಶುಚಿಯಾಗಿರುತ್ತದೆ ಎಂದು ಕಿವಿಮಾತು ಎಂದರು.
ಶಿಬಿರದಲ್ಲಿ 60ಕ್ಕೂ ಹೆಚ್ಚು ಬಿ.ಎಡ್. ವಿದ್ಯಾರ್ಥಿಗಳು ಹಾಗೂ ನೂರಾರು ಗ್ರಾಮಸ್ಥರಿಗೆ ಬಿಪಿ, ಸಕ್ಕರೆ ಖಾಯಿಲೆ, ಇ.ಸಿ.ಜಿ., ದಂತ ರೋಗ ಚಿಕಿತ್ಸೆ ನಡೆಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕರಾದ ಉಂಬ್ಳೆಬೈಲು ಮೋಹನ್ ವಹಿಸಿದ್ದರು.










Discussion about this post