ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಸಮಾಜದ ವಿವಿಧ ಸ್ತರಗಳಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಎದುರಿಸಲು ಸ್ವತಃ ಅವರುಗಳೇ ಸ್ವಯಂ ರಕ್ಷಣೆಗೆ ಸಿದ್ದರಾಗಬೇಕು ಎಂದು ಕಾರುಣ್ಯ ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ಬಿ. ಅನ್ನಪೂರ್ಣ ಕರೆ ನೀಡಿದರು.
ಹಳೇನಗರದ ಪ್ರೌಢಶಾಲೆಯಲ್ಲಿನ ವಿದ್ಯಾರ್ಥಿನಿಯರಿಗೆ ಕಾರುಣ್ಯ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ವೈಜ್ಞಾನಿಕ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿ ವಿವಿಧ ಸ್ತರಗಳಲ್ಲಿ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ. ಇದರಿಂದ ಆಕೆ ಶೋಷಣೆಗೆ ಒಳಗಾಗುತ್ತಲೇ ಇದ್ದಾಳೆ. ಇದನ್ನು ತಡೆಯಲು ವಿದ್ಯಾರ್ಥಿನಿಯರು ಹಾಗೂ ಎಲ್ಲ ಸ್ತ್ರೀಯರು ಸ್ವಯಂ ರಕ್ಷಣೆಗೆ ಮುಂದಾಗಿ, ಇದಕ್ಕೆ ಆತ್ಮಸ್ಥೈರ್ಯ, ಧೈರ್ಯ ಹಾಗೂ ರಕ್ಷಣಾ ಕಲೆಗಳನ್ನು ಕಲಿಯಬೇಕು ಎಂದು ಕರೆ ನೀಡಿದರು.
Also read: ದಾವಣಗೆರೆ: ಸೂಳೆಕೆರೆ ಬಳಿ ಭಾರೀ ಮಳೆಗೆ ಮುಳುಗಿದ ರಸ್ತೆ, ಲಾರಿ ಪಲ್ಟಿ
ಟ್ರಸ್ಟ್ ಖಜಾಂಚಿ ಎನ್. ನಾಗವೇಣಿ ಮಾತನಾಡಿ, ನಮ್ಮ ಸಮಾಜದಲ್ಲಿ ವರ್ಣದಿಂದಲೂ ಸಹ ಆಗುತ್ತಿರುವ ತಾರತಮ್ಯ ಹಾಗೂ ಕೀಳರಿಮೆ ಕುರಿತಾಗಿ ಮಹಿಳೆಯರು ಜಾಗೃತಿಗೊಳ್ಳಬೇಕು. ಯಾವುದೇ ಸ್ತರದಲ್ಲಿ ನಡೆಯಬಹುದಾದ ಇಂತಹ ದೌರ್ಜನ್ಯ ಹಾಗೂ ಕೀಳರಿಮೆಗಳನ್ನು ಖಂಡಿಸುವ ಜೊತೆಯಲ್ಲಿ ಇದರ ಧಮನಕ್ಕೆ ಎಲ್ಲರೂ ಮುಂದಾಗಬೇಕು ಎಂದು ಸಲಹೆ ನೀಡಿದರು.
ಶಾಲೆಯ ಮುಖ್ಯೋಪಾಧ್ಯಾಯಿನಿ ಕೆಂಚಮ್ಮ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕರಾದ ಆರ. ಮಂಜುಳಾ ಕಾರ್ಯಕ್ರಮ ನಿರೂಪಿಸಿ, ಟ್ರಸ್ಟ್ ಜಂಟಿ ಕಾರ್ಯದರ್ಶಿ ಅಂತೋಣಿರಾಜ್ ಸ್ವಾಗತಿಸಿ, ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post