ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಹಲಾಲ್ ದಂಗಲ್‌ಗೆ Halal Dangal ಸಂಬಂಧಪಟ್ಟಂತೆ ನಗರದ ಹಳೇನಗರ ಹಾಗೂ ಹೊಸಮನೆ ಪಿಎಸ್‌ನಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿರುವ ಘಟನೆ ನಡೆದಿದೆ
ಹಲಾಲ್ ವಿರುದ್ಧದ ಅಭಿಯಾನದಲ್ಲಿ ಪಾಲ್ಗೊಂಡ ಭಜರಂಗದಳ ಕಾರ್ಯಕರ್ತರು Bhajarangadal activist ಮಾಂಸದಂಗಡಿ ಹಾಗೂ ಹೋಟೆಲ್ವೊಂದಕ್ಕೆ ತೆರಳಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪದ ಅಡಿಯಲ್ಲಿ 2 ಕಡೆ ಪ್ರಕರಣ ದಾಖಲಾಗಿದೆ.
ಶಿವಾಜಿ ಸರ್ಕಲ್ ಹೊಸಮನೆ ಪಿಎಸ್ ನಲ್ಲಿ ದಾಖಲಾಗಿರುವ ಎಫ್ಐಆರ್ನ ಪ್ರಕಾರ, ನಿನ್ನೆ ಮಧ್ಯಾಹ್ನ 12.30 ಕ್ಕೆ ಭಜರಂಗ ದಳ ಕಾರ್ಯಕರ್ತರು ಮಾಂಸದಂಗಡಿಗೆ ಬಂದು ಹಲಾಲ್ ಮಾಡದೇ ಇರುವ ಚಿಕನ್ ಬೇಕು ಎಂದಿದ್ದಾರೆ. ಅಲ್ಲದೆ ಮಾಲೀಕನನ್ನ ನಿಂದಿಸಿದ್ದಾರೆ. ಮೇಲಾಗಿ ಮಳಿಗೆ ಮಾಲೀಕರಿಗೆ ಅಂಗಡಿ ಖಾಲಿ ಮಾಡಿಸುವಂತೆ ಬೆದರಿಕೆ ಹಾಕಿ, ಮಾಲೀಕ ಹಾಗೂ ತೌಸಿಪ್ ಎಂಬುವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಇನ್ನೂ ಹಳೇನಗರ ಪಿಎಸ್‌ನಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಭಜರಂಗ ದಳದ ಕಾರ್ಯಕರ್ತರ ವಿರುದ್ಧ ಮತ್ತೊಂದು ಆರೋಪ ದಾಖಲಾಗಿದೆ. ನಿನ್ನೆ ಒಂದು ಗಂಟೆ ಸುಮಾರಿಗೆ ಬಿಎಚ್ ರೋಡ್ನ ಜನತಾ ಹೋಟೆಲ್ಗೆ ನುಗ್ಗಿ, ಅಲ್ಲಿಗೆ ಊಟಕ್ಕೆ ಬಂದಿದ್ದವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಮೇಲ್ಕಂಡ ಎರಡು ಘಟನೆಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಭಜರಂಗದಳ ಪ್ರಮುಖರಾದ ವಡಿವೇಲು, ಶ್ರೀಕಾಂತ್, ಸವಾಯಿ ಸಿಂಗ್, ಕೃಷ್ಣ ಮತ್ತು ಗುಂಡ ಸೇರಿದಂತೆ ಒಟ್ಟು 7 ಜನರ ವಿರುದ್ಧ ಹಲ್ಲೆ ನಡೆಸಿದ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
Also read: ಶರಣರು ಜೀವನ ಸಿದ್ಧಾಂತ ರೂಪಿಸಿದ ಮಹನೀಯರು: ಪ್ರೊ. ವೀಣಾ ಅಭಿಪ್ರಾಯ
ಹೊಸಮನೆ ಶಿವಾಜಿ ವೃತ್ತದಲ್ಲಿ ಅಭಿಯಾನ ಕೈಗೊಂಡಿದ್ದು,, ಕೋಳಿ ಹಾಗು ಮಾಂಸದಂಗಡಿಗಳಿಗೆ ಭೇಟಿ ನೀಡಿ ಆ ಪ್ರದೇಶದಲ್ಲಿ 90 ಪರ್ಸೆಂಟ್ ಹಿಂದೂಗಳಿದ್ದು, ಹಲಾಲ್ ಅಲ್ಲದ ಮಾಂಸ ನೀಡುವಂತೆ ಮನವಿ ಮಾಡಲಾಗಿದೆ ಎಂದು ಭಜರಂಗ ದಳ ಕಾರ್ಯಕರ್ತರು ಹೇಳಿದ್ದಾರೆ.
ಹಲಾಲ್ ಅಲ್ಲದ ಮಾಂಸ ನೀಡಲು ಸಾಧ್ಯವಿಲ್ಲ ಎಂದಾಗ ಅಂಗಡಿ ಮಾಲೀಕನಿಗೆ ಅಂಗಡಿ ತೆರವುಗೊಳಿಸಿ ಎಂದು ಒತ್ತಾಯಿಸಿದ್ದಾರಷ್ಟೆ. ಇದರ ಬೆನ್ನಲ್ಲೆ ಹೊಸಮನೆ ಠಾಣೆಯಲ್ಲಿ ಬೆದರಿಕೆ ದೂರು ದಾಖಲಾಗಿದೆ.
ಇತ್ತ ಜನತಾ ಹೋಟೆಲ್ನಲ್ಲಿ ಎಸ್ಡಿಪಿಐ ಕಾರ್ಯಕರ್ತ ಭಜರಂಗ ದಳದ ಕಾರ್ಯಕರ್ತರನ್ನ ಹೋಟೆಲ್ನಲ್ಲಿ ವಿನಾಕಾರಣ ನಿಂಧಿಸಿದ್ದಾನೆ. ಈ ವೇಳೆ ಭಜರಂಗ ದಳದ ಕಾರ್ಯಕರ್ತರು ಆಕ್ರೋಶಗೊಂಡು ಮಾತಿನ ಚಕಮಕಿ ನಡೆದಿದೆ. ಆದರೆ, ಇದನ್ನೆ ದೊಡ್ಡದು ಮಾಡಿ ಠಾಣೆಯಲ್ಲಿ ದೂರು ನೀಡಿ ಎಫ್ಐಆರ್ ದಾಖಲಿಸಲಾಗಿದೆ. ಇದು ವಿನಾಕಾರಣಕ್ಕೆ ನಮ್ಮ ಮೇಲೆ ಹೊರಿಸುತ್ತಿರುವ ಆರೋಪ ಎಂದು ಭಜರಂಗ ದಳದ ವಡಿವೇಲು ಸ್ಪಷ್ಟಪಡಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post