ಕಲ್ಪ ಮೀಡಿಯಾ ಹೌಸ್ | ಬೀದರ್ |
ಗ್ರಾಮೀಣ ಭಾಗದ ಕ್ರೀಡೆ, ಕಲೆ, ಸಾಹಿತ್ಯ ಸೇರಿದಂತೆ ಹಳ್ಳಿ ಸೊಗಡನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಆ ಕೆಲಸವನ್ನು ನಾವೆಲ್ಲರೂ ಮಾಡಬೇಕಾಗಿದೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ MLA Bandeppa Khashempur ಹೇಳಿದರು.
ಬೀದರ್ ದಕ್ಷಿಣ ಕ್ಷೇತ್ರದ ಚಿಟ್ಟಾವಾಡಿಯಲ್ಲಿ ಮಹಿಳೆಯರ ಮುಂದಾಳತ್ವದಲ್ಲಿ ನಡೆದ ಹಳ್ಳಿ ಸೊಗಡಿನ ಕೋಲಾಟವನ್ನು ವೀಕ್ಷಿಸಿ ಮಾತನಾಡಿದ ಅವರು, ಚಿಟ್ಟಾವಾಡಿ ಗ್ರಾಮದಲ್ಲಿ ಅನೇಕ ವರ್ಷಗಳಿಂದ ಕೋಲಾಟ ಕಾರ್ಯಕ್ರಮ ನಡೆಯುತ್ತಿದೆ. ಗ್ರಾಮೀಣ ಆಟಗಳು ನಶಿಸಿ ಹೋಗುತ್ತಿರುವ ಈ ದಿನಗಳಲ್ಲಿ ಚಿಟ್ಟಾವಾಡಿಯಲ್ಲಿ ಕೋಲಾಟ ಇನ್ನೂ ಜೀವಂತ ಇರುವುದು ಖುಷಿಯ ವಿಷಯವಾಗಿದೆ ಎಂದರು.
ಚಿಟ್ಟಾವಾಡಿಯಲ್ಲಿ ನಡೆದ ಕೋಲಾಟದಲ್ಲಿ ಪಾಲ್ಗೊಂಡ ಪ್ರತಿಯೊಬ್ಬ ಸಹೋದರಿಯರು ಅದ್ಬುತವಾಗಿ ಆಡಿದ್ದಾರೆ. ರಾಮಾಯಣ, ಮಹಾಭಾರತ, ಬಸವಣ್ಣನವರಿಗೆ ಸಂಬಂಧಿಸಿದ ಹಾಡುಗಳು ಮತ್ತು ನನ್ನ ಹೆಸರಿನಲ್ಲಿ ಹಾಡು ಕಟ್ಟಿ ಕೋಲಾಟ ಆಡಿದ್ದಾರೆ. ಗ್ರಾಮೀಣ ಭಾಗದಲ್ಲಿ ಕಲೆಯನ್ನು ಜೀವಂತವಿಟ್ಟಿರುವ ಹಳ್ಳಿಗರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನಾವೆಲ್ಲರೂ ಒಳ್ಳೆಯ ಸಂಸ್ಕೃತಿ ಮತ್ತು ಸಭ್ಯತೆಯೊಂದಿಗೆ ಬದುಕು ಸಾಗಿಸಬೇಕಾಗಿದೆ. ಗ್ರಾಮೀಣ ಕಲೆ, ಕ್ರೀಡೆ ಸೇರಿದಂತೆ ಹಳ್ಳಿ ಸೊಗಡಿನ ಪ್ರತಿಯೊಂದು ಕಾರ್ಯಕ್ರಮಗಳಿಗೆ ನಾನು ಪ್ರೋತ್ಸಾಹ ನೀಡುವ ಕೆಲಸವನ್ನು ಮಾಡುತ್ತೇನೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಭರವಸೆ ನೀಡಿದರು.
ಕೋಲಾಟ ಕಲೆಯಲು, ಆಡಲು ಕುಟುಂಬಸ್ತರ ಬೆಂಬಲ ಇರಬೇಕಾಗುತ್ತದೆ. ಎಲ್ಲರ ಬೆಂಬಲದೊಂದಿಗೆ ಕೋಲಾಟದಂತ ಕಲೆಯನ್ನು ಈ ಗ್ರಾಮದ ಮಹಿಳೆಯರು ಮುಂದುವರೆಸಿಕೊಂಡು ಸಾಗುತ್ತಿದ್ದಾರೆ. ಕೋಲಾಟದಿಂದ ದೇಹವನ್ನು ಆರೋಗ್ಯವಾಗಿ ಇಟ್ಟುಕೊಳ್ಳಲು ಸಾಧ್ಯವಾಗುತ್ತದೆ ಎಂದು ಮಾಜಿ ಜಿಲ್ಲಾ ಪಂಚಾಯತಿ ಸದಸ್ಯೆ ಶಕುಂತಲಾ ಬೆಲ್ದಾಳೆರವರು ಹೇಳಿದರು.
ಇದೇ ವೇಳೆ ಶಾಸಕ ಬಂಡೆಪ್ಪ ಖಾಶೆಂಪುರ್ ರವರು, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯೆ ಶಕುಂತಲಾ ಬೆಲ್ದಾಳೆರವರು ಗ್ರಾಮಸ್ಥರೊಂದಿಗೆ ಕೋಲಾಟ ಆಡಿದರು. ಚಿಟ್ಟಾ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕುಮುದ ಮಲ್ಲಿಕಾರ್ಜುನ, ಗ್ರಾಮ ಪಂಚಾಯತಿ ಸದಸ್ಯರಾದ ಜಗದೇವಿ, ಭಾರತಿ, ಭವ್ಯ, ಚಂದ್ರಕಲಾ, ಸುನೀತಾ, ಅನಿತಾ, ಬೊಮ್ಮಗೊಂಡ ಚಿಟ್ಟಾವಾಡಿ, ಶಾಂತಪ್ಪ, ಸಂಜುಕುಮಾರ್, ಡಾ. ಶ್ಯಾಮರಾವ್, ಅನಿಲಕುಮಾರ್, ಆನಂದ್, ಮೋಗಲಪ್ಪ, ಮಲ್ಲಿಕಾರ್ಜುನ, ಸಾಯಿಕುಮಾರ್, ಚಂದ್ರಕಾಂತ, ಯಲ್ಲಾಲಿಂಗ, ಮಲ್ಲಪ್ಪ ಸೇರಿದಂತೆ ಅನೇಕರಿದ್ದರು.
Also read: ಬೀದಿ ನಾಯಿ ದಾಳಿಗೆ ತುತ್ತಾದ 5 ವರ್ಷದ ಬಾಲಕ ಸಾವು!
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post