ಕಲ್ಪ ಮೀಡಿಯಾ ಹೌಸ್ | ಚಿತ್ರದುರ್ಗ |
ನಮ್ಮ ವಿರುದ್ಧ ಪಿತೂರಿ ನಡೆದಿದ್ದು, ನಾವು ಪಲಾಯನ ಮಾಡುವ ಪ್ರಶ್ನೆಯೇ ಇಲ್ಲ ಎಂದು ಮುರುಘಾ ಮಠದ ಡಾ. ಶಿವಮೂರ್ತಿ ಸ್ವಾಮೀಜಿಯವರು Dr. Shivamurthy Swamyji ಹೇಳಿದ್ದಾರೆ.
ಹಾವೇರಿಯಿಂದ ಬಿಗಿ ಪೊಲೀಸ್ ಭದ್ರತೆಯಲ್ಲಿ ಮಠಕ್ಕೆ ಹಿಂತಿರುಗಿದ ನಂತರ ಮಾತನಾಡಿರುವ ಅವರು, ಬಂಧಿರುವ ಸಮಸ್ಯೆಯನ್ನು ಸಾಂಘಿಕವಾಗಿ, ಶಾಂತ ರೀತಿಯಿಂದ ಪರಿಹರಿಸಿಕೊಳ್ಳಲು ಎಲ್ಲರ ಸಹಕಾರ ಬೇಕಿದೆ. ನಿಮ್ಮೆಲ್ಲರ ಸಲುವಾಗಿ ನಾವು ಧೈರ್ಯವಾಗಿದ್ದೇವೆ. ಇಂತಹ ಸಮಸ್ಯೆಗಳು ಹೊಸತೇನಲ್ಲ. ಆದರೆ, ಈ ಸಮಸ್ಯೆಗೆ ಒಂದು ತಾರ್ಕಿಕ ಅಂತ್ಯ ಕಂಡುಕೊಳ್ಳುವ ಪ್ರಯತ್ನದಲ್ಲಿ ಎಲ್ಲರೂ ಸಹಕಾರ ನೀಡಬೇಕು ಎಂದು ಕೋರಿದರು.
ನಮ್ಮ ವಿರುದ್ಧ ಪಿತೂರಿ ನಡೆದಿದೆ. ಆದರೆ, ಇದಕ್ಕಾಗಿ ಯಾರೂ ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ. ನಾವು ಈ ನೆಲದ ಕಾನೂನನ್ನು ಸರಿಯಾಗಿ ಅರ್ಥೈಸಿಕೊಂಡು, ಗೌರವಿಸುವ ಮಠಾಧೀಶರಾಗಿz್ದÉÃವೆ. ನಾವು ಕಾನೂನು ಹಾಗೂ ತನಿಖೆಗೆ ಸಹಕಾರ ನೀಡುತ್ತೇವೆ. ಪಲಾಯನ ಮಾಡುವ ಪ್ರಮೇಯವೇ ಇಲ್ಲ. ಅಧಿಕಾರಿಗಳಿಗೆ ಸಹಕಾರ ನೀಡುತ್ತೇವೆ ಎಂದರು.
ಭಕ್ತರು ಯಾವುದೇ ರೀತಿಯ ಗಾಳಿ ಸುದ್ದಿಗೆ ಕಿವಿಗೊಡದೇ ಧೈರ್ಯ ಹಾಗೂ ಶಾಂತ ರೀತಿಯಿಂದ ಇರಬೇಕು ಎಂದು ಮನವಿ ಮಾಡಿದರು.
ಶ್ರೀಮಠ ಮೊದಲಿನಿಂದಲೂ ವಿದ್ಯಾದಾನ ಹಾಗೂ ಅನ್ನದಾನ ಮಾಡುತ್ತಾ ಚಲಿಸುವ ನ್ಯಾಯಾಲಯದ ರೀತಿಯಲ್ಲಿ ನಡೆದುಕೊಂಡು ಬಂದಿದೆ, ಮುಂದೆಯೂ ಸಹ ಇದೇ ರೀತಿ ಇರಲಿದೆ. ಲಕ್ಷಾಂತರ ಭಕ್ತರು ಶ್ರೀಮಠದ ಜೊತೆಯಲ್ಲಿರುವುದು ನಮಗೆ ಸಮಾಧಾನವಿದೆ ಎಂದರು.
ಬಂಧನಕ್ಕೆ ಒಳಗಾಗಿದ್ದಾರೆ ಎಂಬ ಸುದ್ದಿಗಳ ಬೆನ್ನಲ್ಲೇ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿಯವರು ಮಧ್ಯಾಹ್ನ 1 ಗಂಟೆ ವೇಳೆಗೆ ಮಠಕ್ಕೆ ಹಿಂತಿರುಗಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post