ಕಲ್ಪ ಮೀಡಿಯಾ ಹೌಸ್ | ಮಡಿಕೇರಿ |
ಕೊಡಗು ಜಿಲ್ಲೆಯಲ್ಲಿ ಇಂದು ಲಘು ಭೂಕಂಪನ Light Earthquake ಸಂಭವಿಸಿದ್ದು, ಭೂಮಿ ಕಂಪನದಿಂದ ಆತಂಕಗೊಂಡ ಜನತೆ ಮನೆಗಳಿಂದ ಹೊರ ಓಡಿ ಬಂದ ಘಟನೆ ನಡೆದಿದೆ.
ವಾರದ ಅಂತರದಲ್ಲಿ ಸಂಭವಿಸಿದ 3ನೇ ಕಂಪನ ಇದಾಗಿದ್ದು, ಮಡಿಕೇರಿ, ನಾಪೋಕ್ಲು, ಕುಕ್ಕುಂದ, ಕಾಡು, ಬಲ್ಲಮಾವಟ್ಟಿ. ದಬ್ಬಡ್ಕ, ಪೆರಾಜೆ, ಕರಿಕೆ, ಭಾಗಮಂಡಲ, ವನಚಲ್, ಕರಿಕೆ, ಚೆಯ್ಯಂಡಾಣೆ ಸೇರಿದಂತೆ ವಿವಿಧ ಕಡೆ ಬೆಳಿಗ್ಗೆ 7.45ರ ಸುಮಾರಿನಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ ಎನ್ನಲಾಗಿದೆ.









Discussion about this post