ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ದೇಶದಲ್ಲಿ ಕೊರೋನಾ 4ನೆಯ ಅಲೆಯ ಭೀತಿ Corona 4th Wave ಮುಂದಿನ ಕೆಲವು ವಾರಗಳಲ್ಲಿ ಅಪ್ಪಳಿಸಬಹುದು ಎಂಬ ತಜ್ಞರ ಮಾಹಿತಿ ಹಿನ್ನೆಲೆಯಲ್ಲಿ ಇದನ್ನು ಸಮರ್ಥವಾಗಿ ಎದುರಿಸಲು ಅಗತ್ಯವಿರು ಎಲ್ಲ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಎಲ್ಲ ರಾಜ್ಯಗಳ ಸಿಎಂಗಳಿಗೆ ಪಿಎಂ ನರೇಂದ್ರ ಮೋದಿ PM Narendra Modi ಖಡಕ್ ಸೂಚನೆ ನೀಡಿದ್ದಾರೆ.
ಈ ಕುರಿತಂತೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಮುಖಾಂತರ ಸಭೆ ನಡೆಸಿ ಅವರು ಮಾತನಾಡಿದರು.
ಕೊರೋನಾ ಮೂರು ಅಲೆಗಳನ್ನು ಸಮರ್ಥವಾಗಿ ನಾವು ಎದುರಿಸಿದ್ದು, ನಾಲ್ಕನೆಯ ಅಲೆಯನ್ನೂ ಸಹ ಅಷ್ಟೇ ಸಮರ್ಥವಾಗಿ ಎದುರಿಸಲು ಸಿದ್ದರಾಗಬೇಕಿದೆ. ಇದಕ್ಕಾಗಿ, ಆಸ್ಪತ್ರೆ, ಹಾಸಿಗೆ, ಆಕ್ಸಿಜನ್ ಬೆಡ್, ಆಕ್ಸಿಜನ್ ಪೂರೈಕೆ, ಔಷಧಿ ಸೇರಿದಂತೆ ಎಲ್ಲ ತಯಾರಿ ಮಾಡಿಟ್ಟುಕೊಳ್ಳಬೇಕು ಎಂದಿದ್ದಾರೆ.
Also read: ಡಾ. ರಾಜಕುಮಾರ್ ಅವರ ಚಲನಚಿತ್ರಗಳಲ್ಲಿ ಜೀವನಮೌಲ್ಯಗಳು ತುಂಬಿದ್ದವು: ಪ್ರೊ. ಲಿಂಗರಾಜ ಗಾಂಧಿ
3ಟಿ ಸೂತ್ರ
ಕೊರೋನಾ 4ನೆಯ ಅಲೆಯನ್ನು ಸಮರ್ಥವಾಗಿ ಎದುರಿಸಲು ೩ಟಿ ಸೂತ್ರವನ್ನು 3T Stategy ಎಲ್ಲ ರಾಜ್ಯಗಳು ಅಳವಡಿಸಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.
ಟ್ರೇಸಿಂಗ್, ಟೆಸ್ಟಿಂಗ್ ಹಾಗೂ ಟ್ರೀಟ್ಮೆಂಟ್ ಇವು ಪ್ರಧಾನಿಯವರು ಸೂಚಿಸಿರುವ 3ಟಿ ಸೂತ್ರವಾಗಿದ್ದು, ಇದರ ಮೂಲಕ ಸೋಂಕು ನಿಯಂತ್ರಣಕ್ಕೆ ಕಾರ್ಯಪ್ರವೃತ್ತರಾಗಬೇಕು ಎಂದಿದ್ದಾರೆ.
ಬೂಸ್ಟರ್ ಡೋಸ್
60 ವರ್ಷ ಮೇಲ್ಪಟ್ಟ ವೃದ್ಧರಿಗೆ ಬೂಸ್ಟರ್ ಡೋಸ್ ನೀಡುವ ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕು. ಯಾರು ತೆಗೆದುಕೊಂಡಿಲ್ಲ ಎಂಬುದನ್ನು ಗುರುತಿಸಿ ಅವರಿಗೆ ವ್ಯಾಕ್ಸಿನ್ ನೀಡಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.
ವಾಕ್ಸಿನ್ ಪಡೆಯದವರನ್ನು ಗುರುತಿಸಿ
ಇನ್ನು, ಕೊರೋನಾ 2 ಡೋಸ್ ಲಸಿಕೆ ಪಡೆಯದವರನ್ನು ಪತ್ತೆ ಮಾಡಿ ಎರಡೂ ಡೋಸ್ ಲಸಿಕೆ ನೀಡಲು ಕ್ರಮಕೈಗೊಳ್ಳಬೇಕು. ಯಾರೂ ಸಹ ಲಸಿಕೆ ಪಡೆಯುವುದರಿಂದ ಹೊರಕ್ಕೆ ಉಳಿಯಬಾರದು ಎಂದಿದ್ದಾರೆ.
ಮಕ್ಕಳಿಗೆ ಲಸಿಕೆ ನೀಡಲು ಕ್ರಮ
ಹಾಗೆಯೇ, 6 ವರ್ಷ ಮೇಲ್ಪಟ್ಟ ಮಕ್ಕಳಿಗೆ ಕೊರೋನಾ ಲಸಿಕೆ ನೀಡುವ ಪ್ರಕ್ರಿಯೆಯನ್ನು ಚುರುಕುಗೊಳಿಸುವಂತೆ ಸೂಚಿಸಿರುವ ಪ್ರಧಾನಿಯವರು ಶಾಲೆಗಳ ಆರಂಭಕ್ಕೂ ಮುನ್ನ ಎಲ್ಲ ಮಕ್ಕಳಿಗೆ ಲಸಿಕೆ ನೀಡಿಬೇಕು ಎಂದು ಸೂಚಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post