ಕಲ್ಪ ಮೀಡಿಯಾ ಹೌಸ್ | ನವದೆಹಲಿ |
10 ವರ್ಷದ ಬಾಲಕನ ಮೇಲೆ ಆತನ ಸ್ನೇಹಿತರೇ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ರಾಷ್ಟç ರಾಜಧಾನಿಯಲ್ಲಿ ನಡೆದಿದ್ದು, ಆರೋಪಿಗಳೂ ಸಹ ಅಪ್ರಾಪ್ತರೇ ಎನ್ನುವುದು ಆತಂಕಕಾರಿ ವಿಚಾರವಾಗಿದೆ.
ನವದೆಹಲಿಯ ಸೀಲಾಂಪುರ ಪ್ರದೇಶದಲ್ಲಿ ನಡೆದಿದ್ದು, ಸಂತ್ರಸ್ತ ಬಾಲಕನ ಮಾಹಿತಿ ಆಧರಿಸಿ ಆತನ ಇಬ್ಬರು ಸ್ನೇಹಿತರನ್ನು ಪೊಲೀಸರು ಬಂಧಿಸಿ, ಬಾಲಾಪಾರಾಧಿ ನ್ಯಾಯ ಮಂಡಳಿ ಮುಂದೆ ಹಾಜರುಪಡಿಸಿದ್ದಾರೆ.
ಇನ್ನು, ಪರಾರಿಯಾಗಿರುವ ಮೂರನೆಯ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇದೇ ವೇಳೆ ದೆಹಲಿ ಮಹಿಳಾ ಆಯೋಗ ಸಹ ಪೊಲೀಸರಿಗೆ ನೊಟೀಸ್ ಜಾರಿ ಮಾಡಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದೆ.
ದೆಹಲಿ ಮಹಿಳಾ ಆಯೋಗದ ಮಾಹಿತಿ ಪ್ರಕಾರ ಸಂತ್ರಸ್ಥ ಬಾಲಕನ ತಾಯಿ ಆಯೋಗಕ್ಕೆ ಕರೆ ಮಾಡಿ ದೂರು ನೀಡಿದ್ದು, ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಅವನ ಸ್ನೇಹಿತರು ಕಬ್ಬಿಣದ ಸಲಾಕೆಯನ್ನು ಖಾಸಗಿ ಭಾಗದೊಳಕ್ಕೆ ತೂರಿಸಿದ್ದಾರೆ ಎಂದು ತಾಯಿ ಗಂಭೀರ ಆರೋಪಿಸಿದ್ದಾರೆ.
ಸಂತ್ರಸ್ಥ ಮತ್ತು ಆರೋಪಿಗಳೆಲ್ಲರೂ ಅಕ್ಕಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದು, ಸ್ನೇಹಿತರಾಗಿದ್ದಾರೆ. ಎಲ್ಲರೂ 10ರಿಂದ 12 ವರ್ಷ ವಯಸ್ಸಿನೊಳಗಿದ್ದು, ಒಂದೇ ಕೋಮಿನವರಾಗಿದ್ದಾರೆ ಎನ್ನಲಾಗಿದೆ.
ಪೊಲೀಸರು ಇದೇ ವೇಳೆ ಮೆಡಿಕೋ ಲೀಗಲ್ ಪ್ರಕರಣವನ್ನೂ ಸಹ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post