ಕಲ್ಪ ಮೀಡಿಯಾ ಹೌಸ್ | ಸಾಗರ |
ಪರಿಸರದ ಮೇಲಿನ ಪ್ರೀತಿ ಒಂದು ದಿನಕ್ಕೆ ಸೀಮಿತವಾಗಿರದೇ ನಿತ್ಯನಿರಂತರವಾಗಿರಬೇಕು ಎಂದು ಶಾಸಕ ಎಚ್. ಹಾಲಪ್ಪ MLA Halappa ಕರೆ ನೀಡಿದ್ದಾರೆ.
ಬಂದಗದ್ದೆ ಮೊರಾರ್ಜಿ ವಸತಿ ಶಾಲೆ ಸಮೀಪ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಬೀಜ ಬಿತ್ತನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹವಾಮಾನ ವೈಪರೀತ್ಯ ಇಂದು ವಿಶ್ವವನ್ನೇ ಕಾಡುತ್ತಿದೆ. ಪರಿಸರ ಅಸಮತೋಲನದ ಪರಿಣಾಮ ನೇರವಾಗಿ ನಮ್ಮ ಮೇಲೆ ಬೀರುತ್ತದೆ. ಇದನ್ನು ಸರಿಪಡಿಸುವ ತುರ್ತು ಅಗತ್ಯವಿದೆ. ಹೀಗಾಗಿ, ಪರಿಸರದ ಮೇಲಿನ ಪ್ರೀತಿ ನಿತ್ಯನಿರಂತರವಾಗಿರಿಸುವ ಮೂಲಕ ಹೆಚ್ಚು ಹೆಚ್ಚು ಗಿಡ ನೆಟ್ಟು, ಬೆಳೆಸಬೇಕು. ಇದು ಪ್ರತಿ ನಾಗರಿಕರ ಕರ್ತವ್ಯವಾಗಿದ್ದು, ಎಲ್ಲರೂ ಇದಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಅರಣ್ಯ ಇಲಾಖೆ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
Also read: ಮಳೂರು ದೇವಾಲಯ ಜೀರ್ಣೋದ್ಧಾರಕ್ಕೆ ಅನುದಾನ: ಶಾಸಕ ಹಾಲಪ್ಪನವರಿಗೆ ಅಭಿನಂದನೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post