ಕಲ್ಪ ಮೀಡಿಯಾ ಹೌಸ್ | ಸಾಗರ |
ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಚತುಷ್ಪಥ ರಸ್ತೆ ಯೋಜನೆಯು ಸಂಸದ ಬಿ.ವೈ. ರಾಘವೇಂದ್ರ ಅವರ ಅವಿರತ ಪ್ರಯತ್ನದ ಫಲವಾಗಿ ಪ್ರಸ್ತುತ ಕಾಮಗಾರಿ ಪ್ರಾರಂಭವಾಗಿ ತಮ್ಮ ಕೋರಿಕೆ ಈಡೇರಿತ್ತಿದೆ. ಮುಂದಿನ ವರ್ಷ ಮಾರಿಜಾತ್ರೆಯೊಳಗೆ ಯೋಜನೆ ಪೂರ್ಣಗೊಂಡು ತಾಲೂಕಿನ ಜನತೆ ಚುತುಷ್ಪಥ ರಸ್ತೆಯಲ್ಲಿ Quadrangular road ಸಂಚರಿಸುವಂತಾಗಲಿ ಎಂದು ಶಾಸಕ ಹಾಲಪ್ಪ MLA Halappa ಆಶಯ ವ್ಯಕ್ತಪಡಿಸಿದರು.
ಇಂದು ಸಾಗರಕ್ಕೆ ಬೇಟಿ ನೀಡಿದ ರಾಷ್ಟ್ರೀಯ ಹೆದ್ದಾರಿ ಹಿರಿಯ ಅಧಿಕಾರಿಗಳೊಂದಿಗೆ ಬಿಹೆಚ್ ರಸ್ತೆ ಅಗಲೀಕರಣ (ಚತುಷ್ಪಥ ರಸ್ತೆ) ಕಾಮಗಾರಿ ವೀಕ್ಷಿಸಿದ ನಂತರ ಮಾತನಾಡಿದ ಅವರು, 77 ಕೋಟಿ ವೆಚ್ಚದ 8ಕಿಮೀ ವ್ಯಾಪ್ತಿಯ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಈಗಾಗಲೇ ಕೆಲಸ ಪ್ರಾರಂಭವಾಗಿದ್ದು, ಸ್ಥಳ ಪರಿಶೀಲನೆಗಾಗಿ ಬೆಂಗಳೂರಿನಿಂದ ಮುಖ್ಯ ಇಂಜಿನಿಯರ್‌ಗಳು ಪಟ್ಟಣಕ್ಕೆ ಆಗಮಿಸಿದ್ದಾರೆ. ಹಾಗೂ ಅಗಲೀಕರಣಕ್ಕೆ ಸಂಬಂಧಪಟ್ಟಂತೆ ಕೆಲವು ಸಲಹೆ ಸೂಚನೆಗಳನ್ನು ನೀಡಿದ್ದಾರೆ ಎಂದರು.
Also read: ಏ.10ರಂದು ಶ್ರೀ ರಾಮಕೃಷ್ಣ ವಿಶ್ವಭಾವೈಕ್ಯ ಮಂದಿರದ ಲೋಕಾರ್ಪಣೆ…
ಜನರ ಹಿತದೃಷ್ಟಿಯಿಂದ ಈ ರಸ್ತೆ ಕಾಮಗಾರಿ ಕೈಗೊಳ್ಳಲಾಗಿದ್ದು, ಒಂದು ವರ್ಷದೊಳಗೆ ಯೋಜನೆ ಪೂರ್ಣಗೊಳಿಸಲು ವಿನಂತಿ ಮಾಡಲಾಗಿದೆ. ಈಗಾಗಲೇ ಕಾಮಗಾರಿ ಪ್ರಾರಂಭವಾಗಿದೆ ಹಾಗೂ ನಿಗಧಿತ ಸಮಯದೊಳಗೆ ಪೂರ್ಣಗೊಳ್ಳುವ ಭರವಸೆ ಇದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post