ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಕುವೆಂಪು ವಿಶ್ವವಿದ್ಯಾಲಯದ Kuvempu University ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಬಿ ಜೆ ಗಿರೀಶ್, ರಾಷ್ಟ್ರ ಮಟ್ಟದ ಮೆಕಾನಿಕಲ್ ಮತ್ತು ಏರೋಸ್ಪೇಸ್ ಇಂಜಿನಿಯರಿಂಗ್ ವಿಭಾಗದ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ.
2014ರಿಂದ ಈ ವಿಷಯಗಳ ಸಂಶೋಧನೆ ಕುರಿತಂತೆ ವಿಶ್ವಾಸಾರ್ಹ ದತ್ತಾಂಶ ನೀಡುತ್ತಾ ಬಂದಿರುವ ರಿಸರ್ಚ್ ಡಾಟ್ ಕಾಂ ಹೊರತಂದಿರುವ ನೂತನ ರಾಂಕಿಂಗ್ ಪಟ್ಟಿಯಲ್ಲಿ ಈ ಮಹತ್ವದ ಸಾಧನೆ ಮಾಡಿದ್ದಾರೆ. 2021ರ ಡಿಸೆಂಬರ್ ತಿಂಗಳ ವರೆಗಿನ ಸಂಶೋಧನಾ ಪ್ರಕಟಣೆಗಳು ಮತ್ತು ಉಲ್ಲೇಖಗಳನ್ನೊಳಗೊಂಡ ಹೆಚ್ ಇಂಡೆಕ್ಸ್ ಆಧರಿಸಿ ರಾಂಕಿಂಗ್ ಪಟ್ಟಿ ಸಿದ್ಧಪಡಿಸಲಾಗಿದೆ.
ಕಳೆದ ಕೆಲವು ವರ್ಷಗಳಿಂದೀಚೆಗೆ ರಾಷ್ಟ್ರ ಮಟ್ಟದ ವಿವಿಧ ಮಾನದಂಡಗಳಲ್ಲಿ ಮುಂಚೂಣಿಯ ವಿಜ್ಞಾನಿಯಾಗಿ ಗುರುತಿಸಿಕೊಂಡಿರುವ ಪ್ರೊ. ಬಿ ಜೆ ಗಿರೀಶ್ ಅವರ ಸಂಶೋಧನಾ ಕೊಡುಗೆ ಹೀಗೇ ಮುಂದುವರೆಯಲಿ ಮತ್ತು ಇತರ ಸಂಶೋಧಕರಿಗೆ ಸ್ಪೂರ್ತಿಯಾಗಲಿ ಎಂದು ಕುಲಪತಿ ಪ್ರೊ. ಬಿ ಪಿ ವೀರಭದ್ರಪ್ಪ ಹಾಗೂ ಕುಲಸಚಿವೆ ಜಿ ಅನುರಾಧ ಹಾರೈಸಿದ್ದಾರೆ.
Also read: ಸೆಲೆಬ್ರೆಟಿ ಆಗಿರಬಹುದು, ಆದರೆ ನಮಗೆ ಅವರು ಆರೋಪಿಯಷ್ಟೆ: ನಟಿ ಕಂಗನಾ ವಿರುದ್ಧ ಕೋರ್ಟ್ ಚಾಟಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post