ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಯಾವುದೇ ಆಟೋಟ, ಕ್ರೀಡೆಗಳಲ್ಲಿ ಯಶಸ್ಸು ಪಡೆಯಲು ತಾಳ್ಮೆ, ಪರಿಶ್ರಮ, ಸತತ ಪ್ರಯತ್ನ ಹಾಗೂ ಕ್ರೀಡಾಸ್ಫೂರ್ತಿ ಅಗತ್ಯವಾಗಿರುತ್ತದೆ ಎಂದು ಕುವೆಂಪು ವಿವಿಯ Kuvempu VV ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಅಭಿಪ್ರಾಯಪಟ್ಟರು.
ದೇಶವು ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಸುಸಂದರ್ಭದಲ್ಲಿರುವುದನ್ನು ಆಚರಿಸುವ ಸಲುವಾಗಿ ಕುವೆಂಪು ವಿವಿಯು ತನ್ನ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಇದೇ 29ರಿಂದ 3ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಮತ್ತು ಕ್ರೀಡಾಸ್ಪರ್ಧೆಗಳನ್ನು ಆಯೋಜಿಸಿದ್ದು, ಓಟದ ಸ್ಪರ್ಧೆಗೆ ಚಾಲನೆ ನೀಡುವ ಮೂಲಕ ಅವರು ಕಾರ್ಯಕ್ರಮಗಳನ್ನು ಉದ್ಘಾಟಿಸಿದರು.

Also read: ಜಿಂದಾಲ್ ಕಾರ್ಖಾನೆಯಲ್ಲಿ ಕೋರೆಕ್ಸ್ ಅನಿಲ ಸೋರಿಕೆ ಅಣುಕು ಪ್ರದರ್ಶನ
ದೇಶವು ಸ್ವಾತಂತ್ರ ಪಡೆದುಕೊಂಡ ಸಂಭ್ರಮಕ್ಕೆ ಅಮೃತ ಮಹೋತ್ಸವ ಸುಸಂದರ್ಭ ಒದಗಿಬಂದಿದ್ದು, ಪ್ರತಿಯೊಬ್ಬ ಭಾರತೀಯನೂ ಇದನ್ನು ಆಚರಿಸಬೇಕು. ಈಗಾಗಲೇ ಸರ್ಕಾರವು ತಿಳಿಸಿರುವಂತೆ ನಾವೆಲ್ಲರೂ ಹಾಗೂ ವಿವಿಯ ಪ್ರತಿ ವಿದ್ಯಾರ್ಥಿಯು ತಮ್ಮತಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ದೇಶಪ್ರೇಮ ಮೆರೆಯಬೇಕು ಹಾಗೂ ಸ್ವಾತಂತ್ರೋತ್ಸವವನ್ನು ಸಂಭ್ರಮಿಸಬೇಕು ಎಂದು ಕರೆಕೊಟ್ಟರು.











Discussion about this post