ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ತಮ್ಮ ತಂದೆ ಬಿ.ಎಸ್. ಯಡಿಯೂರಪ್ಪ ರಾಯರ ಭಕ್ತರಾಗಿದ್ದು, ತಮ್ಮ ಕೈಲಾದ ರಾಯರ ಸೇವೆಯನ್ನು ಮಾಡಿಕೊಂಡು ಬಂದಿದ್ದಾರೆ. ಅದರಂತೆ ಮೂರುವರೆಯಿಂದ ನಾಲ್ಕು ಕೋಟಿ ರೂ. ವೆಚ್ಚದಲ್ಲಿ ಇಲ್ಲಿನ ರಾಯರ ಮಠದ ಅಭಿವೃದ್ಧಿ ಹಾಗೂ ಬೃಂದಾವನ ಪುನರ್ ಪ್ರತಿಷ್ಠಾಪನೆ ಕಾರ್ಯ ಮಾಡಲಾಗಿದೆ ಎಂದು ಸಂಸದ ರಾಘವೇಂದ್ರ MP Raghavendra ಹೇಳಿದರು.
ತಾಲ್ಲೂಕಿನ ಉಡುಗಣಿ ಗ್ರಾಮದಲ್ಲಿ ಶ್ರೀ ಚನ್ನಕೇಶವ ದೇವರು, ಶ್ರೀಮುಖ್ಯ ಪ್ರಾಣದೇವರು ಹಾಗೂ ಶ್ರೀ ರಾಘವೇಂದ್ರಸ್ವಾಮಿ ಗುರುಸಾರ್ವಭೌಮರ ದ್ವಿತೀಯ ಮೃತ್ತಿಕಾ ಬೃಂದಾವನದ ಪುನರ್ ಪ್ರತಿಷ್ಠಾಪನೆಯನ್ನು ಮಂತ್ರಾಲಯದ ಪೀಠಾಧಿಪತಿಗಳಾದ ಶ್ರೀ1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು Subudhendrathirhta shri ನೆರವೇರಿಸಿದರು.
ನಂತರ ಧರ್ಮ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, 2009ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಂತ್ರಾಲಯದಲ್ಲಿ ಪ್ರವಾಹ ಎದುರಾಗಿತ್ತು ಆ ಸಂದರ್ಭದಲ್ಲಿ ಅಂದಿನ ಗುರುಗಳನ್ನು ಹೆಲಿಕಾಪ್ಟರ್ ಮೂಲಕ ಸುರಕ್ಷಿತ ಪ್ರದೇಶಕ್ಕೆ ಕರೆತಂದು ಅವರ ರಕ್ಷಣೆ ಮಾಡಲಾಗಿತ್ತು. ಹಾಗೂ ಪ್ರತಿವರ್ಷ ಮಳೆಗಾಲದ ಸಂದರ್ಭದಲ್ಲಿ ಮಂತ್ರಾಲಯಕ್ಕೆ ಹೋಗುವ ಸೇತುವ ಮುಳುಗಡೆಯಾಗುತ್ತಿತ್ತು. ಅದನ್ನು ಸಹ ವಿಶೇಷ ಅನುದಾನದ ಮೂಲಕ ಸೇತುವೆ ನಿರ್ಮಾಣ ಮಾಡಲಾಯಿತು.
Also read: ಸಾಧನೆ ಮಾಡಿ ಪುರಸ್ಕೃತರಾದ ಎಲ್ಲರೂ ಋಷಿ ಸಮಾನರೇ: ಡಾ. ಜಿ. ಎಲ್. ಹೆಗಡೆ ಅಭಿಪ್ರಾಯ
ಈ ಸಂದರ್ಭದಲ್ಲಿ ನಿಕಟ ಪೂರ್ವ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಕೆ. ಎಸ್. ಗುರುಮೂರ್ತಿ, ಕೊಳಗಿ ರೇವಣಪ್ಪ, ಎಂ. ಜಿ. ರಾಜೀವ್ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post