ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಶಿವಮೊಗ್ಗ ಜಿಲ್ಲೆಯ 35 ತಾಂಡಾ ಮತ್ತು ಶಿಕಾರಿಪುರ ತಾಲೂಕಿನ 9 ತಾಂಡಾದಲ್ಲಿ ನ್ಯಾಯಬೆಲೆ ಅಂಗಡಿಯ ಉಪ ಕೇಂದ್ರ ಜನತೆಗೆ ಅನುಕೂಲವಾಗುವಂತೆ ಕಾರ್ಯನಿರ್ವಹಿಸುತ್ತಿದೆ. ಹಾಗೂ ತಾಲೂಕಿನಲ್ಲಿ 20 ಸಾವಿರ ಕ್ವಿoಟಾಲ್ ಅಕ್ಕಿ ವಿತರಿಸಲಾಗುತ್ತಿದೆ ಎಂದು ಸಂಸದ ಬಿ. ವೈ. ರಾಘವೇಂದ್ರ MP Raghavendra ತಿಳಿಸಿದರು.
ತಾಲೂಕಿನ ದೊಡ್ಡ ಜೋಗಿಹಳ್ಳಿ ಗ್ರಾಮದಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಲ್ಲಿ ಉಚಿತ ಪಡಿತರವನ್ನು ನೀಡುವ ನ್ಯಾಯ ಬೆಲೆ ಅಂಗಡಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಯಾವೊಬ್ಬ ವ್ಯಕ್ತಿಯು ಹಸಿವಿನಿಂದ ಇರಬಾರದು ಎಂದು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯನ್ನು ಜಾರಿಗೆ ತಂದು ದೇಶದ ಹಳ್ಳಿ ಹಳ್ಳಿಗೂ ತಲುಪಿಸುತ್ತಿದ್ದಾರೆ. ಎಂದರು.
ಈ ಸಂದರ್ಭದಲ್ಲಿ ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ. ಎಸ್. ಗುರುಮೂರ್ತಿ, ಪಂಚಾಯಿತಿ ಅಧ್ಯಕ್ಷ ಬಸವರಾಜ್ ನಾಯ್ಕ್, ಈಸೂರು ಮಹಾ ಶಕ್ತಿಕೇಂದ್ರ ಅಧ್ಯಕ್ಷ ಕೊರಲಹಳ್ಳಿ ನಾಗರಾಜ್, ತಾಂಡಾ ಅಭಿವೃದ್ದಿ ಪ್ರಾಧಿಕಾರದ ಸದಸ್ಯ ರಮೇಶ್ ನಾಯ್ಕ್, ನಾಗರಾಜ್ ಸ್ವಾಮಿ, ರುದ್ರಮುನಿ, ಬೂತ್ ಸಮಿತಿಯ ಅನಿಲ್ ನಾಯ್ಕ್, ಆಹಾರ ಶಿರಸ್ತೆದಾರ್ ಗೀತಾ ಮತ್ತಿತರ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
Also read: ಧನಾತ್ಮಕ ಮನೋಭಾವ, ಆತ್ಮವಿಶ್ವಾಸದಿಂದ ಗುರಿಯತ್ತ ಗಮನಹರಿಸಿ ಮುನ್ನಡೆಯಿರಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post