ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪ್ರೇರಣ ಪಬ್ಲಿಕ್ ಶಾಲೆ ನಾವಿನ್ಯಯುತ ಚಿಂತನಾತ್ಮಕ ಕಲಿಕೆಗೆ ವೇದಿಕೆ. ಮಕ್ಕಳಲ್ಲಿ ಹೊಸ ಚಿಂತನೆಗಳನ್ನು ಮೂಡಿಸಿ ಮಕ್ಕಳಲ್ಲಿರುವ ಸೃಜನಾತ್ಮಕತೆ ಹೊರ ತರುವಲ್ಲಿ ಶಿಕ್ಷಕರು ಉತ್ತಮ ಮಾರ್ಗದರ್ಶನ ನೀಡಿದ್ದಾರೆ ಎಂದು ಸೋಮಶೇಖರಯ್ಯ ಹೇಳಿದರು.
ಪಿಇಎಸ್ ಪಬ್ಲಿಕ್ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ #National Science Day ಉದ್ಘಾಟಿಸಿ ಅವರು ಮಾತನಾಡಿದರು.
ಸುಯೋಗ್ ಮತ್ತು ದಿಗಂತ್ ಈ ಕಾರ್ಯಕ್ರಮದ ಕುರಿತು ರಸ ಪ್ರಶ್ನೆಯನ್ನು ನಡೆಸಿಕೊಟ್ಟರು. ವಿಜ್ಞಾನದ ಪ್ರಯೋಗಳನ್ನು 3ನೇ ತರಗತಿಯಿಂದ 8ನೇ ತರಗತಿಯ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು. ವಿಜ್ಞಾನದ ಮಹ್ವತವನ್ನು ಮಹಮ್ಮದ್ ಅಹ್ಮದ್ ಮತ್ತು ಅಮೋಘ್ ಜಿ ಅಡ್ಡೇರಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳು, ಮುಖೋಪಾಧ್ಯಯರು, ಸಂಯೋಜಕರು, ಶಾಲಾ ಶಿಕ್ಷಕ ವೃಂದದವರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು. ನಿರೂಪಣೆ ಮಿಥುನ್ ಮತ್ತು ಧ್ರುವ, 8ನೇ ತರಗತಿ ಮತ್ತು ವಂದನಾರ್ಪಣೆ ಆಯುಷ್ 3ನೇ ತರಗತಿ ನಡೆಸಿಕೊಟ್ಟರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
