ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ನೀರಾವರಿ, ಶಿಕ್ಷಣ ಹಾಗೂ ನಗರ ಅಭಿವೃದ್ಧಿ, ಸಮುದಾಯ ಭವನ ನಿರ್ಮಾಣ ಮಾಡುವ ಮೂಲಕ ಸಮಗ್ರ ಅಭಿವೃದ್ಧಿಯನ್ನು ದೇವರು ಮೆಚ್ಚುವ ರೀತಿಯಲ್ಲಿ ಸರ್ಕಾರದ ಆಸ್ತಿಯನ್ನು ಉಳಿಸುವ ಕಾರ್ಯ ಮಾಡಿದ್ದೇವೆ ಎಂದು ಸಂಸದ ರಾಘವೇಂದ್ರ MP Raghavendra ಹೇಳಿದರು.
ಶಿರಾಳಕೊಪ್ಪ ಪುರಸಭೆಗೆ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ವಿಜಯ ಲಕ್ಷ್ಮಿ ಲೋಕೇಶ್ ಅವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಅವರು, ಶಿರಾಳಕೊಪ್ಪ ನಗರೋತ್ತಾನ ಅಭಿವೃದ್ಧಿಗಾಗಿ 30 ಕೋಟಿ ಅನುದಾನ ನೀಡಲಾಗಿದೆ, ಶಿವಶರಣೆ ಅಕ್ಕ ಮಹಾದೇವಿ ಅವರ ಹೆಸರನ್ನು ಮಹಿಳಾ ಪಾಲಿ ಟೇಕ್ನಿಕ್ ಕಾಲೇಜಿಗೆ ಹೆಸರು ಇಡುವ ಮೂಲಕ 10 ಕೋಟಿ ಅನುದಾನವನ್ನು ನೀಡಿದ್ದೇವೆ, ನಗರದ ಮದ್ಯದಲ್ಲಿ ಇರುವ ಸ್ಟೇಡಿಯಂ ಅಭಿವೃದ್ಧಿ, ಸೊರಬ ರಸ್ತೆಗೆ 10 ಕೋಟಿ ಅನುದಾನದಲ್ಲಿ ರಸ್ತೆ ಹಾಗೂ ಅಲಂಕಾರಿಕ ಬೀದಿ ದೀಪದ ಕೆಲಸ, ಈ ರೀತಿಯಲ್ಲಿ ಶಿಕಾರಿಪುರ / ಶಿರಾಳಕೊಪ್ಪ ಅಭಿವೃದ್ಧಿಗಾಗಿ ನಿರ್ವಹಿಸುತ್ತಿದ್ದೇವೆ ಪ್ರಾಮಾಣಿಕವಾಗಿ ತಮ್ಮ ಕಾರ್ಯವನ್ನು ನಿರ್ವಹಿಸಿದ್ದೇನೆ ಎಂದು ತಿಳಿಸಿದರು.
ತಾಲ್ಲೂಕಿನಲ್ಲಿ ಅಭಿವೃದ್ಧಿ ವಿಷಯಕ್ಕೆ ಬಂದಾಗ ಯಾವುದೇ ಹಿನ್ನಡೆಯಾಗಿಲ್ಲ, ದೇಶದಲ್ಲಿಯೇ ಇದೊಂದು ಮಾದರಿ ತಾಲ್ಲೂಕಾಗಿ ಮಾಡುವಲ್ಲಿ ಪ್ರಾಮಾಣಿಕ ಪ್ರಯತ್ನ ಪಟ್ಟಿದ್ದೇವೆ ಎಂದು ಅವರು ತಿಳಿಸಿದರು.
Also read: ಮಳೆಯಿಂದ ಹಾನಿಗೊಳಗಾದ ಮನೆಯ ಕುಟುಂಬಕ್ಕೆ ಪರಿಹಾರದ ಚೆಕ್ ವಿತರಣೆ
ಈ ಸಂದರ್ಭದಲ್ಲಿ ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗುರುಮೂರ್ತಿ, ಅರಣ್ಯ ನಿಗಮದ ಉಪಾಧ್ಯಕ್ಷ ರೇವಣಪ್ಪ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಚನ್ನವೀರಪ್ಪ, ಹನುಮಂತಪ್ಪ, ಪುರಸಭೆ ಅಧ್ಯಕ್ಷ ಮಂಜುಳಾ ರಾಜು ಹಾಗೂ ಸದಸ್ಯರು, ಮತ್ತಿತರ ಮುಖಂಡರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post