ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮುಸಲ್ಮಾನ ಗೂಂಡಾಗಳಿಗೆ ಹೇಗೆ ಬುದ್ಧಿ ಕಲಿಸಬೇಕೆಂದು ನಮಗೆ ಗೊತ್ತಿದೆ. ಬಾಯಿ ಮಾತಿನಲ್ಲಿ ಹೇಳಿದರೆ ಕೇಳಲಿಲ್ಲವೆಂದರೆ, ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ್ ಅವರ ಸೂಚನೆಗಳನ್ನು ಗಣನೆಗೆ ತೆಗೆದುಕೊಂಡು ಅವರನ್ನು ಮಟ್ಟ ಹಾಕಲಾಗುವುದು ಎಂದು ಶಾಸಕ ಕೆ.ಎಸ್. ಈಶ್ವರಪ್ಪ MLA Eshwarappa ಹೇಳಿದರು.
ನಗರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ವಿಶ್ವವೇ ಮೆಚ್ಚುವಂತೆ ದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಮ್ಮ ವಿಚಾರ ಮತ್ತು ಸಿದ್ಧಾಂತ ಮೇಲೆ ಮುಸಲ್ಮಾನರು ಗೂಂಡಾಗಿರಿ ನಡೆಸುತ್ತಿದ್ದಾರೆ. ಪವೀಣ್, ಹರ್ಷರಂತಹ ಹಿಂದು ಯುವಕರನ್ನು ಹತ್ಯೆ ಮಾಡಿ ನಮ್ಮನ್ನು ಬೆದರಿಸಲು ಸಾಧ್ಯವಿಲ್ಲ ಹಾಗೂ ನಾವು ನಮ್ಮ ಸಿದ್ಧಾಂತಗಳಿಂದ ಹಿಂದೆ ಸರಿಯುವುದಿಲ್ಲ ಎಂದರು.
ಮುಸಲ್ಮಾನ ಗೂಂಡಾಗಳು ವ್ಯಕ್ತಿಯನ್ನು ಹತ್ಯೆ ಮಾಡಬಹುದು ಸಿದ್ಧಾಂತವನ್ನಲ್ಲ. ಇದನ್ನರಿಯದೆ ಆಕ್ರೋಶದಲ್ಲಿ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆಗೆ ಮುಂದಾಗಿರುವುದು ಹೇಡಿಯ ಲಕ್ಷಣ. ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಬೇಡಿ. ಪಕ್ಷವನ್ನು ನಾವು ಕಟ್ಟಿದ್ದಲ್ಲ. ನಮ್ಮ ಹಿರಿಯರ ಮುಖಂಡರು ಶ್ರಮಪಟ್ಟು ಪಕ್ಷವನ್ನು ಕಟ್ಟಿ, ಬೆಳೆಸಿದ್ದಾರೆ. ಅದರ ಫಲವಾಗಿ ನಾವು ಇಂದು ಅಧಿಕಾರ ಗಳಿಸಿದ್ದೇವೆ. ಯುವಮೋರ್ಚಾ ಸದಸ್ಯರು ಈಗ ಪಕ್ಷಕ್ಕಾಗಿ ಕೆಲಸ ಮಾಡಲು ಪ್ರಾರಂಭಿಸಿದ್ದಾರೆ. ಪಕ್ಷ ನಮಗೆ ಏನು ನೀಡಿತು ಎಂಬುದಕ್ಕಿಂತ ನಾವು ಪಕ್ಷಕ್ಕೆ ಏನು ನೀಡಿದ್ದೇವೆ ಎಂದು ಅರಿತುಕೊಳ್ಳಲಿ. ಹತ್ಯೆಯಾದ ಯುವಕನಿಗೆ ನ್ಯಾಯ ಒದಗಿಸಬೇಕು ಎಂದರು.
Also read: ಪ್ರವೀಣ್ ಹತ್ಯೆ ಪ್ರಕರಣ ತನಿಖೆ ಹೊಣೆ ಎನ್‌ಐಎ ಹೆಗಲಿಗೆ: ಸಿಎಂ ಬೊಮ್ಮಾಯಿ ಘೋಷಣೆ
ಹತ್ಯೆ ಮಾಡುತ್ತಿರುವ ದೇಶದ್ರೋಹಿಗಳಿಗೆ ಸರಿಯಾದ ಬುದ್ಧಿಕಲಿಸುವವರೆಗೆ ಬಿಡುವುದಿಲ್ಲ. ಕೇಂದ್ರ ಮತ್ತು ರಾಜ್ಯ ಎರಡರಲ್ಲೂ ಬಿಜೆಪಿ ಸರ್ಕಾರವಿದ್ದರೂ ಹಿಂದೂಗಳ ಹತ್ಯೆಯಾಗುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸುವುದು ಸಾಮಾನ್ಯ. ಆದರೆ ಕೊಲೆ-ಕೊಲೆಗೆ ಮಾಡುವ ಉದ್ಧೇಶ ನಮಗಿಲ್ಲ. ಕಾನೂನಾತ್ಮಕವಾಗಿ ಮುಸಲ್ಮಾನ ಕೊಲೆಗಡುಕರಿಗೆ ಬುದ್ಧಿ ಕಲಿಸುತ್ತೇವೆ. ಹಾಗೂ ಕಾನೂನಾತ್ಮಕ ತಿದ್ದುಪಡಿ ತರುವ ಬಗ್ಗೆ ಮುಖ್ಯಮಂತ್ರಿ, ರಾಜಾಧ್ಯಕ್ಷರೊಂದಿಗೆ ಚರ್ಚಿಸಿದ್ಧೇನೆ. ಅವರಿ ಪ್ರಧಾನಮಂತ್ರಿ ಮತ್ರು ಕೇಂದ್ರ ಗೃಹ ಸಚಿವರೊಂದಿಗೆ ಮಾತನಾಡಿ ರಾಜ್ಯದಲ್ಲಿ ಕಾನೂನಾತ್ಮಕ ತಿದ್ದುಪಡಿ ತರುವ ಬಗ್ಗೆ ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದರು.
ಮುಸಲ್ಮಾನ ಗೂಂಡಾಗಳ ಕೊಲೆಗಡುಕ ನೀತಿ ಮುಂದುವರೆ ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಆದಿತ್ಯನಾಥ್ ಅನುಸರಿಸುತ್ತಿರುವ ನೀತಿ ಜಾರಿ ಮಾಡುವ ಯೋಚನೆ ಮಾಡಲಾಗುವುದು ಎಂದು ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post