ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಂಕಿತ ಉಗ್ರರ ಬಂಧನ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದು, ಪೊಲೀಸ್ ಕಾರ್ಯಾಚರಣೆ ವೇಳೆ ದೊರೆತ ಸ್ಪೋಟಕ ಸಾಮಾಗ್ರಿಗಳ ಚಿತ್ರಗಳು ಸಾರ್ವಜನಿಕರಲ್ಲಿ ಇನ್ನಷ್ಟು ಆತಂಕ ಹುಟ್ಟಿಸುವಂತಿದೆ.
ಶಂಕಿತ ಉಗ್ರರು ತಾವು ತಯಾರಿಸಿದ ಬಾಂಬನ್ನು ಸ್ಪೋಟಿಸಲು ಶಿವಮೊಗ್ಗದ ತುಂಗಾನದಿಯ ದಡದಲ್ಲಿರುವ ಸ್ಥಳೀಯವಾಗಿ ಕೆಮ್ಮನಗುಂಡಿ ಎಂದು ಕರೆಯುವ ಜಾಗವನ್ನು ಆಯ್ದುಕೊಂಡಿದ್ದರು. ಹಾಗೂ ಈಗಾಗಲೇ ಪ್ರಾಯೋಗಿಕವಾಗಿ ಸ್ಫೋಟ ಮಾಡಿ ಯಶಸ್ವಿಯಾಗಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಯ ನಂತರದ ದಿನಗಳಲ್ಲಿ ಭಾರತ ದೇಶದ ರಾಷ್ಟ್ರ ಧ್ವಜವನ್ನು ಬಾಂಬ್ ಸಿಡಿಸಿದ ಜಾಗದ ಹತ್ತಿರ ಸುಟ್ಟು ಹಾಕಿ ಅದನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ. ಹಾಗೂ ಇತರೆ ಎಲೆಕ್ಟ್ರಾನಿಕ್ಸ್ ಗ್ಯಾಡ್‌ಗಳು, ಬಾಂಬ್ ಸ್ಫೋಟ ಮಾಡಿದ ಸ್ಥಳದಲ್ಲಿ ದೊರಕಿದ್ದು ಛಿದ್ರಗೊಂಡ ಬಾಂಬ್‌ನ ಅವಶೇಷಗಳು, ಬಾಂಬ್ ತಯಾರಿಸಲು ಬೇಕಾದ ಸಾಮಗ್ರಿಗಳು ರಿಲೆ ಸರ್ಕಿಟ್, ಬಲ್ಪ್, ಮ್ಯಾಚ್ ಬಾಕ್ಸ್, ವೈರ್, ಬ್ಯಾಟರಿ ಮತ್ತು ಸ್ಫೋಟಕ ವಸ್ತುಗಳು ಇತ್ಯಾದಿ ಅರೆಬರೆ ಸುಟ್ಟಿರುವ ಭಾರತದ ತ್ರಿವರ್ಣ ರಾಷ್ಟ್ರ ದ್ವಜ, ಪ್ರಮುಖ ದಸ್ತಾವೇಜುಗಳು ಮಹಜರು ಸ್ಥಳದಲ್ಲಿ ದೊರೆತಿದ್ದು ಅವುಗಳು ಚಿತ್ರ ಇಲ್ಲಿವೆ.




ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















