ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಡಿ.ಕೆ. ಶಿವಕುಮಾರ್ ವಿರುದ್ಧ ಯಾವ ತನಿಖಾ ಸಂಸ್ಥೆಗಳೂ ತನಿಖೆ ನಡೆಸಬಾರದಾ? ಏನಾದರೂ ಅಕ್ರಮ ಮಾಡಿಕೊಂಡಿರಲಿ ಎಂದು ಬಿಟ್ಟುಬಿಡಬೇಕಾ ಎಂದು ಶಾಸಕ ಕೆ.ಎಸ್. ಈಶ್ವರಪ್ಪ MLA Eshwarappa ಕಿಡಿ ಕಾರಿದ್ದಾರೆ.
ಈ ಕುರಿತಂತೆ ಮಾತನಾಡಿದ ಅವರು, ಡಿಕೆಶಿ ತಾವು ಯಾತಕ್ಕಾಗಿ ತಿಹಾರ್ ಜೈಲಿಗೆ ಹೋದರು ಎಂಬುದನ್ನು ಹೇಳಬೇಕು. ನ್ಯಾಶನಲ್ ಹೆರಾಲ್ಡ್ ಪತ್ರಿಕೆಗೆ ಬಹಳಷ್ಟು ಮಂದಿ ಹಣ ನೀಡಿರಬಹುದು. ಅದೇ ರೀತಿ ಡಿಕೆ ಸಹೋದರರು ನೀಡಿರುವ ಕುರಿತಾಗಿ ತನಿಖೆ ನಡೆಸಬಾರದಾ ಎಂದು ಪ್ರಶ್ನಿಸಿದರು.
ಈ ದೇಶದ ಸಂವಿಧಾನಿಕ ಅಸ್ತಿತ್ವವುಳ್ಳ ಸಿಬಿಐ, ಲೋಕಾಯುಕ್ತ ಸೇರಿದಂತೆ ತನಿಖಾ ಸಂಸ್ಥೆಗಳು ಅನುಮಾನದ ಮೇಲೆ ರೈಡ್ ಮಾಡಿದಾಗ ಅಕ್ರಮ ಸಂಪಾದನೆ ಮಾಡಿದ ಹಣ ಕಂತೆ ಕಂತೆ ದೊರೆತಿದ್ದು ಇಡಿಯ ದೇಶವೇ ನೋಡಿದೆ. ಅಲ್ಲದೇ, ದಾಖಲೆಗಳೂ ಸಿಕ್ಕಿದೆ. ಇವರು ಅಕ್ರಮ ನಡೆಸಿದ್ದಾರೆ ಎಂದು ಅನುಮಾನ ಬಂದರೂ ತನಿಖೆ ನಡೆಸದೇ ಸುಮ್ಮನೆ ಇರಬೇಕಾ ಎಂದು ಖಾರವಾಗಿ ಪ್ರಶ್ನಿಸಿದರು.
Also read: ಕುರುಬ ಸಮಾಜಕ್ಕೆ ಎಸ್’ಟಿ ಮೀಸಲಾತಿ, ಕುಲಶಾಸ್ತ್ರ ಅಧ್ಯಯನ ವರದಿ ನಂತರ ಕ್ರಮ: ಈಶ್ವರಪ್ಪ


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















