ಕಲ್ಪ ಮೀಡಿಯಾ ಹೌಸ್ | ಶ್ರೀನಗರ |
ಮೂವರು ಉಗ್ರರನ್ನು ಬೇಟೆಯಾಡಿದ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳ Security force ಮೇಲೆ ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಪೊಲೀಸರು 15 ದುಷ್ಕರ್ಮಿಗಳ ಹೆಡೆಮುರಿ ಕಟ್ಟಿದ್ದಾರೆ.
ಮಾರ್ಚ್ 16ರಂದು ಶ್ರೀನಗರದ ಶಂಕರಪೋರಾ ನೌಗಾಮ್’ನಲ್ಲಿ ಮೂವರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿತ್ತು. ಶಂಕರಾಪೋರ ವನಬಾಲ್’ನ ಪಕ್ಕದ ಪ್ರದೇಶಗಳಿಂದ ಜಮಾಯಿಸಿದ ದೊಡ್ಡ ಅಶಿಸ್ತಿನ ಗುಂಪು ಕೈಯಲ್ಲಿ ಲಾಠಿ ಮತ್ತು ಕಲ್ಲುಗಳನ್ನು ಹಿಡಿದುಕೊಂಡು ನಿಯೋಜಿತ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಆಧರಿಸಿ 15 ಮಂದಿಯನ್ನು ಬಂಧಿಸಲಾಗಿದೆ.
Also read: ದಿ ಕಾಶ್ಮೀರ್ ಫೈಲ್ಸ್ ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ ‘ವೈ ಕೆಟಗರಿ’ ಭದ್ರತೆ
ಭಯೋತ್ಪಾದಕ ಬಿಟ್ಟು ಹೋಗಿರುವ ಯಾವುದೇ ಸ್ಫೋಟಕಗಳಿಗೆ ಸಂಬಂಧಿಸಿದಂತೆ ನೈರ್ಮಲ್ಯೀಕರಣದ ಮೊದಲು ನಾಗರಿಕರು ಜಾಗವನ್ನು ಪ್ರವೇಶಿಸುವುದನ್ನು ತಡೆಯಲು ಎನ್ಕೌಂಟರ್ ನಡೆದ ಸ್ಥಳದ ಸುತ್ತಲೂ ಸೈನ್ಬೋಡ್’ಗಳನ್ನು ಇರಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post