ಕಲ್ಪ ಮೀಡಿಯಾ ಹೌಸ್ | ಸೊರಬ |
ಡೀಮ್ಡ್ ಅರಣ್ಯ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಲು ವೃಕ್ಷ ಲಕ್ಷ ಆಂದೋಲನ ಅನಂತಹಗಡೆ ಅಶಿಸರ ನೇತೃತ್ವದ ತಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ CM Basavaraja Bommai ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ರಾಜ್ಯ ಸರ್ಕಾರ ಘೋಷಣೆ ಮಾಡಿರುವ 330186 ಹೆಕ್ಟೇರ್ ಡೀಮ್ಡ್ ಅರಣ್ಯ ಸಂರಕ್ಷಣೆ ಮಾಡಲು ತಳಮಟ್ಟದಲ್ಲಿ ಕ್ರಿಯಾ ಯೋಜನೆಗಳನ್ನು ಸಿದ್ದಪಡಿಸಬೇಕು. ಕಂದಾಯ ಇಲಾಖೆ’ ಸಹಕಾರ ಪಡೆದು ಡೀಮ್ ಅರಣ್ಯ ಗುರುತಿಸಿ ಬೇಲಿ, ಕಂದಕ, ಮಲೆನಾಡು ದಟ್ಟ ಕಾನುಗಳ ರಕ್ಷಣೆಗೆ ವನೀಕರಣಕ್ಕೆ ಯೋಜನೆ ರೂಪಿಸಲು ರಾಜ್ಯದ ಪರಿಸರ ಸಂಘಟನೆಗಳ ಡಾ.ಟಿ.ವಿ. ರಾಮಚಂದ್ರ, ಡಾ. ಕೇಶವ ಕೊರ್ಸೆ, ಡಾ. ರಾಮಕೃಷ್ಣ, ಪ್ರೊ.ಬಿ. ಎಂ. ಕುಮಾರ ಸ್ವಾಮಿ, ಡಾ. ಪ್ರಕಾಶ ಮೇಸ್ತ, ಡಾ. ಬಾಲಚಂದ್ರ ಸಾಯಿಮನೆ, ಕೆ. ವೆಂಕಟೇಶ, ಶ್ರೀಪಾದ ಬಿಚ್ಚುಗತ್ತಿ ಮುಂತಾದ ಪರಿಸರ ಅರಣ್ಯ ತಜ್ಞರು ಒತ್ತಾಯಿಸಿದ್ದಾರೆ.
ಸುಪ್ರಿಂ ಕೋರ್ಟಿಗೆ ಅಫಿಡವೀಟ್ ಸಲ್ಲಿಸಿರುವುದರಿಂದ ಅರಣ್ಯ ಕಾಯಿದೆಯ ಅಡಿಯಲ್ಲಿ ಈ ಡೀಮ್ಡ್ ಅರಣ್ಯಗಳ ರಕ್ಷಣೆಗೆ ಸರ್ಕಾರ ಕಡ್ಡಾಯವಾಗಿ ಮುಂದಾಗಲೇ ಬೇಕಾದ ಪರಿಸ್ಥಿತಿ ಇದೆ ಎಂಬುದನ್ನು ಪರಿಸರ ಕಾರ್ಯಕರ್ತರು ಎತ್ತಿ ಹೇಳಿದ್ದಾರೆ. ರಾಜ್ಯ ಸರ್ಕಾರದ ಮನರಚಿತ ತಜ್ಞರ ಸಮಿತಿ ಡೀಮ್ಡ್ ಮಾನದಂಡ ಅನ್ವಯಿಸದ 773326 ಹೆಕ್ಟೇರ್‌ಗಳನ್ನು ಕೈ ಬಿಟ್ಟಿತು. ಕೇವಲ 330186 ಹೆಕ್ಟೇರ್ ಡೀಮ್ ಅರಣ್ಯ ಎಂದು ಈಗ ಘೋಷಿಸಲಾಗಿದೆ. ಕಳೆದ 20 ವರ್ಷಗಳಲ್ಲಿ ಹಲವು ಬಾರಿ ಪರಿಶೀಲನೆಗೆ ಒಳಗಾಗಿ ಉಳಿದುಕೊಂಡ ಕೇವಲ 33 ಡೀಮ್ಡ್ ಅರಣ್ಯ ಪ್ರದೇಶವನ್ನು ಉಳಿಸಿಕೊಳ್ಳಲೇಬೇಕಾದ ಗುರುತರ ಜವಾಬ್ದಾರಿ ಸರ್ಕಾರದ್ದಿದ 3.30 ಲಕ್ಷ ಹೆಕ್ಟೇರ ಡೀಮ್ ಅರಣ್ಯ ಘೋಷಣೆ ಆಗಿರುವ ಹಿನ್ನೆಲೆಯಲ್ಲಿ ರಾಜ್ಯದ ಸುಸ್ಥಿರ ಅಭಿವೃದ್ಧಿ ನಿಸರ್ಗ ಸಂಪತ್ತಿನ ಉಳಿವಿಗೆ ದೇಶದಲ್ಲೇ ಮಾದರಿ ಎನ್ನಬಹುದಾದ ಡೀಮ್ ಅರಣ್ಯ ಅಭಿವೃದ್ಧಿ ಯೋಜನೆ ರೂಪಿಸಿ ಜಾರಿಮಾಡಲು ಸರ್ಕಾರ ಮುಂದಾಗಬೇಕು ಎಂದು ಅರಣ್ಯ ಸಚಿವ ಉಮೇಶ ಕತ್ತಿ, ಮುಖ್ಯ ಕಾರ್ಯದರ್ಶಿ ವಂದಿತಾ ಶಾ ಅರಣ್ಯ ಪರಿಸರ ಇಲಾಖೆಯ ಅಪರ ಪ್ರಧಾನ ಕಾರ್ಯದರ್ಶಿ ಜಾವೇದ್ ಅರ್ ಕೇಂದ್ರ ಅರಣ್ಯ ಮಂತ್ರಾಲಯದ ದಕ್ಷಿಣ ಭಾರತ ಕಛೇರಿ ಮುಖ್ಯ ಸ್ಥ ಡಾ.ಕೆ.ಪಿ. ಸಿಂಗ್ ಅವರನ್ನು ಭೇಟಿ ಮಾಡಿ ನಾಡಿನ ಜನತೆಗಾಗಿ ಮನವಿ ಮಾಡಿರುವ ಕುರಿತು ಜೀವ ವೈವಿಧ್ಯ ಮಂಡಳಿಯ ನಿಕಟಪೂರ್ವ ಅಧ್ಯಕ್ಷ ಅನಂತಹಗಡ ಅತಿಸರ ತಿಳಿಸಿದ್ದಾರೆ.
Also read: ದುಷ್ಕರ್ಮಿಗಳು ವ್ಯಕ್ತಿಯನ್ನು ಹತ್ಯೆ ಮಾಡಬಹುದು ಸಿದ್ಧಾಂತವನ್ನಲ್ಲ: ಶಾಸಕ ಈಶ್ವರಪ್ಪ
ರಾಜ್ಯದ ಪಶ್ಚಿಮ ಘಟ್ಟದ ಜಿಲ್ಲೆಗಳ ಡೀಮ್ಡ್ ಅರಣ್ಯ ಪ್ರದೇಶಗಳಿಗೆ ಸರ್ಕಾರ ಮೊದಲ ಆದ್ಯತೆ ನೀಡಬೇಕು. ಇಲ್ಲಿರುವ ಡೀಮ್ಡ್ ಅರಣ್ಯಗಳು ದಟ್ಟ ಕಾನುಗಳು, ದೇವರ ಕಾಡುಗಳು, ಪಾರಂಪರಿಕವಾಗಿ ಸ್ಥಳೀಯ ಜನರು ಗ್ರಾಮ ಸಾಮೂಹಿಕ ನೈಸರ್ಗಿಕ ಭೂಮಿಯನ್ನು ರಕ್ಷಿಸಿಕೊಂಡು ಬಂದಿದ್ದಾರೆ. ಇಲ್ಲಿ ವಿನಾಶದ ಅಂಚಿನ ಸಸ್ಯ ಪ್ರಭೇದಗಳು, ವನ್ಯಜೀವಿಗಳು, ರಾಂಪತ್ರೆ ಜಡ್ಡಿ, ಜೇನು ಕಾಡುಗಳಿವೆ. ಶಿವಮೊಗ್ಗ, ಚಿಕ್ಕಮಗಳೂರು, ದ.ಕ., ಉಡುಪಿ, ಉ.ಕ., ಬೆಳಗಾವಿ, ಹಾಸನ, ಚಾಮರಾಜನಗರ ಜಿಲ್ಲೆ ಸೇರಿದಂತೆ ಪಶ್ಚಿಮ ಘಟ್ಟದಲ್ಲಿ ಒಟ್ಟು 168905 ಹೆಕ್ಟೇರ್ ಡೀಮ್ಡ್ ಅರಣ್ಯ ಪ್ರದೇಶಗಳಿವೆ. ಆದ್ದರಿಂದ ಈ ಜಿಲ್ಲೆಗಳಲ್ಲಿ ಈ ವರ್ಷವೇ ಡೀಮ್ಮ ಅರಣ್ಯ ಅಭಿವೃದ್ಧಿಗೆ ತಯಾರಿ ಶುರುವಾಗಬೇಕು ಎಂದು ಒತ್ತಾಯಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post