ಕಲ್ಪ ಮೀಡಿಯಾ ಹೌಸ್ | ಸೊರಬ |
ಯುವಕರು ತಮ್ಮ ಹುಟ್ಟುಹಬ್ಬವನ್ನು ಧೂಮಪಾನ, ಮದ್ಯಪಾನ ಪಾರ್ಟಿ, ಮೋಜು, ಮಸ್ತಿ ಮಾಡಿ ಹಣವನ್ನು ಹಾಳು ಮಾಡಿ,
ಆರೋಗ್ಯವನ್ನು ಹಾಳು ಮಾಡುವ ಬದಲು ಸಮಾಜ ಸೇವೆಯಲ್ಲಿ ತೊಡಗಿದರೆ ದೇಶಕ್ಕೆ ಅನುಕೂಲವಾಗುತ್ತದೆ ಎಂದು ಜೇಸಿಐ ಭಾರತದ ಹಸಿರೀಕರಣದ ರಾಷ್ಟ್ರೀಯ ಸಂಯೋಜಕರಾದ ಪ್ರಶಾಂತ್ ದೊಡ್ಡಮನೆ ಹೇಳಿದರು.
ಸೊರಬದ ಕರಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜೆಸಿಐ ಪಾರ್ಕನ್ನು ಸ್ಥಾಪಿಸುವ ಉದ್ದೇಶದಿಂದ ಹುಟ್ಟು ಹಬ್ಬದ ಪ್ರಯುಕ್ತವಾಗಿ ಪಾರ್ಕ್ ನ ಸುರಕ್ಷತೆಗೋಸ್ಕರ ಕಲ್ಲುಕಂಭ ವಿತರಿಸಿ ಗಿಡಗಳನ್ನು ನೆಟ್ಟು ಹುಟ್ಟುಹಬ್ಬ ಆಚರಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿದರು.
ದೊಡ್ಡಮನೆ ರಾಮಪ್ಪ ಶ್ರೀಧರ್ ಸೇವಾ ಟ್ರಸ್ಟ್ ವತಿಯಿಂದ ಕಳೆದ 8 ರಿಂದ ಹತ್ತು ವರ್ಷಗಳಿಂದ ಹುಟ್ಟು ಹಬ್ಬದ ಪ್ರಯುಕ್ತವಾಗಿ ತೆಂಗಿನ ಗಿಡಗಳ ವಿತರಣೆ, ಸರ್ಕಾರಿ ಪ್ರೌಢಶಾಲೆ ಜಡೆಯಲ್ಲಿ ಜೇಸಿ ಪಾರ್ಕ್ ನ ನಿರ್ಮಾಣ, ಸೊರಬದ ಚಿಕ್ಕಪೇಟೆಯಲ್ಲಿ ಗಿಡಗಳನ್ನು ನೆಟ್ಟು, ಪೈಪ್ ಲೈನ್ ವ್ಯವಸ್ಥೆ, ಗಿಡಗಳ ಸಂರಕ್ಷ ಣೆಗೋಸ್ಕರ ಟ್ರೀ ಗಾರ್ಡ್ ಗಳ ಅಳವಡಿಕೆ, ಸೊರಬ ಚಾಮರಾಜಪೇಟೆಯಲ್ಲಿ ಗಿಡಗಳನ್ನು ನೆಟ್ಟು ಟ್ರೀ ಗಾರ್ಡ್ ಗಳ ಅಳವಡಿಕೆ ಹಾಗೂ ಇನ್ನೂ ಕೆಲವು ಶಾಲೆಗಳಲ್ಲಿ ಗಿಡಗಳ ವಿತರಣೆ ಹೀಗೆ ಹುಟ್ಟುಹಬ್ಬವನ್ನು ಹಸಿರೀಕರಣದ ಕಾರ್ಯಗಳ ಜತೆಗೆ ಮಾಡುತ್ತಾ ಬಂದಿದ್ದೇವೆ ಎಂದು ತಿಳಿಸಿದರು.
ಅದೇ ರೀತಿಯಾಗಿ ಜ್ಯೂನಿಯರ್ ಛೇಂಬರ್ ಇಂಟರ್ ನ್ಯಾಷನಲ್ ನ 2018 ರ ಸೊರಬ ಘಟಕದ ಅಧ್ಯಕ್ಷರಾದಾಗ ಪರ್ಯಾವರಣ ಯಾತ್ರೆ , 2019 ರಲ್ಲಿ ವಲಯದ ಸಂಯೋಜಕ ರಾದಾಗ ಪರ್ಯಾವರಣ ಸಪ್ತಾಹ , 2020ರಲ್ಲಿ ವಲಯದ ಉಪಾಧ್ಯಕ್ಷರಾದಾಗ ಪರ್ಯಾವರನಣ ಕಿ ಸಾಥ, 2021ರಲ್ಲಿ ವಲಯದ ಅಧ್ಯಕ್ಷರಾದಾಗ ಪರ್ಯಾವರಣ್ ಪರಿವಾರ ಹಾಗೂ 2022ರಲ್ಲಿ ಹಸಿರೀಕರಣದ ರಾಷ್ಟ್ರೀಯ ಸಂಯೋಜಕರಾಗಿ ಈ ವರ್ಷ ಪರ್ಯಾವರಣ್ ಮಿತ್ರ ಎಂಬ ಧ್ಯೇಯವಾಕ್ಯದೊಂದಿಗೆ ಇಪ್ಪತ್ತುಕ್ಕೂ ಹೆಚ್ಚು ರಾಜ್ಯಗಳಲ್ಲಿ 150 ಹೆಚ್ಚು ಪಾರ್ಕ್ ಗಳನ್ನು ಮಾಡಲು ಈಗಾಗಲೇ ಚಾಲನೆಯನ್ನು ನೀಡಿ, ಐನೂರಕ್ಕೂ ಹೆಚ್ಚು ಪಾರ್ಕ್ ಗಳನ್ನು ಮಾಡುವ ಉದ್ದೇಶ ಹೊಂದಿದೆ. ಇದರ ಜೊತೆಗೆ ಯುವಜನತೆಯಲ್ಲಿ ಹಸಿರೀಕರಣದ ಬಗ್ಗೆ ಆಸಕ್ತಿ ಮೂಡಿಸಲು ಹಲವಾರು ತರಬೇತಿಗಳನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.
Also read: ಪಿಕಪ್ ವ್ಯಾನ್ ಮರಕ್ಕೆ ಡಿಕ್ಕಿ: 10 ಜನರ ದುರ್ಮರಣ
ಈ ಕಾರ್ಯಕ್ರಮದಲ್ಲಿ ಕರಡಿಗೆರೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಸುಮಿತ್ರಾ ನಾಯಕ್ , ಶಿಕ್ಷಕರಾದ ಕೆ. ಮಂಜಪ್ಪ, ಎಸ್ ಡಿಎಂಸಿ ಅಧ್ಯಕ್ಷರಾದ ಮಂಜುನಾಥ್, ಉಪಾಧ್ಯಕ್ಷರಾದ ಸುಶೀಲಾ, ಸದಸ್ಯರಾದ ಪ್ರೇಮ್ ಕುಮಾರ್, ರಾಜು, ಪಲ್ಲವಿ, ಮಮತಾ, ಸುಮಾ, ಹೊವಳೆಶ ಪೋಷಕರಾದ ರಾಘವೇಂದ್ರ, ಜೆಸಿಐ ಸೊರಬ ಸಿಂಧೂರ ಘಟಕದ ಅಧ್ಯಕ್ಷರಾದ ಸಂಧ್ಯಾ ಪರಶುರಾಮ್ ಕರಡಿಗೆರೆ
ಮುಂತಾದವರು ಉಪಸ್ಥಿತರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post