ಕಲ್ಪ ಮೀಡಿಯಾ ಹೌಸ್ | ಸೊರಬ |
ಸಹಕಾರ ಮನೋಭಾವ ಹೊಂದಿದ್ದ ಗಣಪತಿ ಭಟ್ಟರು ಸರಳ ಸಜ್ಜನರು, ಅವರ ಸರಳ ಸಜ್ಜನತೆಯೆ ಹಲವು ಆತ್ಮೀಯರನ್ನು ಕಲೆಹಾಕಿತ್ತು ಎಂದು ನಿವೃತ್ತ ಬ್ಯಾಂಕ್ ಅಧಿಕಾರಿ ಶಿವಾನಂದ ದೀಕ್ಷಿತರು ಹೇಳಿದರು.
ತಾಲ್ಲೂಕು ಮುಟಗುಪ್ಪೆ ಗ್ರಾಮದ ಮಾಜಿ ಮಾಮ್ಕೋಸ್ ನಿರ್ದೇಶಕ ದಿ.ಗಣಪತಿ ಭಟ್ ಮನೆಯಲ್ಲಿ ನಡೆದ ವರ್ಷಾಂತಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಪ್ರಾಸ್ತಾವಿಕ ಮಾತನಾಡಿದ ರಂಗ ಕಲಾವಿದ ದೇವೇಂದ್ರ ಬೆಳೆಯೂರು, ಸಮಾಜಮುಖಿ ಗಣಪತಿಭಟ್ಟರ ಸಾಮಾಜಿಕ ಚಟುವಟಿಕೆಗಳ ಕುರಿತು ಮಾತನಾಡಿದ ಅವರು, ಸಾಹಿತಿ ತಿರುಮಲ ಮಾವಿನಕುಳಿ, ಭಟ್ಟರ ತಮ್ಮ ನಡುವಿನ ಬಾಂಧವ್ಯ ಕುರಿತು ಹೇಳಿದರು.
ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದ ವೇದ ವಿದ್ವಾನ್ ಗಾಳಿ ವೆಂಕಟೇಶಭಟ್ಟರು ಕೃತಿಯ ಕುರಿತು ಮಾತನಾಡಿದರು.
ಈ ವೇಳೆ ಗೋಕರ್ಣದ ವಿವಿಗೆ ಸಹಾಯಾರ್ಥವಾಗಿ ಧನದಾನ, ವಿದ್ಯಾರ್ಥಿ ವಿನಾಯಕ ಜಾಲಿಮರದ ಇವರಿಗೆ ಪ್ರೋತ್ಸಾಹ ಧನ, ಗುರು ಶ್ರೇಷ್ಠ ರಿಗೆ, ವಿಷೇಶವಾಗಿ ಪ್ರಸಿದ್ಧ ಚಿತ್ರಗಾರ, ಶಿಲ್ಪಿ ಉತ್ತರ ಪ್ರದೇಶದ ವಿಪಿನ್ ಬಗೇರಿಯಾ ಅವರಿಗೆ ಸಮ್ಮಾನ ಹಮ್ಮಿಕೊಳ್ಳಲಾಗಿತ್ತು. ಸಹಕಾರಿ ಧುರೀಣ ಹೆಚ್.ಎಸ್. ಮಂಜಪ್ಪ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಜಿಪಂ ಉಪಾಧ್ಯಕ್ಷ ಪಾಣಿರಾಜಪ್ಪ, ಸ್ಮರಣ ಸಂಚಿಕೆಯ ಸಂಪಾದಕ ಬಿಎನ್ಸಿ ರಾವ್ ಬರಿಗೆ, ಕುಟುಂಬದ ಕಲಾವತಿ ಗಣಪತಿಭಟ್, ರಮೇಶ್, ಪ್ರಶಾಂತ್, ಉಷಾ, ಕವಿತಾ, ರುಕ್ಮಾವತಿ, ವಿಶಾಲಾಕ್ಷಿ, ಗೌರಮ್ಮ, ಮಂಜುನಾಥ್, ಅನೇಕ ಪ್ರಾಜ್ಞರು, ಮುಟಗುಪ್ಪೆ ಗ್ರಾಮಸ್ಥರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post