ಕಲ್ಪ ಮೀಡಿಯಾ ಹೌಸ್ | ಸೊರಬ |
ಇಲ್ಲಿನ ಉಳವಿಯ ವಿವೇಕ ಮಿತ್ರ ಬಳಗದ ಆಶ್ರಯದಲ್ಲಿ ರಾಘವೇಂದ್ರ ಶಾಲೆಯಲ್ಲಿ ಆಯೋಜಿಸಲಾಗಿದ್ದ ಮಹಾಭಾರತ ವಿಷಯ ಆಧಾರಿತ ರಸಪ್ರಶ್ನೆ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು.
ಈ ವೇಳೆ ಮಾತನಾಡಿದ ಅಧ್ಯಕ್ಷರಾದ ಪುಟ್ಟಸ್ವಾಮಿ, ಇಂತಹ ರಸಪ್ರಶ್ನೆ ಕಾರ್ಯಕ್ರಮಗಳು ಮಕ್ಕಳ ಜ್ಞಾನಾಭಿವೃದ್ಧಿಗೆ ಪೂರಕವಾಗಿದ್ದು, ಇದು ಇಲ್ಲಿಗೇ ಸೀಮಿತಗೊಳ್ಳಬಾರದು. ಬದಲಾಗಿ ನಿರಂತರತೆ ಕಾಯ್ದುಕೊಳ್ಳಬೇಕು. ಮಕ್ಕಳಿಗೆ ನಮ್ಮ ಪರಂಪರೆಯ ಜ್ಞಾನದ ಅರಿವು ಮೂಡಿಸಲು ಎಲ್ಲರ ಸಹಕಾರದಲ್ಲಿ ಮುಂದುವರೆಸೋಣ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ 4ರಿಂದ 10ನೆಯ ತರಗತಿವರೆಗಿನ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡಿದ್ದರು.

Also read: ಸಂಚಾರಿ ಆರೋಗ್ಯ ಕ್ಲಿನಿಕ್ ವಾಹನಕ್ಕೆ ಚಾಲನೆ
ಸ್ಪರ್ಧೆಯಲ್ಲಿ ಮಯೂರ ವರ್ಮ ಪ್ರಥಮ ಹಾಗೂ ವೀರ ಮದಕರಿ ನಾಯಕ ತಂಡ ದ್ವಿತೀಯ ಸ್ಥಾನ ಪಡೆಯಿತು. ಎಲ್ಲ ತಂಡಗಳಿಗೂ ನಮ್ಮ ನಾಡಿನ ಪುಣ್ಯ ಪುರುಷರ ವೀರಮಾತೆಯರ ಹೆಸರು ಇಡಲಾಗಿತ್ತು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post