ಕಲ್ಪ ಮೀಡಿಯಾ ಹೌಸ್ | ಸೊರಬ |
ಪುರಾಣ, ಇತಿಹಾಸದ ಶಕ್ತಿ ಕೇಂದ್ರವಾದ ಚಂದ್ರಗುತ್ತಿ ದಸರಾ ಆಚರಣೆಯ ಜೊತೆಗೆ ಈ ನೆಲೆಯ ಜೀವವೈವಿಧ್ಯ ರಕ್ಷಣೆಗೆ ಸಂಕಲ್ಪ ತೊಡಬೇಕು ಎಂದು ರಾಜ್ಯ ಜೀವವೈವಿಧ್ಯ ಮಂಡಳಿಯ ಎಕ್ಸ್’ಪರ್ಟ್ ಕಮಿಟಿ ಸದಸ್ಯ ಶ್ರೀಪಾದ ಬಿಚ್ಚುಗತ್ತಿ ಹೇಳಿದರು.
ಚಂದ್ರಗುತ್ತಿಯಲ್ಲಿ ಧಾರ್ಮಿಕ ದತ್ತಿ ಇಲಾಖೆ, ತಾಲೂಕು ಆಡಳಿತ, ಕನ್ನಡ ಸಾಂಸ್ಕೃತಿ ಇಲಾಖೆ, ಗ್ರಾಮ ಪಂಚಾಯಿತಿ ಮತ್ತು ದೇವಸ್ಥಾನ ವ್ಯವಸ್ಥಾಪನ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ರೇಣುಕಾ ಪರಮೇಶ್ವರಿ ಅಮ್ಮನವರ ಶರನ್ನವರಾತ್ರಿ ಹಾಗೂ ವಿಜಯದಶಮಿ ಉತ್ಸವದ 2ನೇ ದಿನದ ಸಮಾರೋಪ ಸಮಾರಂಭ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಪ್ರಸ್ತುತ ನೈಸರ್ಗಿಕವಾಗಿ ಅನೇಕ ಅತಿರೇಕಗಳು ಈ ಭಾಗದಲ್ಲಿ ನಡೆಯುತ್ತಿದ್ದು ಪ್ರಾಚೀನ ದೇಗುಲವೂ ಸೇರಿದಂತೆ ಇಲ್ಲಿನ ಪರಿಸರವೂ ಹಾನಿಗೊಳಗಾಗಲಿದೆ ಎಂದು ಎಚ್ಚರಿಸಿದರು.
ಉತ್ಸವಕ್ಕೆ ಸಹಕರಿಸಿದ ಸ್ವಯಂ ಸೇವಕರನ್ನು ಗುರುತಿಸಿ ಗೌರವಿಸುತ್ತಿರುವುದು ಶ್ಲಾಘನೀಯ, ನಿರಂತರ ಕ್ರಿಯಾತ್ಮಕ ಚಟುವಟಿಕೆಗಳಿಗೆ ಎಲ್ಲರ ಸಹಕಾರ ಅತ್ಯಗತ್ಯ, ನಿರಂತರವಾಗಿ ದಸರಾ ಉತ್ಸವ ಸಂಪನ್ನಗೊಳ್ಳಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಪ್ರಸನ್ನ ಶೇಟ್ ವಹಿಸಿದ್ದರು. ಉತ್ಸವಕ್ಕೆ ಕೈಜೋಡಿಸಿದ ಕಂದಾಯ ಇಲಾಖೆ ಸಿಬ್ಬಂದಿ ವರ್ಗ, ದೇವಸ್ಥಾನದ ಸಿಬ್ಬಂದಿ ವರ್ಗದವರು, ಆರಕ್ಷಕ ಠಾಣೆ ಸಿಬ್ಬಂದಿ, ಸಹಕರಿಸಿದ ಎಲ್ಲರಿಗೂ ವಿಶೇಷವಾಗಿ ಗೌರವಿಸಿ ಸನ್ಮಾನಿಸಲಾಯಿತು.
Also read: ಅ.8ರಂದು 20 ವರ್ಷಗಳಲ್ಲಿ ಪ್ರಧಾನಮಂತ್ರಿ ಮೋದಿಯವರ ಸಾಕಾರವಾದ ಕನಸುಗಳು ಕಾರ್ಯಕ್ರಮ
ಸತತ ಒಂಬತ್ತು ದಿನಗಳ ಕಾಲ ದೇವಸ್ಥಾನಕ್ಕೆ ಬರುವಂತಹ ಭಕ್ತರಿಗೆ ಅನ್ನದಾಸೋಹ ಸೇವೆ ನೆರವೇರಿಸಿದರು. ಸಮಾರೋಪ ಸಮಾರಂಭ ಬಳಿಕ ಖ್ಯಾತ ಯಕ್ಷಗಾನ ಕಲಾವಿದರಿಂದ ಚಂದ್ರಹಾಸ ಯಕ್ಷಗಾನ ಪ್ರದರ್ಶನ ನಡೆಯಿತು.
ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ವಿ.ಎಲ್. ಶಿವಪ್ರಸಾದ್, ಸಮಿತಿಯ ಸದಸ್ಯರಾದ ಪ್ರವೀಣ್ ಮಿರ್ಜಿ, ನಟರಾಜ್, ಶಿವಶಂಕರ್ ಗೌಡ್ರು, ದೇವಿಂದ್ರಪ್ಪ, ಲಲಿತಾ ಮಹೇಂದ್ರ ಶೆಟ್ಟಿ, ಕಮಲಾಕ್ಷಿ, ಪ್ರಮುಖರಾದ ಪರಶುರಾಮ್ ಬೋವಿ, ದಿನೇಶ್ ಅಂಚೆ, ಸೇರಿದಂತೆ ಇನ್ನು ಮುಂತಾದ ಗಣ್ಯ ವ್ಯಕ್ತಿಗಳು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post