No Result
View All Result
Rani KoHEnur Calls Transgender Bill “Absurd”, Questions Lawmakers in Explosive Podcast Interview
English Articles

Rani KoHEnur Calls Transgender Bill “Absurd”, Questions Lawmakers in Explosive Podcast Interview

by ಕಲ್ಪ ನ್ಯೂಸ್
April 9, 2026
0

Kalpa Media House  |  Mumbai | Artist, drag performer, and activist Rani KoHEnur (Sushant Divgikar) has ignited widespread conversation following...

Read moreDetails
RPF team Seized 40.495 Kgs Ganja at Ballari Railway station

RPF team Seized 40.495 Kgs Ganja at Ballari Railway station

April 7, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

Extension of Special Train Services to Manage Summer Rush

April 7, 2026
Interior / upgradation of Next-Generation Amrit Bharat Coaches. Sample coach ready

Interior / upgradation of Next-Generation Amrit Bharat Coaches. Sample coach ready

April 6, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

Special Train Between Bengaluru Cantt and Chennai

April 3, 2026
  • Advertise With Us
  • Grievances
  • About Us
  • Contact Us
Sunday, April 12, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ ಸೊರಬ

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ವರದಕ್ಷಿಣೆ ಕಿಚ್ಚಿಗೆ ಸೊಸೆ ಪಾಲಿಗೆ ಕಿರಾತಕರಾದ ಅತ್ತೆ-ಮಾವ, ಅಸಹಾಯಕನಾದ ಗಂಡ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
April 3, 2026
in ಸೊರಬ
0
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಸೊರಬ  |

ಅವಳು ಮತ್ತೊಮ್ಮೆ ತಾಯಿಯಾಗುವ ಸಂಭ್ರಮದಲ್ಲಿದ್ದಳು. ಹೊಟ್ಟೆಯಲ್ಲಿ ಐದು ತಿಂಗಳ ಜೀವವೊಂದು ಆಕಾರ ಪಡೆಯುತ್ತಿತ್ತು. ಕೈಯಲ್ಲಿ ಹಿಡಿದ ಸ್ಟೆತಸ್ಕೋಪ್ ಮೂಲಕ ಸಾವಿರಾರು ಜನರ ಜೀವ ಉಳಿಸುತ್ತಿದ್ದ ಆ ‘ನರ್ಸ್’ ಕೈಗಳು, ಇಂದು ತಾನೇ ಜೀವನ್ಮರಣ ಹೋರಾಟ ನಡೆಸಿ ಸೋತು ಹೋಗಿವೆ.

ಪ್ರೀತಿ ಮಾಡಿ ಮದುವೆಯಾದ ಪತಿಯ ಮೇಲಿನ ಅನುರಾಗ, ಇಬ್ಬನಿ ಅರಳುವಂತಿದ್ದ ಪುಟ್ಟ ಮಗಳ ಮುಖ.. ಯಾವುದೂ ಅವಳನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ವರದಕ್ಷಿಣೆ ಎಂಬ ಕಿಚ್ಚು, ಐದು ತಿಂಗಳ ಗರ್ಭಿಣಿ ಶ್ವೇತಾ (30) ಎಂಬ ನಂದಾದೀಪವನ್ನು ಜೀವಂತವಾಗಿ ದಹಿಸಿಬಿಟ್ಟಿದೆ.

Also Read: ಶಿಕಾರಿಪುರ | ಸಂಭ್ರಮದ ಹುಚ್ಚರಾಯಸ್ವಾಮಿಯ ಬ್ರಹ್ಮ ರಥೋತ್ಸವಕ್ಕೆ ಹರಿದು ಬಂದ ಜನಸಾಗರ

ಪ್ರೀತಿಯ ಹಾದಿಯಲ್ಲಿ ಕೆನ್ನಾಲಿಗೆಯ ನೆರಳು
ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಉಳವಿಯ ಮಂಜಪ್ಪ ಮತ್ತು ನಾಗರತ್ನ ದಂಪತಿಯ ಪುತ್ರಿ ಶ್ವೇತಾ, ಹೊಡಬಟ್ಟೆಯ ನವೀನ್ ಎಂಬುವವರನ್ನು ಪ್ರೀತಿಸಿದ್ದರು. 2020ರ ಮೇ ತಿಂಗಳಲ್ಲಿ ಪೋಷಕರ ಸಮ್ಮತಿಯೊಂದಿಗೆ ಇಬ್ಬರೂ ಹಸೆಮಣೆ ಏರಿದ್ದರು. ವೈವಾಹಿಕ ಜೀವನದ ಫಲವಾಗಿ ಒಂದು ಹೆಣ್ಣು ಮಗುವೂ ಜನಿಸಿತ್ತು. ಆದರೆ, ಈ ಸುಂದರ ಸಂಸಾರಕ್ಕೆ ಕಂಟಕವಾಗಿದ್ದು ಮಾತ್ರ ಸ್ವಂತ ಅತ್ತೆ-ಮಾವ. ಹಿರಿಯ ಮಗನ ಮೇಲೆ ಅತಿ ಪ್ರೀತಿ, ಕಿರಿಯ ಮಗ ನವೀನ್ ಮತ್ತು ಸೊಸೆ ಶ್ವೇತಾ ಮೇಲೆ ನಿರಂತರ ದ್ವೇಷ – ಇದು ಆ ಮನೆಯಲ್ಲಿ ನಿತ್ಯೋತ್ಸವವಾಗಿತ್ತು.ಕರಾಳ ಮಾರ್ಚ್ 29: ಅಂದು ನಡೆದಿದ್ದೇನು?
ಕಳೆದ ಭಾನುವಾರ (ಮಾರ್ಚ್ 29) ಆ ಮನೆಯಲ್ಲಿ ಸಂಭವಿಸಿದ್ದು ಸಣ್ಣ ಜಗಳವಲ್ಲ, ಅದು ಅಮಾನವೀಯತೆಯ ಪರಾಕಾಷ್ಠೆ. ಅತ್ತೆ ಜಾನಕಿ ಮತ್ತು ಮಾವ ಸಣ್ಣಪ್ಪ ಕ್ಷುಲ್ಲಕ ಕಾರಣಕ್ಕೆ ತೆಗೆದ ಗಲಾಟೆ ರಾಜಿ ಪಂಚಾಯ್ತಿಯಲ್ಲಿ ಮುಗಿಯಬೇಕಿತ್ತು. ಆದರೆ, ಇವರ ಮನಸ್ಸಿನಲ್ಲಿದ್ದ ಕ್ರೌರ್ಯ ಪೆಟ್ರೋಲ್ ರೂಪದಲ್ಲಿ ಹೊರಬಂತು. ನಡುಮನೆಯಲ್ಲೇ ಅಸಹಾಯಕ ಗರ್ಭಿಣಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಯಿತು.

“ಮುಖ ಸೇರಿದಂತೆ ದೇಹದ ಶೇ. 90ರಷ್ಟು ಭಾಗ ಸುಟ್ಟು ಕರಕಲಾಗಿತ್ತು. ಮಣಿಪಾಲ್ ಆಸ್ಪತ್ರೆಯಲ್ಲಿ ಮೂರು ದಿನಗಳ ಕಾಲ ಆಕೆ ಸಾವು-ನೋವಿನ ನಡುವೆ ಹೋರಾಟ ನಡೆಸಿದಳು. ಆದರೆ ಏಪ್ರಿಲ್ 1ರ ರಾತ್ರಿ ವಿಧಿಯ ಆಟದ ಮುಂದೆ ವೈದ್ಯಕೀಯ ಚಿಕಿತ್ಸೆ ಸೋಲೊಪ್ಪಿತು. ಶ್ವೇತಾ ಚಿಕಿತ್ಸೆ ಫಲಿಸದೇ 5 ತಿಂಗಳ ಗರ್ಭಿಣಿ ಸಾವನ್ನಪ್ಪಿದಳು. ಶ್ವೇತಾ ಹೊಟ್ಟೆಯಲ್ಲಿದ್ದ ಮಗುವನ್ನು ತುರ್ತು ಶಸ್ತ್ರ ಚಿಕಿತ್ಸೆ ನಡೆಸಿ ಬದುಕಿಸೋ ಪ್ರಯತ್ನ ಮಾಡಿದರೂ ಅದು ಸಾಧ್ಯವೇ ಆಗಲಿಲ್ಲ”

ತಂದೆ-ತಾಯಿ ಮತ್ತು ಸಹೋದರನ ರೋದನ
“ನನ್ನ ಮಗಳು-ಅಳಿಯ ತುಂಬಾ ಚೆನ್ನಾಗಿದ್ದರು. ಆ ಅತ್ತೆ ಜಾನಕಿ, ಮಾವ ಸಣ್ಣಪ್ಪ, ದೊಡ್ಡ ಮಗ ಹೇಮಂತ್, ಅವರ ಪತ್ನಿ ದಿವ್ಯ, ಸಣ್ಣಪ್ಪ ಅವರ ತಂಗಿ ಮಂಜಮ್ಮ, ಪುತ್ರಿ ಸುಜಾತ ಕಿರುಕುಳ ನೀಡಿ ಪೆಟ್ರೋಲ್ ಸುರಿದು ನನ್ನ ಮಗಳನ್ನು ಕೊಂದಿದ್ದಾರೆ ಎಂದು ತಾಯಿ ನಾಗರತ್ನ ಆಕ್ರೋಶ ಹೊರಹಾಕಿದ್ದಾರೆ.ಶ್ವೇತಾ ತಂದೆ ಮಂಜಪ್ಪ ಅವರು “ಮಧ್ಯರಾತ್ರಿಯೆಲ್ಲಾ ಓಡಿ ಮನೆಗೆ ಬರುತ್ತಿದ್ದಳು, ಕೇಳಿದರೆ ಏನೂ ಹೇಳುತ್ತಿರಲಿಲ್ಲ. ಇಷ್ಟು ಬೇಗ ನಮ್ಮನ್ನು ಬಿಟ್ಟು ಹೋಗುತ್ತಾಳೆಂದು ಅನಿಸಿರಲಿಲ್ಲ” ಎಂದು ಅವರು ಬಿಕ್ಕಳಿಸುತ್ತಿದ್ದಾರೆ.

ತಮ್ಮ ಯೋಗೇಶ್‌ನ ಆಕ್ರಂದನವಂತೂ ಕಲ್ಲು ಮನಸ್ಸನ್ನೂ ಕರಗಿಸುವಂತಿದೆ. “ನಾನು ಇನ್ಯಾರಿಗೆ ಸೀರೆ ತರಲಿ ಅಕ್ಕ? ದಿನವೂ ಫೋನ್ ಮಾಡಿ ನನ್ನನ್ನೇ ಸಲಹೆ ಕೇಳುತ್ತಿದ್ದಳು. ಅವಳು ಹೇಡಿಯಲ್ಲ, ಇದು ಖಂಡಿತವಾಗಿಯೂ ಕೊಲೆ” ಎಂದು ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾನೆ.

ಪತಿಯ ಅಸಹಾಯಕತೆ
ಪತಿ ನವೀನ್ ಅವರ ಸ್ಥಿತಿ ಅಯೋಮಯವಾಗಿದೆ. “ನಾನು ಅವರನ್ನು ತಂದೆ-ತಾಯಿ ಎಂದು ಕರೆಯಲು ಇಷ್ಟಪಡದಷ್ಟು ಕಿರುಕುಳ ನೀಡುತ್ತಿದ್ದರು. ನನಗೆ ಆರೋಗ್ಯ ಸರಿ ಇಲ್ಲದ ಕಾರಣ ಶ್ವೇತಾ ಅನೇಕ ವಿಷಯಗಳನ್ನು ನನ್ನಿಂದ ಮುಚ್ಚಿಟ್ಟಿದ್ದಳು. ನಮ್ಮ ಮೊದಲ ಮಗಳು ಇಲ್ಲದಿದ್ದರೆ ನಾನು ಇಷ್ಟೊತ್ತಿಗೆ ಪ್ರಾಣ ಬಿಡುತ್ತಿದ್ದೆ,” ಎಂದು ಅವರು ಮರುಗುತ್ತಿದ್ದಾರೆ.ನ್ಯಾಯಕ್ಕಾಗಿ ಆಗ್ರಹ
ಶ್ವೇತಾ ಕೆಲಸ ಮಾಡುತ್ತಿದ್ದ ಡೈಯೋಗ್ನಾಸ್ಟಿಕ್ ಸೆಂಟರ್ ಹಾಗೂ ಅವರ ಊರಿನಲ್ಲಿ ಆಕೆಯ ಬಗ್ಗೆ ಎಲ್ಲರಿಗೂ ಅಪಾರ ಗೌರವವಿತ್ತು. “ಎಂತಹ ಕಷ್ಟ ಬಂದರೂ ಎದುರಿಸುವ ಗಟ್ಟಿಗಿತ್ತಿ ಆಕೆ, ಆತ್ಮಹತ್ಯೆ ಮಾಡಿಕೊಳ್ಳುವವಳಲ್ಲ,” ಎಂಬುದು ಸ್ಥಳೀಯರ ಒಕ್ಕೊರಲ ಧ್ವನಿ.

ಸದ್ಯಕ್ಕೆ ಆರೋಪಿಗಳಾದ ಅತ್ತೆ ಜಾನಕಿ, ಮಾವ ಸಣ್ಣಪ್ಪ ತಲೆಮರೆಸಿಕೊಂಡಿದ್ದಾರೆ. ಸೊರಬ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಕಾನೂನು ಇವರಿಗೆ ಶಿಕ್ಷೆ ನೀಡಬಹುದು, ಆದರೆ ಶ್ವೇತಾ ಹೊಟ್ಟೆಯಲ್ಲಿದ್ದ ಆ ಐದು ತಿಂಗಳ ಕಂದಮ್ಮ ಮತ್ತು ಅನಾಥವಾದ ಆ ಪುಟ್ಟ ಮಗಳ ಭವಿಷ್ಯಕ್ಕೆ ನ್ಯಾಯ ಸಿಗುವುದು ಯಾವಾಗ? ಎನ್ನುವುದು ಕುಟುಂಬಸ್ಥರ ಪ್ರಶ್ನೆಯಾಗಿದೆ.

ವರದಕ್ಷಿಣೆ ಎಂಬ ಈ ಪಿಡುಗು ಇನ್ನೆಷ್ಟು ಹೆಣ್ಣು ಮಕ್ಕಳ ಬಲಿ ಪಡೆಯಬೇಕು? ಸಮಾಜವೇ ತಲೆತಗ್ಗಿಸುವ ಈ ಘಟನೆಗೆ ನ್ಯಾಯ ಸಿಗಲಿ ಎಂಬುವುದೇ ಎಲ್ಲರ ಆಶಯ.

(ವರದಿ: ಮಧುರಾಮ್, ಸೊರಬ)

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

http://kalpa.news/wp-content/uploads/2024/04/VID-20240426-WA0008.mp4

Tags: Crime NewsDowryKannada News WebsiteLatest News KannadaLocal NewsMalnad NewsPolice NewsShimogaShivamoggaShivamogga NewsSorabaಗರ್ಭಿಣಿತಾಯಿವರದಕ್ಷಿಣೆಶಿವಮೊಗ್ಗಸೊರಬ
Share575Tweet359Send
Previous Post

ಶಿಕಾರಿಪುರ | ಸಂಭ್ರಮದ ಹುಚ್ಚರಾಯಸ್ವಾಮಿಯ ಬ್ರಹ್ಮ ರಥೋತ್ಸವಕ್ಕೆ ಹರಿದು ಬಂದ ಜನಸಾಗರ

Next Post

ಏ.4, 5ರಂದು ಶಿವಮೊಗ್ಗ ನಗರದ ಹಲವೆಡೆ ನೀರು ಸರಬರಾಜಿನಲ್ಲಿ ವ್ಯತ್ಯಯ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಶಿವಮೊಗ್ಗ | ಫೆ.7, 8 ರಂದು ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ

ಏ.4, 5ರಂದು ಶಿವಮೊಗ್ಗ ನಗರದ ಹಲವೆಡೆ ನೀರು ಸರಬರಾಜಿನಲ್ಲಿ ವ್ಯತ್ಯಯ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಸಂಗೀತ ಲೋಕದ ಧ್ರುವತಾರೆ, ಖ್ಯಾತ ಗಾಯಕಿ ಆಶಾ ಭೋಂಸ್ಲೆ ವಿಧಿವಶ

ಸಂಗೀತ ಲೋಕದ ಧ್ರುವತಾರೆ, ಖ್ಯಾತ ಗಾಯಕಿ ಆಶಾ ಭೋಂಸ್ಲೆ ವಿಧಿವಶ

April 12, 2026
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಏ.16ರಂದು ಬೃಹತ್ ರ್‍ಯಾಲಿ

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಏ.16ರಂದು ಬೃಹತ್ ರ್‍ಯಾಲಿ

April 11, 2026
ಶ್ರೀ ರವಿಶಂಕರ್ ಗುರೂಜಿಯವರ 70ನೇ ಜನ್ಮೋತ್ಸವ | ಏ.14ರಿಂದ ಆರು ದಿನ ವಿಶೇಷ ಸುದರ್ಶನ ಕ್ರಿಯಾ ಶಿಬಿರ

ಶ್ರೀ ರವಿಶಂಕರ್ ಗುರೂಜಿಯವರ 70ನೇ ಜನ್ಮೋತ್ಸವ | ಏ.14ರಿಂದ ಆರು ದಿನ ವಿಶೇಷ ಸುದರ್ಶನ ಕ್ರಿಯಾ ಶಿಬಿರ

April 11, 2026
ಉತ್ತಮ ವ್ಯಕ್ತಿತ್ವ ರೂಪಿಸುವುದೇ ಎನ್‌ಎಸ್‌ಎಸ್‌ ಮುಖ್ಯ ಉದ್ದೇಶ: ಶುಭ ಮರವಂತೆ ಅಭಿಪ್ರಾಯ

ಉತ್ತಮ ವ್ಯಕ್ತಿತ್ವ ರೂಪಿಸುವುದೇ ಎನ್‌ಎಸ್‌ಎಸ್‌ ಮುಖ್ಯ ಉದ್ದೇಶ: ಶುಭ ಮರವಂತೆ ಅಭಿಪ್ರಾಯ

April 11, 2026
ಪಾರಂಪರಿಕ ಕಲೆಯ ಪುನರುಜ್ಜೀವನ ಅಭಿನಂದನೀಯ: ಹೊಂದಾಸನ ಧರ್ಮಪ್ಪ ಮೆಚ್ಚುಗೆ

ಪಾರಂಪರಿಕ ಕಲೆಯ ಪುನರುಜ್ಜೀವನ ಅಭಿನಂದನೀಯ: ಹೊಂದಾಸನ ಧರ್ಮಪ್ಪ ಮೆಚ್ಚುಗೆ

April 11, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL