ವಾಷಿಂಗ್ಟನ್, ಅ.28: ಅಧ್ಯಕ್ಷೀಯ ಚುನಾವಣೆಯನ್ನು ರದ್ದುಪಡಿಸಿ, ನಾನೇ ವಿಜೇತ (ಅಧ್ಯಕ್ಷ)ನೆಂದು ಘೋಷಣೆ ಮಾಡಿ ಎಂದು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಒತ್ತಾಯಿಸಿದ್ದಾರೆ.
ಚುನಾವಣೆಯಲ್ಲಿ ಗೆಲವು ಸಾಧಿಸಲು ಈಗಾಗಲೇ ಸಾಕಷ್ಟು ಯತ್ನಗಳನ್ನು ನಡೆಸುತ್ತಿರುವ ಡೊನಾಲ್ಡ್ ಟ್ರಂಪ್, ಕೆಲ ದಿನಗಳ ಹಿಂದಷ್ಟೇ ಅಮೆರಿಕಾದಲ್ಲಿರುವ ಭಾರತೀಯರ ಮನ ಗೆಲ್ಲಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಚುನಾವಣಾ ಹಾದಿಯನ್ನು ಹಿಡಿದಿದ್ದರು.
ಇದೀಗ ಅಮೆರಿಕಾ ದೇಶದ ಪ್ರಜೆಗಳ ಮನಗೆಲ್ಲಲು ಚುನಾವಣಾ ರ್ಯಾಲಿಗಳನ್ನು ಆರಂಭಿಸಿದ್ದು, ಓಹಿಯೋದಲ್ಲಿ ನಿನ್ನೆ ನಡೆದ ಚುನಾವಣಾ ರ‌್ಯಾಲಿಯಲ್ಲಿ ಚುನಾವಣೆಯನ್ನೇ ರದ್ದು ಪಡಿಸಬೇಕೆಂಬ ಇಂಗಿತವನ್ನು ಟ್ರಂಪ್ ವ್ಯಕ್ತಪಡಿಸಿದ್ದಾರೆ.
ನಾನು ಆಲೋಚನೆ ಮಾಡುವುದಾದರೆ, ನನ್ನ ಪ್ರಕಾರ ಚುನಾವಣೆಯನ್ನು ರದ್ದು ಮಾಡಬೇಕೆಂದು ಹೇಳುತ್ತೇನೆ ಹಾಗೂ ಅಧ್ಯಕ್ಷ ಸ್ಥಾನಕ್ಕೆ ನಾನೇ ವಿಜೇತನೆಂದು ಹೇಳುತ್ತಿದ್ದೆ. ಕಿಲರಿ ಕ್ಲಿಂಟನ್ ಅವರ ನೀತಿಗಳು ಬಹಳ ಕೆಟ್ಟದ್ದು. ಸರ್ಕಾರ ನಡೆಸುವಷ್ಟು ಶಕ್ತಿ ಅವರಿಗೆ ಇಲ್ಲ. ಅಧ್ಯಕ್ಷ ಸ್ಥಾನಕ್ಕೆ ಹಿಲರಿ ಸೂಕ್ತವಾದ ವ್ಯಕ್ತಿಯಲ್ಲ ಎಂದು ತಿಳಿಸಿದ್ದಾರೆ.
Discussion about this post