ನ್ಯೂಯಾರ್ಕ್, ಅ.9: ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ಇನ್ನು ಒಂದು ತಿಂಗಳಷ್ಟೆ ಇರುವಂತೆಯೇ, ಈ ಸಂಬಂಧದ ಪ್ರಕ್ರಿಯೆ ಅಂತಿಮ ಹಂತ ಪವೇಶಿಸಿದೆ. ವಿಶ್ವದ ಅತ್ಯಂತ ಹಳೆಯ ಪ್ರಜಾಪ್ರಭುತ್ವ ಎನಿಸಿದ ಅಮೆರಿಕದ ಅಧ್ಯಕ್ಷೀಯ ಚುನಾವಣೆ ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವವಾದ ಭಾರತಕ್ಕಿಂತ ಭಿನ್ನವಾಗಿದೆ.
ದೀರ್ಘ ಕಾಲದಿಂದ ಸಾಗಿ ಬಂದ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರೆಟ್ ಅಭ್ಯರ್ಥಿ ಹಿಲರಿ ಕ್ಲಿಂಟನ್ ನಡುವಿನ ತುರುಸಿನ ಸೆಣಸಾಟ ಅಂತರ್ರಾಷ್ಟ್ರೀಯ ಗಮನ ಸೆಳೆದಿದೆ. ಅಮೆರಿಕದ ಮಾಧ್ಯಮ 2016ರ ಅಧ್ಯಕ್ಷೀಯ ಚುನಾವಣೆಯನ್ನು ದೇಶದ ಚರಿತ್ರೆಯಲ್ಲಿ ರೂಢಿಯದಲ್ಲದ ಸ್ವತಂತ್ರವಾದ ಅಧ್ಯಕ್ಷೀಯ ಚುನಾವಣೆ ಎಂದು ಬಣ್ಣಿಸಿದೆ. ಅಷ್ಟರ ಮಟ್ಟಿನ ತುರುಸಿನ ಪೈಪೋಟಿಯದ್ದಾಗಿ ಕಾವೇರಿಸಿಕೊಂಡಿದೆ.
ಇಷ್ಟರವರೆಗಿನ ಅಧ್ಯಕ್ಷೀಯ ಸಂಭಾವ್ಯ ಅಭ್ಯರ್ಥಿಗಳಲ್ಲೇ ಕ್ಲಿಂಟನ್ ಮತ್ತು ಟ್ರಂಪ್ ಅಪಖ್ಯಾತಿ ಪಡೆದವರು. ಉಭಯರೂ ಜನರಿಗೆ ಇಷ್ಟವಿಲ್ಲದ ಅಭ್ಯರ್ಥಿಗಳಾಗಿದ್ದಾರೆ. ಉಭಯರೂ ಜನರ ಮೆಚ್ಚುಗೆ ಪಡೆಯದವರೇ ಆಗಿದ್ದಾರೆ.
ಈ ವರ್ಷದ ಅಧ್ಯಕ್ಷೀಯ ಸ್ರ್ಪಗಳ ಬಗ್ಗೆ ಅಮೆರಿಕದ ಮತದಾರರಲ್ಲಿ ಒಂದು ರೀತಿ ಭ್ರಮೆ ಕವಿದ ನಿರುತ್ಸಾಹ ಬೆಳೆದಂತಿದೆ. ಅಷ್ಟರ ಮಟ್ಟಿಗೆ ಟ್ರಂಪ್ ಮತ್ತು ಕ್ಲಿಂಟನ್ ಬಗ್ಗೆ ಮತದಾರರಲ್ಲಿ ಅನಾದರಣೆ ಹುಟ್ಟಿದೆ. ಸಮೀಕ್ಷೆಯೊಂದರ ಪ್ರಕಾರ ಶೇ.57ರಷ್ಟು ಮತದಾರರಲ್ಲಿ ನಿರಾಶೆ ಕವಿದರೆ ಶೇ.55ರಷ್ಟು ಮತದಾರರಲ್ಲಿ ಅವರ ಪ್ರಚಾರ ವೈಖರಿ ಕಂಡು ಜುಗುಪ್ಸೆ ಆವರಿಸಿದೆ. ಶೇ.31ರಷ್ಟು ಮತದಾರರಿಗೆ ಅಭ್ಯರ್ಥಿಗಳ ಪ್ರಚಾರ ವೈಖರಿ ನೋಡಿ ನಿರಾಸಕ್ತಿ ಹುಟ್ಟಿದೆ.
ಕೆಲವೇ ಮಂದಿ ಬೆಂಬಲಿಗರಷ್ಟೇ ಎದುರಾಳಿಯ ಬಗ್ಗೆ ಋಣಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಹುತೇಕ ಮತದಾರರಲ್ಲಿ ಉಭಯ ಅಭ್ಯರ್ಥಿಗಳ ಕುರಿತು ನಕಾರಾತ್ಮಕ ಭಾವನೆ ಬೆಳೆದಿದೆ. ಅಮೆರಿಕದ ಚರಿತ್ರೆಯಲ್ಲೇ ಕ್ಲಿಂಟನ್ ಮತ್ತು ಟ್ರಂಪ್ ಅತ್ಯಂತ ಹಿರಿಯ ಅಭ್ಯರ್ಥಿಗಳಾಗಿರುತ್ತಾರೆ.
Discussion about this post