ಶಿವಮೊಗ್ಗ, ಸೆ.22: ರಾಜ್ಯ ಯುವ ಬ್ರಾಹ್ಮಣ ಸಮಾವೇಶ ಮೈಸೂರಿನಲ್ಲಿ ಅ.15 ಮತ್ತು 16 ರಂದು ನಡೆಯಲಿದೆ ಎಂದು ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಅಧ್ಯಕ್ಷ ಮುಳ್ಳೂರು ಗುರುಪ್ರಸಾದ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ವಿವರಣೆ ನೀಡಿದ ಅವರು, ಮೈಸೂರಿನ ರೈಲ್ವೆ ನಿಲ್ದಾಣ ಬಳಿ ಇರುವ ಗೋವಿಂದರಾವ್ ಮೆಮೋರಿಯಲ್ ಹಾಲ್‌ನಲ್ಲಿ ಈ ಸಮಾವೇಶವನ್ನು ಆಯೋಜಿಸಲಾಗಿದೆ. ನಿವೃತ್ತ ನ್ಯಾಯಾಧೀಶ ರಾಮಾ ಜೋಯಿಸ್ ಸಮಾವೇಶ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾಧ್ಯಕ್ಷ ವೆಂಕಟನಾರಾಯಣ ವಹಿಸುವರು. ಇದರಲ್ಲಿ ರಾಜ್ಯ ಎಲ್ಲಾ ಜಿಲ್ಲೆಗಳಿಂದ ಸಮುದಾಯದ ಮುಖಂಡರು, ಚಿತ್ರನಟರು, ರಾಜಕಾರಣಿಗಳು ಪಾಲ್ಗೊಳ್ಳುವರು ಎಂದರು.
ಬ್ರಾಹ್ಮಣ ಸಮುದಾಯವನ್ನು ತಳಮಟ್ಟದಿಂದ ಬಲಿಷ್ಠಾವಾಗಿ ಸಂಘಟಿಸುವ ಜವಾಬ್ದಾರಿಯ ಹಿನ್ನೆಲೆಯಲ್ಲಿ ಸಮಾವೇಶ ಏರ್ಪಡಿಸಲಾಗಿದೆ. ಮುಖ್ಯವಾಗಿ ಬ್ರಾಹ್ಮಣರನ್ನು ತರುವುದು, ಸಮುದಾಯಕ್ಕೆ ಅವಶ್ಯಕವಾದ ಕೆಲವು ಸರ್ಕಾರಿ ಸೌಲಭ್ಯಗಳನ್ನು ಒದಗಿಸುವುದು, ಸಮುದಾಯ ಎದುರಿಸುತ್ತಿರುವ ಕೆಳ, ಮಧ್ಯಮ ಹಾಗೂ ಬಡತನದ ರೇಖೆಯಲ್ಲಿರುವ ಬ್ರಾಹ್ಮಣರಿಗೆ ತೀರ ಅವಶ್ಯಕವಾದ ಉದ್ಯೋಗ ಒದಗಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಲಾಗುವುದು ಎಂದರು.
ಜಾತಿ ಗಣತಿ ಆಧಾರದ ಮೇಲೆ ಇತರರ ರಾಜ್ಯಗಳಲ್ಲಿರುವ ಮಾದರಿಯಲ್ಲಿ ಬ್ರಾಹ್ಮಣ ಸಮುದಾಯವನ್ನು ರಕ್ಷಿಸುವುದು, ಬ್ರಾಹ್ಮಣತ್ವದ ಆಚರಣೆ, ಅನುಷ್ಠಾನ, ಸಂಪ್ರದಾಯ, ಕುಲಕಸುಬು ಉಳಿಸುವುದು ಪ್ರಮುಖವಾಗಿ ಸಮಾವೇಶದಲ್ಲಿ ಚರ್ಚೆಗೆ ಬರಲಿದೆ ಎಂದರು.
ಆಚಾರ್ಯತ್ರಯರ ಜಯಂತಿಯನ್ನು ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸುವುದು. ಪಾರಂಪರಿಕ ಸ್ಥಳಗಳು ಮತ್ತು ಮಠ -ಮಂದಿರಗಳನ್ನುಶಾಶ್ವತವಾಗಿ ಉಳಿಸಿಕೊಳ್ಳುವ ಬಗ್ಗೆ ವಿಶೇಷ ಗೋಷ್ಠಿಗಳು ನಡೆಯಲಿವೆ. ಸಮಾವೇಶದಲ್ಲಿ ಹಲವಾರು ನಿರ್ಣಯಗಳನ್ನು ಕೈಗೊಂಡು ಸರ್ಕಾರಕ್ಕೆ ಇದರ ಜಾರಿಗೆ ಒತ್ತಾಯಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಯುವವೇದಿಕೆ ಉಪಾಧ್ಯಕ್ಷ ಶ್ರೀಧರ್‌ಮೂರ್ತಿ, ಪ್ರಧಾನ ಕಾರ್ಯದರ್ಶಿ ವಿಕ್ರಂ, ಶಿವಮೊಗ್ಗ ಹವ್ಯಕ ಸಂಘದ ಮಾಜಿ ಅಧ್ಯಕ್ಷ ಜಿ.ವಿ. ರಾಮಕೃಷ್ಣ, ಉಪಸ್ಥಿತರಿದ್ದರು.
ಬ್ರಾಹ್ಮಣ ಸಮುದಾಯವನ್ನು ತಳಮಟ್ಟದಿಂದ ಬಲಿಷ್ಠಾವಾಗಿ ಸಂಘಟಿಸುವ ಜವಾಬ್ದಾರಿಯ ಹಿನ್ನೆಲೆಯಲ್ಲಿ ಸಮಾವೇಶ ಏರ್ಪಡಿಸಲಾಗಿದೆ. ಮುಖ್ಯವಾಗಿ ಬ್ರಾಹ್ಮಣರನ್ನು ತರುವುದು, ಸಮುದಾಯಕ್ಕೆ ಅವಶ್ಯಕವಾದ ಕೆಲವು ಸರ್ಕಾರಿ ಸೌಲಭ್ಯಗಳನ್ನು ಒದಗಿಸುವುದು, ಸಮುದಾಯ ಎದುರಿಸುತ್ತಿರುವ ಕೆಳ, ಮಧ್ಯಮ ಹಾಗೂ ಬಡತನದ ರೇಖೆಯಲ್ಲಿರುವ ಬ್ರಾಹ್ಮಣರಿಗೆ ತೀರ ಅವಶ್ಯಕವಾದ ಉದ್ಯೋಗ ಒದಗಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಲಾಗುವುದು.
-ಮುಳ್ಳೂರು ಗುರುಪ್ರಸಾದ್
ಸಮಾವೇಶದಲ್ಲಿ ಭಾಗವಹಿಸುವವರು ಹೆಚ್ಚಿನ ಮಾಹಿತಿಗಾಗಿ ಮೊ: 9945657636 ಮತ್ತು 9845191017 ಮೂಲಕ ಸಂಪರ್ಕಿಸಬಹುದು. ವಸತಿ ಮತ್ತು ಭೋಜನದ ವ್ಯವಸ್ಥೆಯನ್ನು ಏರ್ಪಡಿಸಲಾಗಿದೆ ಎಂದು ಸಮಿತಿ ತಿಳಿಸಿದೆ.
HOSMAT Hospitals Partners with South United Football Club as Official Sports Medicine & Medical Services Leader
Kalpa Media House | Bengaluru | HOSMAT Hospitals, a recognised leader in orthopaedics, trauma and sports medicine for over three...
Read moreDetails














