Read - 2 minutes
ನಾವೀಗ 21 ನೆಯ ಶತಮಾನದಲ್ಲಿ ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಬದುಕುತ್ತಿದ್ದೇವೆ. ಕೇವಲ ಅಡಿಗೆ ಮನೆಗೆ ಸೀಮಿತವಾಗಿದ್ದ ಮಹಿಳೆ ಇಂದು ನಾನಾ ರಂಗದಲ್ಲಿ ಜಗತ್ತಿನಲ್ಲಿ ಪುರುಷರಿಗೆ ಸರಿ ಸಮಾನಳಾಗಿ ನಿಂತಿದ್ದಾಳೆ. ಮಾಹಿತಿ ತಂತ್ರಜ್ಞಾನದ ಮುಖ್ಯ ಸಾಧನಗಳಾದ ಮೊಬೈಲ್, ಕಂಪ್ಯೂಟರ್, ವೃತ್ತ ಪತ್ರಿಕೆಗಳು, ನಿಯತಕಾಲಿಕೆಗಳು ಇನ್ನೂ ಅನೇಕ ಮಾಧ್ಯಮಗಳ ಮೂಲಕ ತನ್ನ ಜ್ಞಾನವನ್ನು ಮಹಿಳೆ ಹೆಚ್ಚಿಸಿಕೊಂಡು ಜ್ಞಾನದಾಹಿಗಳಾಗಿದ್ದಾರೆ. ಸಾಧನೆಗಳನ್ನು ಮಾಡುವಲ್ಲಿ, ಹಿಡಿದ ಕೆಲಸವನ್ನು ಗುರಿ ಮುಟ್ಟಿಸುವಲ್ಲಿ, ಅಚ್ಚುಕಟ್ಟಾಗಿ ನೆರವೇರಿಸಿಕೊಳ್ಳುವಲ್ಲಿ ತನ್ನ ಮೂಲಭೂತವಾದ ಗುಣಗಳು ಅವಳಿಗೆ ಅತ್ಯಂತ ಸಹಕಾರಿಯಾಗಿವೆ. ಮಾಹಿತಿ ತಂತ್ರಜ್ಞಾನದಿಂದಾಗಿ ಅವಳು ತನ್ನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಎಷ್ಟೋ ಮೂಢನಂಬಿಕೆಗಳಿಂದ ತನ್ನನ್ನು ತಾನು ವಿಮರ್ಶಿಸಿಕೊಳ್ಳುತ್ತಾ ಆಧುನಿಕ ಯುಗಕ್ಕೆ ಸರಿಯಾಗಿ ಹೇಗೆ ಪರಿವರ್ತಿಸಿಕೊಳ್ಳಬಹುದು ಪರಾಮರ್ಶಿಸಿ ತನ್ನನ್ನು ತಾನು ಹೇಗೆ ತಿದ್ದಿಕೊಳ್ಳಬಹುದು ಎನ್ನುವ ಅರಿವು ಅವಳಿಗೆ ಉಂಟಾಗಿದೆ.
ಸಂಪ್ರದಾಯಗಳ ಹಿಂದೆ ವೈಜ್ಞಾನಿಕ ಸತ್ಯವು ಇದೆ ಎನ್ನುವ ಅರಿವು ಈಗ ಅವಳಿಗೆ ಹಿಂದೆಂದಿಗಿಂತಲೂ ನಿಚ್ಚಳವಾಗಿ ತೋರಿಬರುತ್ತಿದೆ. ಜ್ಞಾನ ಮತ್ತು ನಡತೆಗಳು ಒಂದಕ್ಕೊಂದು ಸಂಬಂಧವನ್ನು ಹೊಂದಿದ್ದು ಜಗತ್ತಿನ ಜ್ಞಾನವನ್ನು ಮಾಹಿತಿ ತಂತ್ರಜ್ಞಾನದಿಂದ ಪಡೆಯುವ ಮೂಲಕ ತಾನು ಪರಿಪೂರ್ಣಳಾಗಬೇಕು, ಆದರ್ಶಪ್ರಾಯವಾಗಿರಬೇಕು. ನಡತೆಯಲ್ಲಿ ತೋರ್ಪಡಿಸುವ ಮೂಲಕ ತಾನು, ತನ್ನ ಕುಟುಂಬ, ಸುತ್ತಲಿನ ಸಮಾಜ ಎಲ್ಲವೂ ಬೆಳಕಾಗಬಲ್ಲುದು ಎನ್ನುವ ಅರಿವು ಮಹಿಳೆಗೆ ಮೂಡಿರುವುದೇ ಮಾಹಿತಿ ತಂತ್ರಜ್ಞಾನದಿಂದ ೨೧ ನೇ ಶತಮಾನದಲ್ಲಿ ಮಹಿಳೆಗೆ ಸಿಕ್ಕಿರುವ ಕೊಡುಗೆಯಾಗಿದೆ. ಇಂಟರ್ ನೆಟ್ ಸೌಲಭ್ಯವನ್ನು ಕಂಪ್ಯೂಟರ್‌ಗಳಲ್ಲಿ, ಮೊಬೈಲ್‌ಗಳಲ್ಲಿ ಅಳವಡಿಸಿಕೊಂಡು ಮನೆಯಲ್ಲಿದ್ದೇ ಪ್ರಪಂಚದ ಘಟನೆಗಳಿಗೆ ಸ್ಪಂದಿಸುವ ವ್ಯಾಪಾರ ವಹಿವಾಟುಗಳಲ್ಲಿ ತೊಡಗಿಸಿಕೊಳ್ಳುವ ಅವಕಾಶ ಈಗ ಅವಳಿಗೆ ದೊರೆತಿರುವುದು ಅವಳ ಅನೇಕ ಸಮಸ್ಯೆಗಳಿಗೆ ಪರಿಹಾರ ದೊರೆತಿರುವುದರಲ್ಲಿ ಸಂಶಯವಿಲ್ಲ.
ಹಿಂದೊಮ್ಮೆ ಮಕ್ಕಳಿಲ್ಲದವರು ಮಾಹಿತಿ ತಂತ್ರಜ್ಞಾನದ ಕೊರತೆಯಿಂದ ಮಹಿಳೆಯರು ಅದಕ್ಕೆ ತಾನೇ ಪೂರ್ತಿ ಹೊಣೆ ಅದು ತನ್ನ ದುರಾದೃಷ್ಟ ಎನ್ನುವ ಕಾಲವಿತ್ತು. ಮೂಢನಂಬಿಕೆಗಳಿಂದ ಅದಕ್ಕೆ ಪರಿಹಾರವೆನ್ನುವಂತೆ ಗುಡಿ ಗುಂಡಾರಗಳನ್ನು ಸುತ್ತುತ್ತಾ, ವ್ರತ ನಿಯಮಗಳಿಗೆ ತನ್ನನ್ನು ದಂಢಿಸಿಕೊಳ್ಳುತ್ತಾ, ತನ್ನನ್ನೇ ನಿಕೃಷ್ಟಳೆಂದುಕೊಳ್ಳುತ್ತಾ ಇದ್ದ ಕಾಲವಿತ್ತು. ಮಾನಸಿಕವಾಗಿ ತಾವು ಸಮಾಜಬಾಹಿರರೇನೋ ಎನ್ನುವ ಮನಸ್ಥಿತಿಯುಳ್ಳವರಾಗಿ ಮಾನಸಿಕವಾಗಿ ಕುಗ್ಗಿ ಹೋಗುತ್ತಿದ್ದರು.
ಆದರೆ, ಇಂದು ತಮ್ಮಷ್ಟೇ ಪುರುಷರೂ ಕಾರಣರು ಇಬ್ಬರಲ್ಲೂ ದೋಷವಿದ್ದಲ್ಲಿ ಮಾತ್ರ ಮಕ್ಕಳಾಗದಿರಲು ಸಾಧ್ಯ. ವೈಧ್ಯಕೀಯ ಲೋಕದ ಸಾಧನೆಗಳಿಂದ ಐವಿಎಫ್ (ತಂತ್ರಜ್ಞಾನ) ಮೂಲಕ ಅಲ್ಲದೆ ತನ್ನ ಗರ್ಭಕೋಶದ ನಾಳಗಳಲ್ಲಿರುವ ಸಮಸ್ಯೆಗಳಿಂದ ಸರಿಪಡಿಸಿಕೊಳ್ಳುವಲ್ಲಿ ಪುರುಷರಲ್ಲಿ ವೀರ‌್ಯಾಣು ಉತ್ಪಾದನೆ ಹೆಚ್ಚಿಸಿಕೊಳ್ಳುವಂತೆ ಮಾಡಿಸುವಲ್ಲಿ ಇನ್ನೂ ಅನೇಕ ಕಾರಣಗಳು ಮಾಹಿತಿ ತಂತ್ರಜ್ಞಾನದಿಂದಾಗಿ ಮಹಿಳೆಗೆ ಅರಿವಿಗೆ ಬಂದಿದ್ದು ಬಂಜೆತನವನ್ನು ನೀಗಿಸಿಕೊಂಡು ಅತ್ಯಂತ ಸಂಭ್ರಮ ಪಡುತ್ತಿರುವುದನ್ನು ಮಾಹಿತಿ ತಂತ್ರಜ್ಞಾನವು ಅವಳಿಗೆ ದೊರಕಿಸಿಕೊಟ್ಟಿರುವುದು ಆಧುನಿಕ ಯುಗದ ಕೊಡುಗೆಯೆಂದೇ ಹೇಳಬಹುದು.
ಸಾಂಪ್ರದಾಯಿಕ ಅಡಿಗೆಗೆ ತನ್ನನ್ನು ಸೀಮಿತಗೊಳಿಸಿಕೊಂಡಿದ್ದ ಮಹಿಳೆ ಇಂದು ಮಾಧ್ಯಮಗಳ ಮಾಹಿತಿಯಿಂದ ಅನೇಕ ಹೊಸ ರುಚಿಗಳನ್ನು ಕಲಿತುಕೊಂಡಿದ್ದಲ್ಲದೆ , ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ, ಲೇಖನಗಳ ಮೂಲಕ ತನ್ನನ್ನು ಸಮಾಜಕ್ಕೆ ತೆರೆದುಕೊಂಡಿದ್ದಾಳೆ. ಇದರಿಂದ ಅಡುಗೆಯಲ್ಲಿ ಅತೀ ಶೀಘ್ರದಲ್ಲಿ ಹೊಸ ಹೊಸ ರುಚಿಗಳು, ವೈವಿಧ್ಯತೆಯ ಪ್ರಯೋಗಗಳಿಂದ ಹೊಸ ರುಚಿ ಲೋಕದ ಅಡುಗೆ ಮನೆ ಕ್ರಾಂತಿಯೇ ನಡೆದಿದೆ ಎಂದರೆ ತಪ್ಪಾಗಲಾರದು. ಮೊಬೈಲ್, ಕಂಪ್ಯೂಟರ್ ಗಳಲ್ಲಿ ಇಂಟರ್‌ನೆಟ್‌ನ ಉಪಯೋಗದಿಂದ ಆಧುನಿಕ ಮಹಿಳೆ ಇಂದು ಪ್ರಪಂಚದಾದ್ಯಂತ ಸ್ನೇಹಿತರನ್ನು, ಬಳಗವನ್ನು ಸಂಪರ್ಕಿಸುತ್ತಿದ್ದು ಅಪಾರವಾದ ಜ್ಞಾನದೊಂದಿಗೆ ಎಲ್ಲಾ ರಂಗಗಳಲ್ಲಿ ಮುಂಚೂಣಿಯಲ್ಲಿ ಬಂದು ನಿಲ್ಲುವಂತಾಗಿದೆ. ಈಗಿನ ಶಾಲಾ ಕಾಲೇಜುಗಳ ವಿದ್ಯಾಭ್ಯಾಸವು ಪ್ರಾಜೆಕ್ಟ್ ಕೆಲಸಗಳಿಗೆ, ಶಾಲೆಯಲ್ಲಿನ ಮಕ್ಕಳ ಚಟುವಟಿಕೆಗಳನ್ನು ಪೋಷಕರಿಗೆ ತಿಳಿಸುವಲ್ಲಿ, ಸಲಹೆ ಪಡೆಯುವಲ್ಲಿ ಶಾಲೆಯ ಪಾತ್ರದಷ್ಟೇ ಮನೆಯಲ್ಲೂ ಮಕ್ಕಳಿಗಾಗಿ ಮಾಹಿತಿ ತಂತ್ರಜ್ಞಾನವನ್ನು ಪೋಷಕರು ಪಡೆಯಬೇಕಾದ್ದು ಅತ್ಯಂತ ಅವಶ್ಯಕವಾಗಿದೆ. ಬ್ಯಾಂಕ್ ವ್ಯವಹಾರಗಳು ಶಾಪಿಂಗ್ ವ್ಯವಹಾರ, ರಸೀದಿಗಳನ್ನು ಪಾವತಿಸುವುದು ಎಲ್ಲವೂ ಇಂದಿನ ಆಧುನಿಕ ಮಹಿಳೆಗೆ ಕ್ಷಣಾರ್ಧದಲ್ಲೇ ಮಾಹಿತಿ ತಂತ್ರಜ್ಞಾನದಿಂದಾಗಿ ದೊರಕಬಲ್ಲುದು.
ಇದರಿಂದ ಅನೇಕ ಸಮಸ್ಯೆಗಳನ್ನು ಅವಳು ಎದುರಿಸುವುದು ಕಂಡುಬರುತ್ತಿದೆ. ಮಾಹಿತಿ ಕೊರತೆಯನ್ನು ಪೂರ್ತಿ ಪಡೆಯಲಾಗದ ಅರೆಬರೆ ತಿಳುವಳಿಕೆಯಿಂದ ಅವಳು ಮೋಸ ಹೋಗುತ್ತಿರುವುದು ಮಾಹಿತಿ ತಂತ್ರಜ್ಞಾನದ ಸಮಸ್ಯೆಯ ಇನ್ನೊಂದು ಮುಖವಾಗಿದೆ. ತನ್ನ ಕುಟುಂಬ ಸದಸ್ಯರುಗಳು ಭಾವನಾತ್ಮಕವಾಗಿ ಹೆಚ್ಚು ಹೊಂದಿಕೊಳ್ಳದೆ ಇರುವುದು, ಮಕ್ಕಳು ಮೊಬೈಲ್ ಕಂಪ್ಯೂಟರ್ ನಿಂದ ಓದಿನತ್ತ ಆಸಕ್ತಿಯನ್ನು ಕಡಿಮೆಮಾಡಿಕೊಳ್ಳುತ್ತಿರುವುದು, ಅಪರಾದದ ಜಾಲದಲ್ಲಿ ಸಿಕ್ಕಿ ಬೀಳುತ್ತಿರುವುದು ಮಹಿಳೆಗೆ ಚಿಂತೆಗೀಡುಮಾಡುತ್ತಿದೆ. ಫೇಸ್‌ಬುಕ್, ವಾಟ್ಸಪ್‌ಗಳ ಲೋಕದಲ್ಲಿ ಕುಟುಂಬದ ಸುಂದರ ಸಮಾರಂಭಗಳಲ್ಲಿ ಭಾಗವಹಿಸಲು ನಿರಾಕರಿಸುತ್ತಿರುವ ಯುವ ಜನಾಂಗವನ್ನು ರೋಬೋಟ್‌ಗಳಾಗಿ ಪರಿವರ್ತನೆ ಗೊಳ್ಳುತ್ತಿರುವುದನ್ನು ತಡೆಯುವುದು ಇಂದಿನ ಸಮಾಜದ ಮಾಹಿತಿ ತಂತ್ರಜ್ಞಾನದ ಅತಿಯಾದ ಅವಲಂಬನೆಯಿಂದಾಗಿ ಅಂಬ ಅರಿವು ಅವಳಲ್ಲಿ ಉಂಟಾಗುತ್ತಿದೆ. ಎಚ್ಚೆತ್ತ ಆಧುನಿಕ ಮಹಿಳೆಗೆ ಇದರಿಂದ ಪರಿಹಾರವು ಅಸಾಧ್ಯವಾಗಲಾರದು. ಅನಾನುಕೂಲಕ್ಕಿಂತ ಅವಳಿಗೆ ೨೧ನೇ ಶತಮಾನದಿಂದೀಚೆಗೆ ಅವಳನ್ನು ಅವಳ ಕುಟುಂಬವನ್ನು ರಕ್ಷಿಸಿಕೊಳ್ಳುವಲ್ಲಿ, ಪರಿಪೂರ್ಣತೆಯೆಡೆಗೆ ಕೊಂಡುಯ್ಯುವಲ್ಲಿ ಸಹಕಾರಿಯಾಗಿದೆ. ಎಂದರೆ ತಪ್ಪಲ್ಲವಲ್ಲವೇ ಎಂದು ಹೇಳುತ್ತಾ.
ಟಿವಿಗಳು, ಕಂಪ್ಯೂಟರ್‌ಗಳು, ಪತ್ರಿಕಾ ಮಾಧ್ಯಮಗಳು ಮೊಬೈಲ್‌ಗಳಲ್ಲಿಯ ವಾಟ್ಸಪ್ ಫೇಸ್‌ಬುಕ್‌ಗಳು ದಿನ ದಿನದ ಮಾಹಿತಿಯನ್ನು ಅವಳು ಮನೆಯಲ್ಲೇ ಕುಳಿತು ತಿಳಿದುಕೊಂಡು ತನ್ನ ಬುದ್ಧಿಮತ್ತೆಗೆ ಇರುವ ಸ್ಪರ್ಧಾವಕಾಶಗಳನ್ನು ಉಪಯೋಗಿಸಿಕೊಡುವಲ್ಲಿ ತೊಡಗಿಸಿಕೊಳ್ಳುವಲ್ಲಿ ೨೧ನೆಯ ಶತಮಾನವು ಅವಳನ್ನು ಅಬಲೆಯಿಂದ ಸಬಲೆಯಾಗುವೆಡೆಯಲ್ಲಿ ಪಾತ್ರ ವಹಿಸಿದೆ. ಸಾಮಾಜಿಕ ಪಿಡುಗಾದ ವರದಕ್ಷಿಣೆ, ಪುರುಷರ ದೌರ್ಜನ್ಯ, ಆರೋಗ್ಯ ಸಮಸ್ಯೆಗಳನ್ನು ಮಾಹಿತಿ ತಂತ್ರಜ್ಞಾನದಿಂದಾಗಿ ಸಮರ್ಥವಾಗಿ ಎದುರಿಸಿ ತನ್ನ ಮಕ್ಕಳನ್ನು ರೂಪಿಸುವಲ್ಲಿ ಅವರಲ್ಲೂ ಅರಿವನ್ನು ಮೂಡಿಸಿ ದಿಟ್ಟತನದಿಂದ ಸಮಾಜವನ್ನು ಎದುರಿಸುವಲ್ಲಿ ಅಣಿಗೊಳಿಸುವಲ್ಲಿ ಆಧುನಿಕ ಮಹಿಳೆಯ ಪಾತ್ರ ಅತ್ಯಂತ ಪ್ರಮುಖವಾದುದು.
ಆರೋಗ್ಯ ಸಮಸ್ಯೆಯು ಮಹಿಳೆಗೆ ಕುಟುಂಬದಲ್ಲಿ ಯಾರಿಗಾದರೂ ಸಂಭವಿಸಿದಲ್ಲಿ ಅಂತರ್ಜಾಲವನ್ನು ಜಾಲಾಡಿ ಅದು ಹೇಗೆ ಬಂದಿರಬಹುದು. ವೈದ್ಯಲೋಕ ಅದಕ್ಕೆ ಏನು ಪರಿಹಾರ ಸೂಚಿಸಿದೆ. ಸಾಂಪ್ರದಾಯಕವಾದ ಔಷಧಗಳೊಂದಿಗೆ, ಹಿರಿಯರ ಜ್ಞಾನದ ಅನುಭವಗಳಿಗೆ ತುಲನೆ ಮಾಡಿ ತ್ವರಿತ ನಿರ್ಧಾರಗಳನ್ನು ಪರಿಹಾರವನ್ನು ಕಂಡುಕೊಳ್ಳಬಲ್ಲವಳಾಗಿರುವುದು ಅವಳಿಗೆ ಮಾಹಿತಿ ತಂತ್ರಜ್ಞಾನ ಕೊಟ್ಟ ವರವಾಗಿದೆ. ಯಾವ ಸಮಸ್ಯೆಗಳಿಗೆ ಯಾರನ್ನು ಸಂಪರ್ಕಿಸಬೇಕು ಎಂಬ ತತಕ್ಷಣದ ಮಾಹಿತಿಯಿಂದಾಗಿ, ಹೃದಯಘಾತವಾದ ಸಂದರ್ಭಗಳಲ್ಲಿ ವ್ಯಕ್ತಿಯನ್ನು ಸತತವಾಗಿ ಕೆಮ್ಮುತ್ತಿರುವಂತೆ ಮಾಡಿ ಉಸಿರನ್ನು ದೀರ್ಘವಾಗಿ ತೆಗೆದುಕೊಳ್ಳುವಂತೆ ಮಾಡುತ್ತಾ ತಕ್ಷಣವೇ ಹತ್ತಿರದ ಆಸ್ಪತ್ರೆಗಳಿಗೆ ಚಿಕಿತ್ಸೆ ಕೊಡಿಸುವಲ್ಲಿ ಮಾಹಿತಿಗಳನ್ನು ದೂರವಾಣಿಗಳಿಂದ ಸಾಧ್ಯವಾಗಿದೆ.
ಲೇಖಕರು: -ಮಮತ ಎಸ್. ಹೆಗ್ಡೆ,
ಬರಹಗಾರ್ತಿ, ವಿನಾಯಕ ನಗರ, ಶಿವಮೊಗ್ಗ
Discussion about this post