Read - < 1 minute
ನವದೆಹಲಿ, ಸೆ.2: ರಾಜ್ಯಸಭಾ ಸದಸ್ಯ ಸ್ಥಾನದಿಂದ ರಾಜೀನಾಮೆ ನೀಡಿ, ಬಿಜೆಪಿಯಿಂದ ಹೊರಬಂದಿದ್ದ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಇದೀಗ ಹೊಸ ಪಕ್ಷವನ್ನು ಕಟ್ಟಿದ್ದಾರೆ.
ಪಂಜಾಬ್ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಸಿಧು, ಆಪ್ ಗೆ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿತ್ತು. ಬಿಜೆಪಿ ತೊರೆದ ಬಳಿಕ ಅರವಿಂದ್ ಕೇಜ್ರಿವಾಲ್ ಜೊತೆ ಒಂದು ಸುತ್ತಿನ ಮಾತುಕತೆಯನ್ನೂ ನಡೆಸಿದ್ದ ಸಿಧು, ಇದೀಗ ಆಪ್ ಗೂ ಸೇರದೇ ತಮ್ಮದೇ ಆದ ಹೊಸ ಪಕ್ಷವನ್ನು ಕಟ್ಟಿದ್ದಾರೆ.
“ಆವಾಜ್ ಎ ಪಂಜಾಬ್” ಎಂಬ ಹೊಸ ಪಕ್ಷವನ್ನು ಹೆಸರಿಸಿರುವ ಸಿಧು ಸೆಪ್ಟಂಬರ್ 9 ರಂದು ಅಧಿಕೃತವಾಗಿ ಘೋಷಿಸಲಿದ್ದಾರೆ.
ಆಪ್ ಗೆ ಸೇರ್ಪಡೆಯಾಗಿ ಮುಖ್ಯಮಂತ್ರಿ ಅಭ್ಯರ್ಥಿ ಸ್ಥಾನಕೆಕ ಬೇಡಿಕೆಯಿಟ್ಟಿದ್ದ ಸಿಧುಗೆ ಆಪ್ ನಲ್ಲಿ ಯಾವುದೇ ಮನ್ನಣೆ ಸಿಗದ ಕಾರಣ ತಮ್ಮದೇ ಸ್ವಂತ ಪಕ್ಷವನ್ನು ಕಟ್ಟಿದ್ದಾರೆ ಎನ್ನಲಾಗಿದೆ.
ತಮ್ಮ ಹೊಸ ಪಕ್ಷದ ಪೋಸ್ಟರ್ ನಲ್ಲಿ ಸಿಧು ಜೊತೆ ಮಾಜಿ ಹಾಕಿ ಆಟಗರ ಪರಗಟ್ ಸಿಂಗ್ ಮತ್ತು ಮತ್ತು ಪಕ್ಷೇತರ ಅಭ್ಯರ್ಥಿ ಸಿಮರಜೀತ್ ಸಿಂಗ್ ಬೈಂಸ್ ಕೂಡ ಕಾಣಿಸಿಕೊಂಡಿದ್ದಾರೆ.
ಒಟ್ಟಾರೆ ಸಿಧು ಈ ಹೊಸ ಪಕ್ಷವನ್ನು ಜನರು ಎಷ್ಟರಮಟ್ಟಿಗೆ ಸ್ವೀಕರಿಸಲಿದ್ದಾರೆ ಎಂಬುದನ್ನು ಚುನಾವಣೆ ನಂತರವೇ ತಿಳಿಯಲಿದೆ.
Discussion about this post