ಚೆನ್ನೈ: ಅ:8: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಆರೋಗ್ಯದ ಗುಟ್ಟು ಇನ್ನೂ ರಟ್ಟಾಗುತ್ತಿಲ್ಲ. ಅದು ರಹಸ್ಯವಾಗಿಯೇ ಉಳಿದಿದೆ. ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಹಾಗೂ ಅವರ ಆಪ್ತರಿಗೆ ಮಾತ್ರ ಅವರಿಗೆ ಏನಾಗಿದೆ ಎಂಬುದು ತಿಳಿದಿದೆಯೇ ಹೊರತು ಇನ್ನಾರಿಗೂ ಅವರ ಆರೋಗ್ಯದ ಬಗ್ಗೆ ಒಂದು ಚೂರೂ ಮಾಹಿತಿ ಇಲ್ಲ. ಇದು ಚಿದಂಬರ ರಹಸ್ಯವಾಗಿದೆ.
ಚನ್ನೈನ ಅಪೊಲೋ ಆಸ್ಪತ್ರೆಯಲ್ಲಿ ಕಳೆದ ಎರಡು ವಾರಗಳಿಂದ ಚಿಕಿತ್ಸೆ ಪಡೆಯುತ್ತಿರುವ ಜಯಲಲಿತಾ ಅವರ ಆರೋಗ್ಯದ ಬಗ್ಗೆ ಎಲ್ಲವೂ ನಿಗೂಢವಾಗಿಯೇ ಇದೆ.
ಜಯಾ ಅವರನ್ನು ನೋಡಲು ರಾಹುಲ್ಗಾಂಧಿ ಸೇರಿದಂತೆ ಅನೇಕ ಗಣ್ಯರು ಬಂದರು ಕೂಡ ಅವರಿಗೆ ಇವರ ದರ್ಶನವಾಗಿಲ್ಲ. ಡಾಕ್ಟರ್ಗಳನ್ನು ಭೇಟಿ ಮಾಡಿ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದು ತೆರಳಿದ್ದಾರೆ.
ಪ್ರಧಾನಿ ನರೇಂದ್ರಮೋದಿಯವರು ಕೂಡ ಜಯಾ ಅವರನ್ನು ಭೇಟಿ ಮಾಡಲು ಅಪೊಲೋ ಆಸ್ಪತ್ರೆಗೆ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ.
ಒಟ್ಟಾರೆ ಜಯಾ ಅವರ ಆರೋಗ್ಯದ ಪರಿಸ್ಥಿತಿಯ ಗುಟ್ಟನ್ನು ಯಾರೂ ಬಿಟ್ಟುಕೊಡುತ್ತಿಲ್ಲ. ಎಲ್ಲವೂ ಒಂದು ರೀತಿಯ ಸಸ್ಪೆನ್ಸ್. ಸ್ವತಃ ಅವರ ದತ್ತುಪುತ್ರ ಸುಧಾಕರನ್ ಹಾಗೂ ಅವರ ಸಂಬಂಧಿಗಳು ಆಸ್ಪತ್ರೆಗೆ ಬಂದರೂ ಅವರನ್ನು ಕೂಡ ಗೇಟ್ ಒಳಗೆ ಬಿಟ್ಟುಕೊಳ್ಳದೆ ವಾಪಸ್ ಕಳುಹಿಸಿದ್ದಾರೆಂದರೆ ಯಾವ ರೀತಿ ಗುಟ್ಟನ್ನು ನಿರ್ವಹಣೆ ಮಾಡಿದ್ದಾರೆ ಎಂಬುದು ಗೊತ್ತಾಗುತ್ತದೆ.
ಪಾಪ, ಜಯಾ ಅಭಿಮಾನಿಗಳಿಗೇನು ಗೊತ್ತು..? ತಮ್ಮ ನೆಚ್ಚಿನ ಅಮ್ಮನಿಗೆ ಏನಾಗಿದೆ ಎಂಬ ಆತಂಕದಲ್ಲಿ ಅವರು ಆಸ್ಪತ್ರೆ ಮುಂದೆ ಕಳೆದ 10 ದಿನಗಳಿಂದ ಜಮಾಯಿಸಿದ್ದಾರೆ. ವಿವಿಧೆಡೆ ಹೋಮ, ಹವನ, ಪೂಜೆ-ಪುನಸ್ಕಾರ ನಡೆಸುತ್ತಿದ್ದಾರೆ. ಅಭಿಮಾನಿಗಳ, ವಿಪಕ್ಷಗಳ ಒತ್ತಡಕ್ಕೆ ಮಣಿದು ಆಸ್ಪತ್ರೆಯವರು ಜಯಾ ಅವರ ಆರೋಗ್ಯದ ಬಗ್ಗೆ ದೃಢೀಕರಣ ನೀಡಿದೆಯಾದರೂ ಅಷ್ಟು ಸ್ಪಷ್ಟವಾಗಿಲ್ಲ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ.
ಅ.3ರಿಂದ ಅಮ್ಮ ಜಯಲಲಿತಾ ಅವರಿಗೆ ವೆಂಟಿಲೇಟರ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಲಂಡನ್ನ ವೈದ್ಯರಾದ ರಿಚಡರ್್ ಜಾನ್ ಚಿಕಿತ್ಸೆ ನೀಡುತ್ತಿದ್ದಾರೆ. ಅಲ್ಲದೆ, ಏಮ್ಸ್ ವೈದ್ಯರು ಕೂಡ ಆಗಮಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಹೀಗಿದ್ದಾಗ ಅವರ ಆರೋಗ್ಯ ಏನಾಗಿರಬಹುದು ಎಂದು ಅಲ್ಲಿನ ಜನರಲ್ಲಿ ಅಷ್ಟೇ ಅಲ್ಲದೆ ದೇಶದೆಲ್ಲೆಡೆ ಇರುವ ಆಮ್ಮನ ಅಭಿಮಾನಿಗಳಲ್ಲಿ ದುಗುಡ ಹೆಚ್ಚಾಗಿರುವುದಂತೂ ಸತ್ಯ.
ಈ ನಡುವೆ ಅಮ್ಮನ ಉಸ್ತುವಾರಿ ವಹಿಸುವವರ ಬಗ್ಗೆ ಹುಡುಕಾಟ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಎಲ್ಲ ರಾಜ್ಯಗಳಿಗೂ ತಮಿಳುನಾಡು ರಾಜ್ಯದ ರಾಜಕೀಯಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಇತಿಹಾಸ ಗಮನಿಸಿದರೆ ಮೂರು ದಶಕಗಳ ಹಿಂದೆ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜನಪ್ರಿಯ ರಾಜಕಾರಣಿ ಎಂ.ಜಿ.ರಾಮಚಂದ್ರನ್ ಅವರು ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೀಡಾಗಿ ಅಪೊಲೋ ಆಸ್ಪತ್ರೆಗೆ ದಾಖಲಾಗಿದ್ದರು.
ಅವರಿಗೆ ಉಸಿರಾಟದ ತೊಂದರೆ, ಕಿಡ್ನಿ ಸಮಸ್ಯೆ, ಹೃದ್ರೋಗ ಸಮಸ್ಯೆ, ಆಸ್ತಮಾ ಇದ್ದ ಕಾರಣ ಅವರನ್ನು ಚೆನ್ನೈನ ಅಪೊಲೋ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ನಂತರ ಅವರನ್ನು ಬ್ರೂಕ್ಲಿನ್ಸ್ಡೌನ್ನ್ಲೇಟ್ ಮೆಡಿಕಲ್ ಸೆಂಟರ್ಗೆ ದಾಖಲಿಸಲಾಯಿತು.
ನೆಚ್ಚಿನ ನಾಯಕನಿಗೆ ಏನಾಯಿತು ಎಂಬುದನ್ನು ಜನರಿಂದ ಮರೆಮಾಚಲಾಯಿತು. ತಮಿಳರಲ್ಲಿ ತೀವ್ರ ಆತಂಕ ಸೃಷ್ಟಿಸಿತ್ತು. ಅವರ ಲಕ್ಷ ಲಕ್ಷ ಅಭಿಮಾನಿಗಳು ಬೀದಿಗಿಳಿದು ತಲೈವಾ ಬದುಕಿ ಬರಲಿ ಎಂದು ಗೋಳಿಟ್ಟು ಹೋಮ-ಹವನ, ಪೂಜೆ ಮಾಡಿದರು.
ಇದೇ ಸಂದರ್ಭದಲ್ಲಿ ವಿಧಾನಸಭೆ ಹಾಗೂ ಸಂಸತ್ ಚುನಾವಣೆ ಎದುರಾಗಿತ್ತು. ಎಂಜಿಆರ್ ಅನುಪಸ್ಥಿತಿಯಲ್ಲಿ ಹಣಕಾಸು ಸಚಿವ ಆರ್.ನೆಡುಂಚಿಳಿಯನ್ ಮುಖ್ಯಮಂತ್ರಿ ಹುದ್ದೆ ವಹಿಸಿಕೊಂಡಾಗ ಅವರ ವಿರೋಧಿಗಳೆಲ್ಲ ಎಂಜಿಆರ್ ಸಾವನ್ನಪ್ಪಿದ್ದಾರೆ ಎಂದೇ ವದಂತಿ ಹಬ್ಬಿಸಿದ್ದರು. ಈ ಬೆನ್ನಲ್ಲೆ ಎಂಜಿಆರ್ ಬಲಗೈ ಭಂಟನಂತಿದ್ದ ಎಂ.ಆರ್.ವೀರಪ್ಪನ್ ಎಂಜಿಆರ್ ಅವರ ವಿಡಿಯೋ ಫುಟೇಜ್ಅನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರದಶರ್ಿಸಿ ಅನುಕಂಪದ ಅಲೆ ಎಬ್ಬಿಸಿದ್ದರು. ನಿರೀಕ್ಷೆಯಂತೆ ಅಣ್ಣಾ ಡಿಎಂಕೆ ಮತ್ತೆ ಅಧಿಕಾರ ಹಿಡಿಯಿತು.
ಸಂಸತ್ ಚುನಾವಣೆಯಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡಿದ್ದ ಎಐಎಡಿಎಂಕೆ ಕ್ಲೀನ್ಸ್ವಿಪ್ ಮಾಡಿತು. ಎಂಜಿಆರ್ ಮತ್ತೆ ಮುಖ್ಯಮಂತ್ರಿಯಾದರು. ಆದರೆ, ಅನಾರೋಗ್ಯದ ಕಾರಣ ಹಳೆಯ ಚಾಮರ್್ ಕಳೆದುಕೊಂಡಿದ್ದರು. ಉತ್ಸಾಹ ಮಾತ್ರ ಕುಗ್ಗಿರಲಿಲ್ಲ. ಈಗ ಇತಿಹಾಸ ಮರುಕಳಿಸಿದಂತಿದೆ.
ಕಳೆದ ಸೆ.22ರ ಮಧ್ಯರಾತ್ರಿ ಅದೇ ಅಪೊಲೋ ಆಸ್ಪತ್ರೆ ಸೇರಿರುವ ಮುಖ್ಯಮಂತ್ರಿ ಜಯಲಲಿತಾ ಅವರ ಆರೋಗ್ಯದ ಗುಟ್ಟು ಕೂಡ ಕಿಂಚಿತ್ತೂ ಹೊರಗೆ ಬರುತ್ತಿಲ್ಲ. ಕೋಟಿ ಕೋಟಿ ಅಭಿಮಾನಿಗಳು ಪುರುಚ್ಚಿ ತಲೈವಾ ಯೋಗಕ್ಷೇಮಕ್ಕೆ ಪ್ರಾಥರ್ಿಸಿ ಬೀದಿಗಿಳಿದಿದ್ದಾರೆ. ಆಸ್ಪತ್ರೆ ಬಳಿ ಹಗಲಿರುಳೆನ್ನದೆ ಕಾಯುತ್ತಿದ್ದಾರೆ. ಕಂಡ ಕಂಡ ದೇವರಿಗೆ ಹರಕೆ ಹೊತ್ತಿದ್ದಾರೆ. ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅಮ್ಮ ಡಿಸ್ಜಾಜರ್್ ಆಗಲೆಂದು ಅಭಿಮಾನಿಗಳು, ಶಾಸಕರು, ಮಂತ್ರಿಗಳು ಆಸ್ಪತ್ರೆ ಬಳಿಯೇ ತಂಗಿದ್ದಾರೆ. ಮುಂದೇನಾಗಲಿದೆಯೋ ಕಾದು ನೋಡಬೇಕು. ಎಲ್ಲವೂ ರಹಸ್ಯ.
Discussion about this post