Read - < 1 minute
ಕೊಲ್ಲ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಕೊಲ್ಲ ಪ್ರವೀಣ್ ಹಾಗೂ ಹೇಮಂತ್ಕುಮಾರ್ ಅವರು ನಿರ್ಮಿಸಿರುವ `ಗೋಲಿಸೋಡ` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ರಘುಜಯ ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಧಾಮು ನರವಲು ಅವರ ಛಾಯಾಗ್ರಹಣವಿದೆ. ರಾಜೇಶ್ ರಾಮನಾಥ್ ಸಂಗೀತ ನಿರ್ದೇಶನ, ಸಾಧುಕೋಕಿಲ ಹಿನ್ನೆಲೆ ಸಂಗೀತ, ಕೆ.ಎಂ.ಪ್ರಕಾಶ್ ಸಂಕಲನ, ನಂದಕಿಶೋರ್ ಸಂಭಾಷಣೆ, ನಂದು ಸಾಹಸ ನಿರ್ದೇಶನ ಹಾಗೂ ಗಾಯಿತ್ರಿ ರಘುರಾಂ, ಮದನ್ ಹರಿಣಿ, ಸ್ವರ್ಣಬಾಬು ನೃತ್ಯ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ತಾರಾ, ಶೋಭ್ ರಾಜ್, ರಘು, ಡ್ಯಾನಿಯಲ್ ಕುಟ್ಟಪ್ಪ, ಮದುಸೂಧನ್, ಲಹರಿ ವೇಲು, ವಿಕ್ರಂ, ದಿವ್ಯಾ (ರಂಗಾಯಣ), ಚಂದನ್, ಹೇಮಂತ್, ಮಂಜು, ಪ್ರಿಯಾಂಕ ಮುಂತಾದವರಿದ್ದಾರೆ.
Discussion about this post