Read - < 1 minute
ಶ್ರೀನಗರ, ಅ.19: ಜಮ್ಮು-ಕಾಶ್ಮೀರದ ಬಾರಾಮುಲ್ಲಾದಲ್ಲಿ ಭದ್ರತಾ ಸಿಬ್ಬಂದಿ, ಉಗ್ರರ ಅಡಗುದಾಣಗಳ ಮೇಲೆ ನಡೆಸಿದ ದಾಳಿ ವೇಳೆ ಚೀನಾ ಧ್ವಜ ಸೇರಿದಂತೆ ಹಲವು ನಿಷೇಧಿತ ವಸ್ತುಗಳು ದೊರಕಿವೆ.
ಹೀಗಾಗಿ ಕಾಶ್ಮೀರ ಗಲಭೆಯ ಹಿಂದೆ ಬರೀ ಪಾಕಿಸ್ತಾನ ಮಾತ್ರವಲ್ಲ ಚೀನಾವು ಇದೆಯೇನೋ ಎಂಬ ಶಂಕೆ ಮೂಡಿದೆ. ಇದರ ಜೊತೆಗೆ ಭಯೋತ್ಪಾದಕರ ಜೊತೆ ನಿಕಟ ಸಂಪರ್ಕ ಹೊಂದಿರುವ ಶಂಕೆಯ ಮೇರೆಗೆ 44 ಜನರನ್ನು ಬಂಧಿಸಲಾಗಿದೆ.
ಬಾರಾಮುಲ್ಲಾದ 10 ಹಳೆಯ ಪಟ್ಟಣದಲ್ಲಿ ಭಾರತೀಯ ಸೇನೆ 12 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿತ್ತು. ಪ್ರತ್ಯೇಕತಾವಾದಿಗಳೆಂದು ಹೇಳಿಕೊಂಡಿರುವ ಕ್ವಾಝಿ ಹಮಾಮ್, ಗಣೈ ಹಮಾಮ್, ಟವೀದ್ ಗುಂಜ್, ಜಮ್ಯಾ ಹಾಗೂ ಇನ್ನಿತರರ ಮನೆಗಳ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಚೀನಾ ದೇಶದ ಧ್ವಜಗಳು, ಎಲ್ ಇಟಿ ಮತ್ತು ಜೆಇಎಂ ಸಂಘಟನೆಗಳ ಪೆಟರ್ ಹೆಡ್ ಪ್ಯಾಡ್ ಹಾಗೂ ಇನ್ನಿತರೆ ನಿಷೇಧಿಕ ವಸ್ತುಗಳು ಸ್ಥಳದಲ್ಲಿ ಪತ್ತೆಯಾಗಿವೆ. ಎಂದು ಹೇಳಲಾಗುತ್ತಿದೆ.
ಉಗ್ರರ ನೆಲೆಗಳಲ್ಲಿ ಚೀನಾ ಧ್ವಜ ದೊರಕಿರುವುದು ಇದೀಗ ಹಲವು ಅನುಮಾಗಳಿಗೆ ಎಡೆಮಾಡಿಕೊಟ್ಟಿದ್ದು, ಕಾಶ್ಮೀರ ಹಿಂಸಾಚಾರದಲ್ಲಿ ಕೇವಲ ಪಾಕಿಸ್ತಾನವಷ್ಟೇ ಅಲ್ಲದೆ, ಚೀನಾ ದೇಶದ ಕೈವಾಡ ಕೂಡ ಇದೆಯೇನೋ ಎಂಬ ಹಲವು ಶಂಕೆಗಳು ಮೂಡತೊಡಗಿದೆ.
ಬರಾಮುಲ್ಲಾದ ಹಳೆಯ ಪಟ್ಟಣದಲ್ಲಿ ಆಕ್ಟೋಬರ್ 17ರಂದು ನಡೆಸಿದ ಕಾರ್ಯಾಚರಣೆಯಲ್ಲಿ 12 ಗಂಟೆಗಳಲ್ಲಿ 700ಕ್ಕೂ ಹೆಚ್ಚು ಮನೆಗಳಲ್ಲಿ ಶೋಧ ನಡೆಸಿದ ಭದ್ರತಾ ಪಡೆ, ಈ ವೇಳೆ ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿರುವ ಶಂಕೆ ಮೇಲೆ 44 ಜನರನ್ನು ಬಂಧಿಸಿದೆ ಎಂದು ಸೇನೆಯ ವಕ್ತಾರರೊಬ್ಬರು ಹೇಳಿದ್ದಾರೆ.
ಈ ದಾಳಿಯಿಂದಾಗಿ ಭಯೋತ್ಪಾದಕರ ಹಲವು ತಾಣಗಳು ಅನಾವರಣಗೊಂಡಿವೆ. ಜೊತೆಗೆ ಕಾರ್ಯಾಚರಣೆ ವೇಳೆ ಪಾಕ್ ಹಾಗೂ ಚೀನಾ ಧ್ವಜಗಳು ದೊರಕಿವೆ. ಅಲ್ಲದೇ ಉಗ್ರ ಸಂಘಟನೆಗಳಿಗೆ ಸಂಬಂಧಿಸಿದ ಕರಪತ್ರಗಳು, ಪೆಟ್ರೋಲ್ ಬಾಂಬ್, ಅಕ್ರಮ ಮೊಬೈಲ್ ಪೋನ್ ಗಳು ಹಾಗೂ ರಾಷ್ಟ್ರ ವಿರೋಧಿ ಪ್ರಚಾರ ಸಾಮಗ್ರಿಗಳನ್ನು ಈ ವೇಳೆ ವಶಕ್ಕೆ ಪಡೆಯಲಾಗಿದೆ.
ಇನ್ನು ಕಾರ್ಯಾಚರಣೆ ವೇಳೆ ಉಗ್ರರೊಂದಿಗೆ ನಿಕಟ ಸಂಪರ್ಕ ಹೊಂದಿರುವ ಶಂಕೆಯ ಮೇರೆಗೆ ಅಧಿಕಾರಿಗಳು 44 ಮಂದಿಯನ್ನು ಬಂಧನಕ್ಕೊಳಪಡಿಸಿ, ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.
ಸೇನೆ ನಡೆಸಿದ ಕಾರ್ಯಾಚರಣೆ ಕುರಿತಂತೆ ಸೇನಾ ಅಧಿಕಾರಿಗಳೇ ಸ್ಪಷ್ಟನೆ ನೀಡಿದ್ದು, ಬಾರಾಮುಲ್ಲಾ ಪ್ರದೇಶದಲ್ಲಿ ಮಂಗಳವಾರ ಸೇನೆ 12 ಗಂಟೆಗಳ ಕಾರ್ಯಾಚರಣೆಯನ್ನು ನಡೆಸಿತ್ತು. ಕಾರ್ಯಾಚರಣೆ ವೇಳೆ ಪಾಕಿಸ್ತಾನ ಹಾಗೂ ಚೀನಾ ದೇಶಗಳ ಧ್ವಜಗಳು ದೊರಕಿವೆ ಅಲ್ಲದೆ, ಉಗ್ರ ಸಂಘಟನೆಗಳಿಗೆ ಸಂಬಂಧಿಸಿದ ಕರಪತ್ರಗಳು, ಪೆಟ್ರೋಲ್ ಬಾಂಬ್ ಗಳು, ಅಕ್ರಮ ಮೊಬೈಲ್ ಫೋನ್ ಗಳು ಹಾಗೂ ಹಲವು ನಿಷೇದಿತ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದ್ದಾರೆ.
ಸೇನೆ, ಪೊಲೀಸರು, ಬಿಎಸ್ಎಫ್ ಮತ್ತು ಸಿಆರ್ ಪಿಎಫ್ ಜಂಟಿಯಾಗಿ ಬಾರಾಮುಲ್ಲಾ ಪ್ರದೇಶದಲ್ಲಿ 12 ಗಂಟೆಗಳ ಕಾಲ ಕಾರ್ಯಾಚರಣೆಯನ್ನು ನಡೆಸಿತ್ತು. ಉಗ್ರರಿಗೆ ಸುರಕ್ಷಿತ ತಾಣವಾಗಿದ್ದ ಬಾರಾಮುಲ್ಲಾದ ಸೂಕ್ಷ್ಮ ಪ್ರದೇಶಗಳ ಮೇಲೆ ದಾಳಿ ನಡೆಸಿದೆ. 700 ಮನೆಗಳನ್ನು ತಪಾಸಣೆ ನಡೆಸಿದೆ ಎಂದು ಸೇನಾ ಅಧಿಕಾರಿಗಳು ಹೇಳಿದ್ದಾರೆ.
Discussion about this post