ಉಡುಪಿ, ಅ.19: ಇಲ್ಲಿನ ಅಲೆವೂರು ಗ್ರಾ.ಪಂ. ನೇತೃತ್ವದಲ್ಲಿ ಸ್ವಚ್ಛ ಭಾರತ್ ಅಭಿಯಾನದ ಅಂಗವಾಗಿ ಸ್ಥಳೀಯ ರಾಂಪುರ ಮತ್ತು ಪಡುಅಲೆವೂರುಗಳಲ್ಲಿ ಸಾರ್ವಜನಿಕರ ಸಹಕಾರದಿಂದ ಶ್ರಮದಾನ ನಡೆಯಿತು.
ಈ ಶ್ರಮದಾನದ ಮೂಲಕ ಸಂಗ್ರಹಿಸಲಾದ ಸುಮಾರು 1 ಟೆಂಪೋದಷ್ಟು ಹಸಿರು ಹುಲ್ಲನ್ನು ಪಯರ್ಾಯ ಪೇಜಾವರ ಮಠದ ವತಿಯಿಂದ ನೀಲಾವರದಲ್ಲಿ ನಡೆಯುತ್ತಿರುವ ಗೋಶಾಲೆಗೆ ನೀಡಲಾಯಿತು. ಈ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿದ ಪಯರ್ಾಯ ಪೇಜಾವರ ಮಠದ ಕಿರಿಯ ಶ್ರೀಗಳಾದ ಶ್ರೀವಿಶ್ವಪ್ರಸನ್ನ ತೀರ್ಥರು ಈ ಶ್ರಮದಾನಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಯುವ ಉದ್ಯಮಿ ಅಜೇಯ ಕಾಮತ್ ಅವರು ಹುಲ್ಲು ಕತ್ತರಿಸುವ ಯಂತ್ರವೊಂದನ್ನು ಪಂಚಾಯತಿಗೆ ಕೊಡುಗೆಯಾಗಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಸ್ಥಳೀಯ ಅಲೆವೂರು ಯುವಕ ಮಂಡಲದ ಹರೀಶ್ ಶೆಟ್ಟಿಗಾರ್, ಅಭಿಮಾನ್ ಸ್ಪೋಟರ್್ಸ ಕ್ಲಬ್ ನ ಉಮೇಶ್ ಶೆಟ್ಟಿಗಾರ್ ಮತ್ತು ಆದಿ ಸ್ಟ್ರೈಕಸರ್್ ನ ಕಿಶನ್ ಶೆಟ್ಟಿಗಾರ್, ಮಂಜೂಷಾ ಚಂಡೆ ಬಳಗ ತಾರಾ ಆಚಾರ್ಯ, ಅಲೆವೂರು ಪಂಚಾಯತ್ ಸದಸ್ಯರಾದ ಶೇಖರ ಆಚಾರ್ಯ, ಸುಧಾಮ, ಪ್ರಶಾಂತ ಆಚಾರ್ಯ, ಪುಷ್ಪಲತಾ, ಶಕುಂತಳ, ಹರೀಶ್ ಶೇರಿಗಾರ್, ಉಪಾಧ್ಯಕ್ಷೆ ಜಯಲಕ್ಷ್ಮೀ ಮತ್ತು ಅಧ್ಯಕ್ಷ ಶ್ರೀಕಾಂತ ನಾಯಕ್ ಭಾಗವಹಿಸಿದ್ದರು.
Discussion about this post