ಗುವಾಹಟಿ, ಸೆ.18: ಕಾಂಗ್ರೆಸ್ ಮುಕ್ತ ಆಡಳಿತ ನಡೆಸುವ ಆಶಾವಾದ ಹೊಂದಿರುವ ಬಿಜೆಪಿ ಪಕ್ಷ ಇದೀಗ ಮಣಿಪುರದಲ್ಲಿ ಪಕ್ಷ ಬಲವರ್ಧನೆಗೆ ಸಕಲ ಸಿದ್ಧತೆ ನಡೆಸಿದೆ. ಮುಂಬರುವ 2 ವರ್ಷಗಳಲ್ಲಿ ಮಣಿಪುರದಲ್ಲಿ ಚುನಾವಣೆ ನಡೆಯಲಿದ್ದು, ಅಕಾರ ಗದ್ದುಗೆಗೇರಲು ಬಿಜೆಪಿ ಶತಪ್ರಯತ್ನಗಳನ್ನು ನಡೆಸಿದೆ.
ಉತ್ತರ ಭಾರತದದಲ್ಲಿ ಕಾಂಗ್ರೆಸ್ ಮುಕ್ತ ಮಾಡುವ ಬಿಜೆಪಿ ಗುರಿಗೆ ಮಣಿಪುರ ಚುನಾವಣೆಯೂ ಕೂಡ ಪ್ರತಿಷ್ಠೆಯ ಕಣವಾಗಿದ್ದು, ಅಕಾರ ಗದ್ದುಗೆಗೆ ಏರಲು ಶತಪ್ರಯತ್ನವನ್ನು ಈಗಾಗಲೇ ಆರಂಭಿಸಿದೆ.
ಇತ್ತೀಚೆಗೆ ಅರುಣಾಚಲ ಪ್ರದೇಶದಲ್ಲಿ ನಡೆದ ರಾಜಕೀಯ ವಿದ್ಯಮಾನ ಬಿಜೆಪಿಗೆ ಬಲ ಬಂದಂತಾಗಿದೆ. ಕಾಂಗ್ರೆಸ್ ಬಹುಮತ ಕಳೆದುಕೊಂಡು ಮತ್ತೊಮ್ಮೆ ಬಹುಮತ ಸಾಬೀತುಪಡಿಸುವ ವೇಳೆ ದಿಢೀರ್ ಬೆಳವಣಿಗೆಯಲ್ಲಿ ಪೆಮಾ ಖಂಡು ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. ಆದರೀಗ ನಡೆದ ಅನಿರೀಕ್ಷಿತ ಬೆಳವಣಿಗೆಯಲ್ಲಿ ಪೆಮಾ ಖಂಡು ನೇತೃತ್ವದ ಸಕರ್ಾರದ 43 ಶಾಸಕರು (ಪಿಪಿಎ) ಪೀಪಲ್ ಪಾಟರ್ಿ ಆಫ್ ಅರುಣಾಚಲಕ್ಕೆ ಸೇರ್ಪಡೆಗೊಂಡಿದ್ದಾರೆ. ಇಡೀ ಸಕರ್ಾರವೇ ತನ್ನ ಪಕ್ಷವನ್ನು ಬದಲಿಸಿದೆ. ಬಿಜೆಪಿ ಬೆಂಬಲಿತ ಪಕ್ಷವಾದ ಪಿಪಿಎ ಪಕ್ಷಕ್ಕೆ ಸೇರ್ಪಡೆಗೊಂಡಿದೆ. ಇದರಿಂದ ಅರುಣಾಚಲದಲ್ಲಿ ಕಾಂಗ್ರೆಸ್ ತನ್ನ ಪ್ರಾಬಲ್ಯ ಕಳೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಉತ್ತರ ರಾಜ್ಯಗಳಲ್ಲಿ ತಮ್ಮ ಸಕರ್ಾರವನ್ನು ಸ್ಥಾಪಿಸಲು ಬಿಜೆಪಿ ಕಾರ್ಯಪ್ರವೃತ್ತಗಿದೆ.
2 ವರ್ಷದಲ್ಲಿ ಚುನಾವಣೆ
ಮುಂದಿನ 2 ವರ್ಷಗಳಲ್ಲಿ ಉತ್ತರದ 5 ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ಈ ಹಿನ್ನೆಲೆ ಬಿಜೆಪಿ ಕಾಂಗ್ರೆಸ್ ಮುಕ್ತವಾಗಿಸಲು ಪಣತೊಟ್ಟಿದ್ದು, ಬಿಜೆಪಿ ವಿರೋ ಕಾಂಗ್ರೆಸ್ ಒಕ್ಕೂಟ ಇರುವ ಪ್ರದೇಶದಲ್ಲಿ ನಾಥರ್್ ಈಸ್ಟ್ ಡೆಮಾಕ್ರಟಿಕ್ ಅಲೈನ್ಸ್ ಕಾರ್ಯಪೃವೃತ್ತವಾಗಿದೆ. ಅಲ್ಲದೇ ಇದೀಗ ನಮ್ಮ ಮೊದಲ ಆದ್ಯತೆ ಮಣಿಪುರಕ್ಕೆ ಎಂದು ಎನ್ಇಡಿಎ ಸಂಚಾಲಕ ಅಹಿಂತ್ ಬಿಸ್ವಾ ಶರ್ಮ ಹೇಳಿದ್ದಾರೆ.
ಮಣಿಪುರದಲ್ಲಿ 15 ವರ್ಷದಿಂದ ಆಡಳಿತದಲ್ಲಿರುವ ಕಾಂಗ್ರೆಸ್ನ್ನು ಉರುಳಿಸಲು ಬಲವಾದ ಕಾರ್ಯಕ್ರಮವನ್ನೇ ರೂಪಿಸಬೇಕಿದೆ. ಹಿರಿಯ ಕಾಂಗ್ರೆಸ್ ಮುಖಂಡರೋರ್ವರು ನಮ್ಮೊಂದಿಗೆ ಸೇರಿದ್ದಾರೆ. ಇದು ಎಲ್ಲರಿಗೆ ಬಾಗಿಲು ತೆರೆದಂತೆ ಅಲ್ಲ. ಆದರೆ ಇದರಿಂದ ನಮ್ಮ ಹೋರಾಟಕ್ಕೆ ಬಲ ಸಿಕ್ಕಿದಂತಾಗಿದೆ ಎಂದು ಅಸ್ಸಾಂ ಹಣಕಾಸು ಸಚಿವರೂ ಆದ ಬಿಸ್ವಾ ಹೇಳಿದ್ದಾರೆ.
ಸ್ವತಂತ್ರವಾಗಿ ಸ್ಪರ್ಧೆ.
ಬಿಜೆಪಿ ಸ್ವತಂತ್ರವಾಗಿ ಮಣಿಪುರದಲ್ಲಿ ಚುನಾವಣೆ ಎದುರಿಸಲಿದೆ. ಕಳೆದ ಬಾರಿ ಅಸ್ಸಾಂನಲ್ಲಿ ನಡೆದಂತೆ ಇಲ್ಲಿಯೂ ನಡೆಯಲಿದೆ. ಅಸ್ಸಾಂನಲ್ಲಿ ಕಾಂಗ್ರೆಸ್ ಹಿಡಿತವನ್ನು ತಪ್ಪಿಸಿ ಬಿಜೆಪಿ ಅಕಾರಕ್ಕೆ ಬಂದಿದ್ದು, ಈ ಬಾರಿಯೂ ಇದೇ ರೀತಿ ಆಗಲಿದೆ ಎಂದು ಹೇಳಿದ್ದಾರೆ.
ಅಲ್ಲದೇ ಬಿಜೆಪಿ ನಾಗಾ ಪೀಪಲ್ ಫ್ರಂಟ್ (ಎನ್ಪಿಎಫ್) ನೊಂದಿಗೆ ಸೀಟುಗಳನ್ನು ಹಂಚಿಕೊಳ್ಳುವುದಿಲ್ಲ. ಎನ್ಪಿಎಫ್ ಪಕ್ಷ ನಮ್ಮೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದೆ. ಬಿಜೆಪಿ ಹಾಗೂ ಎನ್ಪಿಎಫ್ ನಡುವೆ ಯಾವುದೇ ರೀತಿಯ ಚುನಾವಣಾ ಹೊಂದಾಣಕೆ ನಡೆಯುವುದಿಲ್ಲ ಎಂದು ಹೇಳಿದ್ದಾರೆ. ಕಳೆದ ಬಾರಿ ಎನ್ಪಿಎಫ್ ನಾಗಾ ಜನರು ಹೆಚ್ಚಿರುವ ಪ್ರದೇಶದಲ್ಲಿ ಸ್ಪಧರ್ೆಗೆ ಇಳಿದಿತ್ತು. ಇಂದು ಅವರು ಸ್ವತಂತ್ರವಾಗಿ ಸ್ಪಧರ್ೆಗೆ ಇಳಿಯಲಿದ್ದಾರೆ. ಆದರೂ ಬಿಜೆಪಿ ಯಾವುದೇ ಒಕ್ಕೂಟವನ್ನು ರಚಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಮಣಿಪುರದಲ್ಲಿ ಹೆಚ್ಚಿರುವ ಮೆಟೈ ಸಮುದಾಯದ ಬಗ್ಗೆ ಹೆಚ್ಚು ಕಾಳಜಿ ವಹಸಿಬೇಕಿದೆ. ಅಲ್ಲದೇ ನಾಗಾ ಜನರ ಬಗ್ಗೆ ಗಮನಹರಿಸುವುದು ಅಗತ್ಯವಿದೆ. ಒಟ್ಟಾರೆ ಮಣಿಪುರದಲ್ಲಿ ಬಿಜೆಪಿ ತನ್ನ ಸ್ಥಾನ ಭದ್ರಪಡಿಸಿಕೊಳ್ಳುವತ್ತ ಗಮನಹರಿಸಬೇಕಿದೆ ಎಂದು ಶರ್ಮ ಹೇಳಿದ್ದಾರೆ.
Discussion about this post